ಹೆಣ್ಣುಮಕ್ಕಳ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವುದು ಸೀರೆ ಎಂದರೆ ತಪ್ಪಾಗಲಾರದು. ಭಾರತೀಯ ಪರಂಪರೆಯಲ್ಲಿ ಎಷ್ಟೇ ಮಾರ್ಡನ್ ಆಗಿದ್ದರೂ ಶುಭ ಸಮಾರಂಭಗಳಲ್ಲಿ ಸೀರೆ ಉಡುವುದು ವಾಡಿಕೆ. ಸೀರೆಯ ಲುಕ್ ನಿರ್ಧಾರವಾಗುವುದು ಅದರ ಬಾರ್ಡರ್ನಿಂದ (ಅಂಚು) ಎನ್ನಬಹುದು. ಹಾಗಾದರೆ ಸೀರೆ ಆಯ್ಕೆಯಲ್ಲಿ ಅಂಚುಗಳು ಎಷ್ಟು ಮುಖ್ಯ, ಅಜ್ಜಿಯ ಕಾಲದಿಂದ ಹಿಡಿದು ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣರವರೆಗೂ ಯಾವ ರೀತಿ ಸೀರೆ ಬಾರ್ಡರ್ಗಳಲ್ಲಿ ಬದಲಾವಣೆಗಳಾಗಿವೆ ಎಂಬುವುದನ್ನು ನೋಡುವುದಾದರೆ

ಸಾಂಪ್ರದಾಯಿಕ ರೇಷ್ಮೆ ಸೀರೆ

ಅಜ್ಜಿಯ ಕಾಲದಲ್ಲಿ ಸೀರೆಯ ಬಾರ್ಡರ್ಗಳು ಆಕೆಯ ಕುಟುಂಬದ ಘನತೆ ಮತ್ತು ಪ್ರಾದೇಶಿಕ ಸಂಸ್ಕೃತಿಯನ್ನು ಹೇಳುತ್ತಿತ್ತು. ಅಂದಿನ ಕಾಲದಲ್ಲಿ 'ಅಸಲಿ ಜರಿ' ಎಂದರೆ ಬೆಳ್ಳಿ ಎಳೆಗಳ ಮೇಲೆ ಚಿನ್ನದ ಲೇಪನ ಮಾಡಿದ ದಾರಗಳು. ಕಾಂಜೀವರಂ ಸೀರೆಗಳಲ್ಲಿ ಬಾರ್ಡರ್ಗಳು ತುಂಬಾ ಗಾಢವಾಗಿರುತ್ತಿತ್ತು (12 ಇಂಚುಗಳವರೆಗೆ). ಇದನ್ನು 'ಪೇಟೆ' ಬಾರ್ಡರ್ ಎನ್ನುತ್ತಿದ್ದರು.

ಕಾಂಜೀವರಂ ಮತ್ತು ಮೈಸೂರು ಸಿಲ್ಕ್ ಸೀರೆಗಳಲ್ಲಿ ದೊಡ್ಡ ಜರಿ ಬಾರ್ಡರ್ಗಳಿರುತ್ತಿದ್ದವು. 8 ರಿಂದ 12 ಇಂಚು ಅಗಲದ ಬಾರ್ಡರ್ಗಳು ಚಾಲ್ತಿಯಲ್ಲಿದ್ದವು. ಇವುಗಳಲ್ಲಿ ಚಿನ್ನ ಲೇಪಿತ ಬೆಳ್ಳಿ ದಾರಗಳನ್ನು ಬಳಸಲಾಗುತ್ತಿತ್ತು.

ಟೆಂಪಲ್ ಮೊಟಿಫ್ಸ್ ಎಂದರೆ ಸೀರೆಯ ಅಂಚಿನಲ್ಲಿ ದೇವಸ್ಥಾನದ ಗೋಪುರದ ಆಕಾರದ ತ್ರಿಕೋನ ವಿನ್ಯಾಸಗಳು ಎವರ್ಗ್ರೀನ್ ಫ್ಯಾಷನ್. ಇದು ಇಂದಿಗೂ ಶಾಸ್ತ್ರೋಕ್ತ ಸಮಾರಂಭಗಳಿಗೆ ಹೇಳಿಮಾಡಿಸಿದಂತೆ ಇರುತ್ತದೆ.

ಬಾರ್ಡರ್ನಲ್ಲೇ ನವಿಲು, ಆನೆ ಮತ್ತು ಗಿಣಿಗಳ ಚಿತ್ರಗಳನ್ನು ನೇಯುವ ಮೂಲಕ ಪ್ರಕೃತಿಯನ್ನು ಸೀರೆಯ ಮೇಲೆ ತರಲಾಗುತ್ತಿತ್ತು. ಇದು ಸೀರೆಗಳ ಅಂದವನ್ನು ಮತ್ತಷ್ಟು ಹೆಚ್ಷಿಸುತ್ತಿತ್ತು. ಈಗಲೂ ಈ ಟ್ರೆಂಡ್ ಇದೆ.

90 ದಶಕದ ಸಿನಿಮಾ ಕ್ರಾಂತಿ- ಲೇಸ್ ಮತ್ತು ಪ್ಯಾಚ್ ವರ್ಕ್

90ರ ದಶಕದಲ್ಲಿ ಸಿನಿಮಾಗಳು ಜನರ ಮೇಲೆ ಪ್ರಭಾವ ಬೀರಿದ್ದು ನಿಜ. ನಟಿಯರ ಸೀರೆ, ಆಭರಣ, ಹೇರ್ಸ್ಟೈಲ್ ಎಲ್ಲವನ್ನೂ ಮಹಿಳೆಯರು ಅನುಸರಿಸುತ್ತಿದ್ದರು. ಇದು ಮುಂದೆ ಟ್ರೆಂಡ್ ಆಗಿ ಬದಲಾಯಿತು. ಹೀಗಾಗಿಯೇ ಸೀರೆ ಲೋಕದಲ್ಲಿ ಸಿನಿಮಾ ಪ್ರಭಾವದಿಂದಾಗಿ ಬಾರ್ಡರ್ಗಳಲ್ಲಿ ಬದಲಾವಣೆ ಬಂತು. ಸೀರೆಗೆ ಅದ್ದೂರಿತನ ನೀಡಲು ಅಂಚಿಗೆ ವೆಲ್ವೆಟ್ ಪಟ್ಟಿಗಳನ್ನು ಸೇರಿಸುವುದು ಶುರುವಾಯಿತು. ಗೋಟಾ ಪಟ್ಟಿ ಎಂದರೆ ರಾಜಸ್ಥಾನಿ ಮೂಲದ ಗೋಲ್ಡನ್ ಲೇಸ್ಗಳು ಸಾದಾ ಜಾರ್ಜೆಟ್ ಮತ್ತು ಶಿಫಾನ್ ಸೀರೆಗಳಿಗೆ ಹೊಸ ರೂಪ ನೀಡಿದವು.

ಕಾಂಟ್ರಾಸ್ಟ್ ಕಲರ್ ಮ್ಯಾಜಿಕ್; ಸೀರೆ ಹಸಿರಿದ್ದರೆ ಬಾರ್ಡರ್ ಕೆಂಪು ಅಥವಾ ನೇರಳೆ ಬಣ್ಣದಲ್ಲಿರುವ 'ಕಾಂಟ್ರಾಸ್ಟ್' ಶೈಲಿ ಆಗಿನ ಕಾಲದಲ್ಲೂ ಭಾರಿ ಜನಪ್ರಿಯತೆ ಪಡೆದುಕೊಂಡಿತ್ತು.

ಇಕ್ಕತ್ ಮತ್ತು ಪಟೋಲ ಬಾರ್ಡರ್ಗಳನ್ನು ಒಡಿಶಾ ಮತ್ತು ಗುಜರಾತ್ ಭಾಗದ ಸೀರೆಗಳಲ್ಲಿ ಹೆಚ್ಚಾಗಿ ಕಾಣಬಹುದು. ನೂಲುಗಳಿಗೆ ಮೊದಲೇ ಬಣ್ಣ ಮಾಡಿ, ನಂತರ ನೇಯುತ್ತಾರೆ. ಸೀರೆಗಳಲ್ಲಿ ಬಾರ್ಡರ್ಗಳನ್ನು ಜ್ಯಾಮಿತೀಯ ವಿನ್ಯಾಸದಲ್ಲಿ ಮೂಡಿಸಲಾಗುತ್ತಿತ್ತು.

ಈಗಿನ ಲೇಟೆಸ್ಟ್ ಟ್ರೆಂಡ್- 'ಸ್ಕಲ್ಲಪ್' ಮತ್ತು 'ಕಟ್-ವರ್ಕ್'

ಇಂದಿನ ತಂತ್ರಜ್ಞಾನದಿಂದಾಗಿ ಸೀರೆಯ ಅಂಚುಗಳು ಮತ್ತಷ್ಟು ಅಂದವಾಗಿ ಮೂಡಿಬರುತ್ತಿದೆ. ಸ್ಕಲ್ಲಪ್ ಬಾರ್ಡರ್ ಎಂದರೆ ಬಾರ್ಡರ್ ಸರಳ ರೇಖೆಯಂತಿರದೆ ಅಲೆ ಅಲೆಯಾಗಿರುತ್ತದೆ. ಇದು ಸೀರೆಗೆ ತ್ರೀ-ಡಿ ಫೀಲ್ ನೀಡುತ್ತದೆ. ಸಣ್ಣ ಸಣ್ಣ ಕನ್ನಡಿಗಳು ಮತ್ತು ಹೊಳೆಯುವ ಚಮಕಿಗಳನ್ನು ಬಾರ್ಡರ್ನಲ್ಲಿ ಬಳಸುವುದರಿಂದ ಇದನ್ನು ಮಿರರ್ ವರ್ಕ್ ಮತ್ತು ಸೀಕ್ವಿನ್ಸ್ ಬಾರ್ಡರ್ಗಳು ಎನ್ನಲಾಗುವುದು. ಇದು ರಾತ್ರಿಯ ಪಾರ್ಟಿಗಳಲ್ಲಿ ಸೀರೆ ಕಂಗೊಳಿಸುವಂತೆ ಮಾಡುತ್ತದೆ

'ರಶ್ಮಿಕಾ ಮಂದಣ್ಣ' ಸ್ಟೈಲ್- ಹೊಸ ತಲೆಮಾರಿನ ಫ್ಯಾಷನ್ ಐಕಾನ್

ನಟಿ ರಶ್ಮಿಕಾ ಮಂದಣ್ಣ ಅವರು ಸೀರೆ ಉಡುವ ಶೈಲಿ ಸಿಂಪಲ್ ಆಗಿ ಇರುತ್ತದೆ. ಆಕೆ 'ಕಂಫರ್ಟ್' ಮತ್ತು 'ಸ್ಟೈಲ್'ಗೆ ಹೆಚ್ಚು ಒತ್ತು ನೀಡುತ್ತಾರೆ. ಮಿನಿಮಲಿಸ್ಟಿಕ್ ಬಾರ್ಡರ್ಗಳಲ್ಲಿ ರಶ್ಮಿಕಾ ಮಿಂಚುತ್ತಾರೆ. ದಪ್ಪ ಬಾರ್ಡರ್ಗಳ ಬದಲು ತೆಳುವಾದ ಪೈಪಿಂಗ್ ಅಥವಾ 'ನೋ-ಬಾರ್ಡರ್' ಸೀರೆಗಳನ್ನು ಧರಿಸುತ್ತಾರೆ. ಇದು ಆಧುನಿಕ ಮತ್ತು ಕ್ಲಾಸಿ ಲುಕ್ ನೀಡುತ್ತದೆ.

ಅನ್-ಕನ್ವೆನ್ಷನಲ್ ಬಾರ್ಡರ್; ಸೀರೆಯ ಬಣ್ಣಕ್ಕಿಂತ ಸಂಪೂರ್ಣ ಭಿನ್ನವಾದ ಸೀಕ್ವಿನ್ಸ್ ವರ್ಕ್ ಅಥವಾ ಮುತ್ತಿನ ಬಾರ್ಡರ್ ಇರುವ ಸೀರೆಗಳನ್ನು ರಶ್ಮಿಕಾ ಸಿನಿಮಾ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಧರಿಸಿ ಯುವತಿಯರ ಗಮನ ಸೆಳೆದಿದ್ದಾರೆ.

ನೀವು ಎತ್ತರವಾಗಿ ಕಾಣಬೇಕೆಂದರೆ ರಶ್ಮಿಕಾ ಅವರಂತೆ ತೆಳುವಾದ ಬಾರ್ಡರ್ ಆರಿಸಿಕೊಳ್ಳಿ. ನೀವು ದಪ್ಪನೆಯ ಬಾರ್ಡರ್ ಪ್ರೇಮಿಯಾಗಿದ್ದರೆ, ಅಜ್ಜಿಯ ಕಾಲದ ರೇಷ್ಮೆ ಸೀರೆಗೆ ಆಧುನಿಕ ಬ್ಲೌಸ್ ತೊಟ್ಟು 'ಫ್ಯೂಷನ್ ಲುಕ್' ಪಡೆಯಬಹುದು.

ನಿಮಗೆ ಒಪ್ಪುವ ಬಾರ್ಡರ್ ಸ್ಯಾರಿಗಳನ್ನು ಖರೀದಿಸಿ: ಇಲ್ಲಿದೆ ಟಿಪ್ಸ್

* ಎತ್ತರ ಮತ್ತು ದೇಹದ ಮೈಕಟ್ಟಿಗೆ ತಕ್ಕ ಬಾರ್ಡರ್: ನೀವು ಸ್ವಲ್ಪ ಕುಳ್ಳಗಿದ್ದರೆ, ದಪ್ಪ ಅಥವಾ ಅಗಲವಾದ ಬಾರ್ಡರ್ ಇರುವ ಸೀರೆಗಳನ್ನು ಆಯ್ಕೆಮಾಡಿಕೊಳ್ಳಬೇಡಿ. ಇದರಿಂದ ನೀವು ಮತ್ತಷ್ಟು ಕುಳ್ಳಗಿದ್ದೀರಾ ಎಂಬಂತೆ ಭಾಸವಾಗುತ್ತದೆ. ಬದಲಿಗೆ, ರಶ್ಮಿಕಾ ಮಂದಣ್ಣ ಉಡುವ ಸೀರೆ ಶೈಲಿಯನ್ನು ಗಮನಿಸಿ. ಆಕೆ ತೆಳು ಪೈಪಿಂಗ್ ಬಾರ್ಡರ್ ಅಥವಾ ಬಾರ್ಡರ್ ಇಲ್ಲದ ಸೀರೆಗಳನ್ನು ಆರಿಸಿಕೊಳ್ಳುತ್ತಾರೆ. ಇದರಿಂದ ಎತ್ತರವಾಗಿ ಮತ್ತು ಸ್ಲಿಮ್ ಆಗಿ ಕಾಣುತ್ತಾರೆ.

ಎತ್ತರವಿರುವವರಿಗೆ: ನೀವು ಎತ್ತರವಾಗಿದ್ದರೆ ಅಗಲವಾದ ಜರಿ ಅಥವಾ ಕಸೂತಿ ಬಾರ್ಡರ್ ಇರುವ ಸೀರೆಗಳು ನಿಮಗೆ ಅದ್ಭುತವಾಗಿ ಒಪ್ಪುತ್ತವೆ.

* ಕಚೇರಿ, ಸಮಾರಂಭಕ್ಕೆ ತಕ್ಕ ಆಯ್ಕೆ: ಕಚೇರಿಗೆ ಹೋಗುವಾಗ ಅಥವಾ ಪ್ರೆಸೆಂಟೇಶನ್ ನೀಡುವಾಗ ಸಾದಾ ಸೀರೆಗೆ ಸಣ್ಣ ಮ್ಯಾಟ್ ಫಿನಿಶ್ ಬಾರ್ಡರ್ ಅಥವಾ ತ್ರೇಡ್ ವರ್ಕ್ ಬಾರ್ಡರ್ ಇರುವ ಸೀರೆ ಧರಿಸಿ. ಮದುವೆಗೆ ಹೋಗುವಾಗ ಅದರಲ್ಲೂ ರಾತ್ರಿಯ ಪಾರ್ಟಿಗಳಿಗೆ ಸೀಕ್ವಿನ್ಸ್ ಅಥವಾ ಮಿರರ್ ವರ್ಕ್ ಬಾರ್ಡರ್ ಇರುವ ಸೀರೆಗಳು ಬೆಸ್ಟ್. ಸೀರೆ ಪ್ಲೇನ್ ಆಗಿದ್ದರೂ ಬಾರ್ಡರ್ ಹೊಳೆಯುತ್ತಿದ್ದರೆ ನೀವು ಕ್ಯಾಮೆರಾ ಕಣ್ಣಿಗೆ ಹೈಲೈಟ್ ಆಗುತ್ತೀರಿ.

* ಮಾಡರ್ನ್ 'ಸ್ಕಲ್ಲಪ್' ಬಾರ್ಡರ್ ಕ್ರೇಜ್: ಇತ್ತೀಚೆಗೆ ಯುವತಿಯರು ಸ್ಕಲ್ಲಪ್ ಅಥವಾ ಕಟ್-ವರ್ಕ್ ಬಾರ್ಡರ್ ಸೀರೆಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಸಾಂಪ್ರದಾಯಿಕ ಸೀರೆಗೆ ಈ ವರ್ಕ್ 'ವೆಸ್ಟರ್ನ್' ಲುಕ್ ನೀಡುತ್ತದೆ.

ಈ ರೀತಿಯ ಸೀರೆಗೆ ಸ್ಲೀವ್ಲೆಸ್ ಅಥವಾ ಹೈ-ನೆಕ್ ಬ್ಲೌಸ್ ಧರಿಸಿದರೆ ನೀವು ಕಂಪ್ಲೀಟ್ 'ಸೆಲೆಬ್ರಿಟಿ ಲುಕ್' ಪಡೆಯಬಹುದು.

* ಬಾರ್ಡರ್ ಮತ್ತು ಬ್ಲೌಸ್ ಕಾಂಬಿನೇಷನ್: ಸೀರೆಯ ಬಾರ್ಡರ್ ತುಂಬಾ ಅದ್ದೂರಿಯಾಗಿದ್ದರೆ, ನಿಮ್ಮ ಬ್ಲೌಸ್ ಸರಳವಾಗಿರಲಿ. ಒಂದು ವೇಳೆ ಸೀರೆಯ ಬಾರ್ಡರ್ ತೆಳುವಾಗಿದ್ದರೆ, ಬ್ಲೌಸ್ನ ಸ್ಲೀವ್ಗಳಿಗೆ ಬಾರ್ಡರ್ ವಿನ್ಯಾಸವನ್ನು ಬಳಸಿ. ಇದರಿಂದ ಬ್ಲೌಸ್ ಹೈಲೈಟ್ ಮಾಡಿ. ಇದು ಹಳೆ ಮತ್ತು ಹೊಸ ಫ್ಯಾಷನ್ನ ಸಂಯೋಜನೆಯಾಗಿದೆ.

* ರಶ್ಮಿಕಾ ಸ್ಟೈಲ್ 'ಆರ್ಗನ್ಜಾ' ಮ್ಯಾಜಿಕ್: ರಶ್ಮಿಕಾ ಮಂದಣ್ಣ ಹೆಚ್ಚಾಗಿ ಆರ್ಗನ್ಜಾ ಸೀರೆಗಳನ್ನು ಉಡುತ್ತಾರೆ. ಇದಕ್ಕೆ ಬಾರ್ಡರ್ ಇರುವುದಿಲ್ಲ ಅಥವಾ ಕೇವಲ ದಾರದ ಒಂದು ಲೈನಿಂಗ್ ಇರುತ್ತದೆ. ಇದರೊಂದಿಗೆ ಬೆಲ್ಟ್ ಧರಿಸುವುದು ಈಗಿನ ಟ್ರೆಂಡ್. ಬಾರ್ಡರ್ ಇಲ್ಲದ ಸೀರೆಗೆ ಒಂದು ಸ್ಟೈಲಿಶ್ ಬೆಲ್ಟ್ ಹಾಕಿದರೆ ಮಾರ್ಡನ್ ಟಚ್ ಸಿಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.