ನವಿಲುಗರಿ, ನಗವಾದ ಪರಿ

7

ನವಿಲುಗರಿ, ನಗವಾದ ಪರಿ

Published:
Updated:
Deccan Herald

ದಿನನಿತ್ಯದ ಬಳಕೆಗೆ ಬಂಗಾರದ ಕಿವಿಯೋಲೆ, ಉಂಗುರ, ಚೈನ್‌, ಬ್ರೆಸ್‌ಲೆಟ್‌... ಹೀಗೆ ಪ್ರತಿದಿನ ಒಂದೇ ರೀತಿಯ ವಸ್ತುಗಳನ್ನು ಧರಿಸಲು ಇಷ್ಟಪಡದ ಹುಡುಗಿಯರಿಗೆ ಇಷ್ಟವಾಗುವಂತಹ ನವಿಲು ಗರಿಗಳ ವಿನ್ಯಾಸದ ಆಭರಣ ‘ಪಿಕಾಕ್‌ ಕಲೆಕ್ಷನ್‌ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಈಗ ವಿದೇಶಗಳಲ್ಲಿಯೂ ಸಹ ನವಿಲುಗರಿಯ ಆಭರಣಗಳ ಟ್ರೆಂಡ್‌ ಫ್ಯಾಷನ್‌ ಪ್ರಿಯರಿಗೆ ಅಚ್ಚುಮೆಚ್ಚಿನದ್ದಾಗಿದೆ.

ಸೌಂದರ್ಯಕ್ಕೆ ಮತ್ತೊಂದು ಹೆಸರು ನವಿಲು. ಆಭರಣದಲ್ಲೂ ನವಿಲಿನ ನರ್ತನ ಆರಂಭವಾಗಿದ್ದು, ಕಿವಿಯೋಲೆ, ಸರ, ನೆಕ್ಲೇಸ್ ಹೀಗೆ ಎಲ್ಲಾ ಮಾದರಿಗಳಲ್ಲಿಯೂ ನವಿಲಿನ ಗರಿಗಳ ವಿನ್ಯಾಸದಂತಹ ಆಭರಣಗಳಿಗೆ ಭಾರಿ ಬೇಡಿಕೆ ಇದೆ. ಸೀರೆ, ಸಲ್ವಾರ್‌ಗಳಿಗೆ ನವಿಲಿನ ವಿನ್ಯಾಸದ ಪೆಂಡೆಂಟ್‌ಗಳು ಗ್ರ್ಯಾಂಡ್ ಲುಕ್ ನೀಡಿದರೆ, ನವಿಲು ಗರಿಯಂತಹ ಕಿವಿಯೋಲೆ ಕುರ್ತಾ, ಜೀನ್ಸ್‌, ಚುಡಿದಾರ್‌ ಹೀಗೆ ಎಲ್ಲಾ ಆಧುನಿಕ ಹಾಗೂ ಸಾಂಪ್ರದಾಯಿಕ ಬಟ್ಟೆಗಳಿಗೆ ಸರಿಹೊಂದುತ್ತವೆ. 

ಧರಿಸುವ ಉಡುಪಿನಿಂದ ಟೇಬಲ್‌ವೇರ್‌ವರೆಗೆ ನವಿಲು ಗರಿ ವಿನ್ಯಾಸ ಪ್ರಸಿದ್ಧಿ ಪಡೆದಿದೆ. ನವಿಲಿನ ನಾನಾ ಚಿತ್ತಾರ ಕಣ್ಮನ ಸೆಳೆಯುವುದಲ್ಲದೇ, ನೋಡಲು ವರ್ಣರಂಜಿತವಾಗಿ ಕಾಣುತ್ತದೆ. ನಾನಾ ಶೈಲಿಯ ಈ ವಿನ್ಯಾಸಗಳು ಈಗಾಗಲೇ ಹಂಗಾಮ ಎಬ್ಬಿಸಿದ್ದು, ಪಾರ್ಟಿವೇರ್‌ ಮಾತ್ರವಲ್ಲ, ಕ್ಯಾಶುವಲ್‌ ಉಡುಪುಗಳಿಗೂ ಸೂಟ್‌ ಆಗುವಂತಿವೆ. 

ಉಂಗುರ, ಹೇರ್‌ಬ್ಯಾಂಡ್‌, ಹೇರ್‌ಸ್ಟೀಕ್‌, ಬ್ರೌಚ್‌, ಬಳೆಗಳು, ಚಪ್ಪಲಿ, ಸೊಂಟಬಂಧಿ, ಪರ್ಸ್‌, ಹೇರ್‌ಬೆಲ್ಟ್‌ ಕ್ಲೀಪ್‌,  ಪೀಕಾಕ್‌ ಐ ಲ್ಯಾಶ್‌ ಇವುಗಳಲ್ಲಿಯೂ ನವಿಲು ವಿನ್ಯಾಸ ಪ್ರಾಮುಖ್ಯತೆ ಪಡೆದಿದೆ. ಮದುವೆ, ಪಾರ್ಟಿ ಮುಂತಾದ ಸಮಾರಂಭಗಳಿಗೆ ಹೋಗುವಾಗ ಕೇವಲ ಒಂದೇ ಒಂದು ಪಿಕಾಕ್‌ ಜ್ಯುವೆಲ್ಲರಿ ತೊಟ್ಟರೂ ಚಂದ ಕಾಣುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !