ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Miss World 2021: ಭಾರತೀಯ ಸ್ಪರ್ಧಿಗೂ ಕೋವಿಡ್; ವಿಶ್ವ ಸುಂದರಿ ಫೈನಲ್ ಮುಂದೂಡಿಕೆ

Last Updated 17 ಡಿಸೆಂಬರ್ 2021, 5:48 IST
ಅಕ್ಷರ ಗಾತ್ರ

ಸ್ಯಾನ್ ಜುವಾನ್: ಹಲವು ಸ್ಪರ್ಧಿಗಳು ಹಾಗೂ ಸಹಾಯಕ ಸಿಬ್ಬಂದಿಗಳಲ್ಲಿ ಕೋವಿಡ್ ಕಾಣಿಸಿಕೊಂಡಹಿನ್ನೆಲೆಯಲ್ಲಿ 'ವಿಶ್ವ ಸುಂದರಿ 2021' ಫೈನಲ್ ಸ್ಪರ್ಧೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಈ ನಡುವೆ ಮಿಸ್ ವರ್ಲ್ಡ್‌ನಲ್ಲಿಸ್ಪರ್ಧಿಸುತ್ತಿರುವ ಭಾರತದ ಸುಂದರಿ ಮಾನಸ ವಾರಾಣಸಿ ಅವರಿಗೂ ಕೋವಿಡ್ ತಗುಲಿರುವುದನ್ನು ಮಿಸ್ ಇಂಡಿಯಾ ಸಂಸ್ಥೆ ಖಚಿತಪಡಿಸಿದೆ.

ಇದನ್ನೂ ಓದಿ:21 ವರ್ಷಗಳ ಬಳಿಕ ಭಾರತಕ್ಕೆ ಭುವನ ಸುಂದರಿ ಪಟ್ಟ; ಹರ್ನಾಜ್ ಸಂಧು ಮಿಸ್ ಯುನಿವರ್ಸ್

ಸ್ಪರ್ಧಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪೋರ್ಟೊ ರಿಕೊದಲ್ಲಿ ಸಾಗಿದವಿಶ್ವ ಸುಂದರಿ ಫೈನಲ್ಸ್ಪರ್ಧೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಗುರುವಾರದಂದು ಮಿಸ್ ವರ್ಲ್ಡ್ ಸ್ಪರ್ಧೆ ಆಯೋಜನೆಯಾಗಬೇಕಿತ್ತು. ಈಗ ಮುಂಬರುವ 90 ದಿನಗಳೊಳಗೆ ಫೈನಲ್ ಸ್ಪರ್ಧೆಯನ್ನು ಮರುನಿಗದಿಪಡಿಸುವುದಾಗಿ ಪ್ರಕಟಣೆಯಲ್ಲಿ ಖಚಿತಪಡಿಸಿದೆ.

ಮತ್ತಷ್ಟು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಶಸ್ತಿ ಸುತ್ತನ್ನು ಮುಂದೂಡಲು ನಿರ್ಧರಿಸಲಾಗಿದೆ. ಕೋವಿಡ್ ಸೋಂಕಿತರಾದ ಸ್ಪರ್ಧಿಗಳನ್ನು ಪ್ರತ್ಯೇಕವಾಸದಲ್ಲಿರಲು ಸೂಚಿಸಲಾಗಿದೆ.ಈಗ ಕ್ವಾರಂಟೈನ್ ಬಳಿಕ ವೈದ್ಯಕೀಯ ತಂಡದ ಸೂಚನೆಯಂತೆ ಸ್ಪರ್ಧಿಗಳು ತಮ್ಮ ತಮ್ಮ ದೇಶಗಳಿಗ ಹಿಂತಿರುಗುತ್ತಾರೆ ಎಂದು ಹೇಳಿದೆ.

ವಿಶ್ವ ಸುಂದರಿ ಕಿರೀಟಕ್ಕಾಗಿ ಸ್ಪರ್ಧಿಗಳು ಮರಳುವುದನ್ನು ಎದುರು ನೋಡುತ್ತಿದ್ದೇವೆ ಎಂದು ಮಿಸ್ ವರ್ಲ್ಡ್ ಲಿಮಿಟೆಡ್ ಸಿಇಒ ಜೂಲಿಯಾ ಮಾರ್ಲೆ ತಿಳಿಸಿದ್ದಾರೆ.

ಭಾರತೀಯ ಸುಂದರಿಗೂಕೋವಿಡ್...
'ಸ್ಪರ್ಧಿಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಮಿಸ್ ವರ್ಲ್ಡ್ ಸಂಸ್ಥೆಯು ವಿಶ್ವ ಸುಂದರಿ ಫೈನಲ್ ಸ್ಪರ್ಧೆಯನ್ನು ಮುಂದೂಡುವ ನಿರ್ಧಾರವನ್ನು ಕೈಗೊಂಡಿದೆ. ಸುಂದರಿಮಾನಸ ವಾರಾಣಸಿ ಅವರಿಗೂ ಕೊರೊನಾ ವೈರಸ್ ಸೋಂಕು ತಗುಲಿದ್ದು, ಪ್ರತ್ಯೇಕವಾಸದಲ್ಲಿದ್ದಾರೆ. ಕಠಿಣ ಪರಿಶ್ರಮ ಹಾಗೂ ಅರ್ಪಣಾ ಮನೋಭಾವದ ಹೊರತಾಗಿಯೂ ಆಕೆಗೆ ವಿಶ್ವ ವೇದಿಕೆಯಲ್ಲಿ ಸ್ಪರ್ಧಿಸುವ ಅವಕಾಶ ನಷ್ಟವಾಗಲಿದೆ ಎಂಬ ಆತಂಕ ಕಾಡಿತ್ತು. ಆದರೆ ಸ್ಪರ್ಧಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ದಿಟ್ಟ ನಿರ್ಧಾರ ತೆಗೆದುಕೊಂಡಿರುವ ಜೂಲಿಯಾ ಮಾರ್ಲೆ ಅವರಿಗೆ ಅಭಿನಂದನೆಗಳು. ಎಲ್ಲದಕ್ಕಿಂತಲೂ ಮಿಗಿಲಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವ ನಿಮ್ಮ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಕೋವಿಡ್ ಬಾಧಿತರೆಲ್ಲರೂ ಬೇಗನೇ ಚೇತರಿಸಿಕೊಳ್ಳಲಿ ಎಂದು ಶುಭ ಹಾರೈಸುತ್ತೇವೆ. ಮಾನಸ ಅವರನ್ನು ಬಲಶಾಲಿ, ಆರೋಗ್ಯಕರ ಹಾಗೂ ಸಂತೋಷದಿಂದ ಮತ್ತೆ ಕಳುಹಿಸಿ ಕೊಡಲಿದ್ದೇವೆ' ಎಂದು ಮಿಸ್ ಇಂಡಿಯಾ ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT