ಭುವನೇಶ್ವರ: ಏಪ್ರಿಲ್ 18 ರಂದು ನಡೆಯಲಿರುವ 61ನೇ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುವ 30 ರಾಜ್ಯಗಳ ಸ್ಪರ್ಧಿಗಳು ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರೀಯಲ್ ಟೆಕ್ನಾಲಜಿ (ಕೆಐಐಟಿ) ಕ್ಯಾಂಪಸ್ಗೆ ಆಗಮಿಸಿದ್ದಾರೆ.

ಪೂರ್ವ ಭಾರತದ ವಿಶ್ವವಿದ್ಯಾಲಯವೊಂದರಲ್ಲಿ ಇಂತಹ ಸ್ಪರ್ಧೆ ಈ ವರೆಗೆ ನಡೆದಿಲ್ಲ. ಕೆಐಐಟಿ ಕ್ಯಾಂಪಸ್ನಲ್ಲಿ ಪ್ರತಿಷ್ಠಿತ ಕಾರ್ಯಕ್ರಮ ಮೊದಲನೇ ಬಾರಿ ಆಯೋಜನೆಯಾಗಿದೆ.

ಗ್ರ್ಯಾಂಡ್ ಫಿನಾಲೆಯು ಏಪ್ರಿಲ್ 18 ರಂದು ನಡೆಯಲಿದ್ದು, ಸ್ಪರ್ಧಿಗಳು ಕೆಐಐಟಿ ಮತ್ತು ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಕೆಐಎಸ್ಎಸ್) ವಿಶ್ವವಿದ್ಯಾಲಯದಲ್ಲೇ ಉಳಿಯಲಿದ್ದಾರೆ.

ಬೀಚ್ನಲ್ಲಿ ಪಾರಂಪರಿಕ ನಡಿಗೆ

ಪುರಿ, ಕೊನಾರ್ಕ್ ಸೂರ್ಯ ದೇವಾಲಯ ಮತ್ತು ಚಂದ್ರಭಾಗ ಬೀಚ್ಗೆ ಭೇಟಿ ನೀಡುವ ಸ್ಪರ್ಧಿಗಳು ಒಡಿಶಾದ ಐತಿಹಾಸಿಕ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಗ್ಗೆ ತಿಳಿಯಲಿದ್ದಾರೆ. ಪುರಿ ಬೀಚ್ ಮತ್ತು ಚಂದ್ರಭಾಗ ಬೀಚ್ನಲ್ಲಿ ಪಾರಂಪರಿಕ ನಡಿಗೆಯಲ್ಲೂ ಭಾಗವಹಿಸಲಿದ್ದಾರೆ. ಅಲ್ಲದೆ ಮುಕ್ತೇಶ್ವರ ದೇವಾಲಯದಲ್ಲಿ ಮತ್ತೊಂದು ಪಾರಂಪರಿಕ ನಡಿಗೆಯಲ್ಲಿ ಭಾಗವಹಿಸುತ್ತಾರೆ.

ಪಣ ಸಂಕ್ರಾಂತಿ ಮತ್ತು ಒಡಿಯಾ ಹೊಸ ವರ್ಷವನ್ನು ಏಪ್ರಿಲ್ 14 ರಂದು ಆಚರಿಸಲಾಗುತ್ತದೆ. ಇದೇ ವೇಳೆ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸ್ಪರ್ಧಿಗಳು ಆ ದಿನ ಸಾಂಪ್ರದಾಯಿಕ ಒಡಿಯಾ ಪದ್ಧತಿಗಳನ್ನು ಆಚರಿಸುತ್ತಾರೆ. ಒಡಿಯಾ ಪಾಕಪದ್ಧತಿಯನ್ನು ಸವಿಯಲಿದ್ದಾರೆ. ಒಡಿಶಾದ ಪ್ರಸಿದ್ಧ ಸವಿಯಾದ ಛೇನಾ ಪೋಡಾವನ್ನು ಸವಿಯುವ ಮೂಲಕ ವಿಶೇಷ 'ಛೇನಾ ಪೋಡಾ ಉತ್ಸವ'ಕ್ಕೂ ಸಾಕ್ಷಿಯಾಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.