ಬೇಸಿಗೆಯಲ್ಲಿ ಬಿಸಿಲು ಮತ್ತು ಅತಿಯಾದ ಆರ್ದ್ರತೆಯು (Humidity) ಕೇವಲ ಚರ್ಮದ ಮೇಲಲ್ಲದೆ, ಕೂದಲಿನ ಆರೋಗ್ಯದ ಮೇಲೂ ತೀವ್ರ ಪರಿಣಾಮ ಬೀರುತ್ತದೆ. ಬೆವರು, ಧೂಳು ಮತ್ತು ಸೂರ್ಯನ ನೇರಳಾತೀತ (ಯುವಿ) ಕಿರಣಗಳಿಂದ ಕೂದಲನ್ನು ರಕ್ಷಿಸಿಕೊಳ್ಳುವುದು ಹೇಗೆ?, ಬೇಸಿಗೆ ಕಾಲಕ್ಕೆ ತಕ್ಕಂತೆ ಸರಿಯಾದ ಹೇರ್ಸ್ಟೈಲ್ ಅನ್ನು ಆಯ್ದುಕೊಳ್ಳುವುದರಿಂದ ನಿಮ್ಮ ನಿತ್ಯದ ಕೆಲಸಗಳು ಆರಾಮದಾಯಕವಾಗಿರುತ್ತದೆ, ಇಲ್ಲದಿದ್ದರೆ ಕಿರಿಕಿರಿ ತಪ್ಪಿದಲ್ಲ. ಹಾಗಾದರೆ ಯಾವ ರೀತಯ ಹೇರ್ಸ್ಟೈಲ್ ಮಾಡಿಕೊಂಡರೆ ಹಬೆಯಿಂದ ಕೊಂಚ ಆರಾಮದಾಯಕ ಎನಿಸುತ್ತದೆ ಎಂಬುದನ್ನು ನೋಡುವುದಾದರೆ

1 ಬೇಸಿಗೆ ತಕ್ಕ ಹೇರ್ಸ್ಟೈಲ್

ಬೇಸಿಗೆಯಲ್ಲಿ ಕೂದಲನ್ನು ಬಿಡುವುದಕ್ಕಿಂತ (ಒಪನ್ ಹೇರ್), ಕುತ್ತಿಗೆ ಮತ್ತು ಬೆನ್ನಿನ ಭಾಗಕ್ಕೆ ಗಾಳಿಯಾಡುವಂತೆ ಕೂದಲನ್ನು ಕಟ್ಟುವುದು ಮುಖ್ಯ.

* ಬನ್ ಸ್ಟೈಲ್ಸ್

ಹೈ ಬನ್ ಹೇರ್ಸ್ಟೈಲ್ ಎಂದರೆ ಕೂದಲನ್ನೆಲ್ಲಾ ಒಟ್ಟಿಗೆ ಸೇರಿಸಿ ತಲೆಯ ತುತ್ತತುದಿಯಲ್ಲಿ ಕಟ್ಟುವುದು. ಇದು ಮುಖಕ್ಕೆ ಫ್ರೆಶ್ ಲುಕ್ ನೀಡುತ್ತದೆ ಮತ್ತು ಕುತ್ತಿಗೆಯ ಭಾಗದಲ್ಲಿ ಬೆವರು ಕೂರದಂತೆ ತಡೆಯುತ್ತದೆ. ಮೆಸ್ಸಿ ಬನ್ ಇತ್ತೀಚಿನ ಟ್ರೆಂಡ್. ಕೂದಲನ್ನು ಅಚ್ಚುಕಟ್ಟಾಗಿ ಕಟ್ಟುವ ಬದಲು ಸ್ವಲ್ಪ ಸಡಿಲವಾಗಿ ಕಟ್ಟುವುದು. ಇದು ಕ್ಯಾಶುವಲ್ ಉಡುಪುಗಳಿಗೆ ಜೀನ್ಸ್ ಮತ್ತು ಟೀ ಶರ್ಟ್ಗೆ ಅದ್ಭುತವಾಗಿ ಒಪ್ಪುತ್ತದೆ. ಲೋ ಬನ್ ಹೇರ್ಸ್ಟೈಲ್ ಎನ್ನುವುದು ಕುತ್ತಿಗೆಯ ಬಳಿ ಕೂದಲನ್ನು ಕಟ್ಟುವುದು. ಇದು ಸೀರೆ ಅಥವಾ ಫಾರ್ಮಲ್ ಉಡುಪುಗಳಿಗೆ ವಿಭಿನ್ನ ಲುಕ್ ನೀಡುತ್ತದೆ. ಕೂದಲನ್ನು ಎರಡು ಭಾಗ ಮಾಡಿ ತಲೆಯ ಎರಡು ಬದಿಗಳಲ್ಲಿ ಚಿಕ್ಕದಾಗಿ ಕಟ್ಟುವುದನ್ನು ಸ್ಪೇಸ್ ಬನ್ ಎನ್ನುತ್ತಾರೆ. ಇದು ಕಾಲೇಜು ಹುಡುಗಿಯರಿಗೆ ಫಂಕಿ ಲುಕ್ ನೀಡುತ್ತದೆ.

* ಜಡೆ

ಸಾಂಪ್ರದಾಯಿಕ ಜಡೆ ಹೇರ್ಸ್ಟೈಲ್ ಕೂದಲನ್ನು ಸಿಕ್ಕಾಗದಂತೆ ಕಾಪಾಡುತ್ತದೆ. ಇದು ಸೀರೆಗಳಿಗೆ ಒಪ್ಪುತ್ತದೆ. ಫ್ರೆಂಚ್ ಮತ್ತು ಡಚ್ ಬ್ರೇಡ್ ಹೇರ್ಸ್ಟೈಲ್ ಎಂದರೆ ತಲೆಯ ಮುಂಭಾಗದಿಂದಲೇ ಕೂದಲನ್ನು ಹೆಣೆಯುತ್ತಾ ಬರುವುದು. ಇದು ಕ್ರೀಡಾಪಟುಗಳಿಗೆ ಅಥವಾ ಜಿಮ್ಗೆ ಹೋಗುವವರಿಗೆ ಸೂಕ್ತ, ಏಕೆಂದರೆ ಕೂದಲು ಮುಖದ ಮೇಲೆ ಬರುವುದಿಲ್ಲ. ಫಿಶ್ಟೇಲ್ ಬ್ರೇಡ್ ಹೇರ್ಸ್ಟೈಲ್ ನೋಡಲು ಸಂಕೀರ್ಣವಾಗಿದ್ದರೂ ತುಂಬಾ ಸುಂದರವಾಗಿ ಕಾಣುವ ಈ ವಿನ್ಯಾಸವು ಪಾರ್ಟಿಗಳಿಗೆ ಅಥವಾ ಮದುವೆ ಸಮಾರಂಭಗಳಿಗೆ ಸೂಕ್ತ. ಸೈಡ್ ಬ್ರೇಡ್, ಕೂದಲನ್ನು ಒಂದು ಬದಿಗೆ ತಂದು ಜುಟ್ಟು ಹಾಕುವುದು. ಇದು ಸಡಿಲವಾಗಿರುವುದರಿಂದ ಆರಾಮದಾಯಕವಾಗಿರುತ್ತದೆ.

* ಪೋನಿಟೇಲ್ ವಿಧಗಳು

ಸ್ಲೀಕ್ ಹೈ ಪೋನಿಟೇಲ್ಗಳೆಂದರೆ ಕೂದಲನ್ನು ನೇರವಾಗಿ ಬಾಚಿ ಎತ್ತರಕ್ಕೆ ಕಟ್ಟುವುದು. ಇದು ಮಾಡರ್ನ್ ಉಡುಪುಗಳಿಗೆ ಒಪ್ಪುತ್ತದೆ. ಬಬಲ್ ಪೋನಿಟೇಲ್ಗಳು ಉದ್ದ ಕೂದಲು ಇರುವವರಿಗೆ ಇದು ಬೆಸ್ಟ್. ಪೋನಿಟೇಲ್ ಮಾಡಿದ ನಂತರ ಪ್ರತಿ ಎರಡು ಇಂಚಿಗೆ ಬಣ್ಣದ ರಬ್ಬರ್ ಬ್ಯಾಂಡ್ ಹಾಕಿವುದು ಈ ಹೇರ್ಸ್ಟೈಲ್ನ ವಿಶೇಷ.

2. ಕೂದಲಿನ ಉದ್ದಕ್ಕೆ ತಕ್ಕಂತೆ ಹೇರ್ಸ್ಟೈಲ್ ಆಯ್ಕೆ

ಉದ್ದ ಕೂದಲು ಇರುವವರು ಬೇಸಿಗೆಯಲ್ಲಿ ಕೂದಲನ್ನು ಬಿಡಲೇಬಾರದು. ಜುಟ್ಟು ಅಥವಾ ಬನ್ ಹಾಕಿಕೊಳ್ಳುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.

ಸ್ವಲ್ಪ ಉದ್ದದ ಕೂದಲು ಇರುವವರು 'ಹಾಫ್ ಬನ್' (ಅರ್ಧ ಕೂದಲು ಕಟ್ಟುವುದು, ಅರ್ಧ ಬಿಡುವುದು) ಅಥವಾ ಚಿಕ್ಕ ಜುಟ್ಟು ಹಾಕಿಕೊಳ್ಳಬಹುದು.

ಚಿಕ್ಕ ಕೂದಲು (Short Hair): ಶಾರ್ಟ್ ಹೇರ್ ಇರುವವರಿಗೆ ಬೇಸಿಗೆಯಲ್ಲಿ ನಿರ್ವಹಣೆ ಸುಲಭ. 'ಬಾಬ್ ಕಟ್' ಅಥವಾ 'ಪಿಕ್ಸಿ ಕಟ್' ಬೇಸಿಗೆಯ ಬಿಸಿಲಿಗೆ ಅತ್ಯಂತ ಹಿತಕರ.

3. ಬೇಸಿಗೆಯಲ್ಲಿ ಕೂದಲಿನ ರಕ್ಷಣೆಗಾಗಿ ವಿಶೇಷ ಟಿಪ್ಸ್ಗಳು

ಕೇವಲ ಕೇಶವಿನ್ಯಾಸವಷ್ಟೇ ಸಾಲದು, ಕೂದಲಿನ ಆರೋಗ್ಯವನ್ನೂ ಮುಖ್ಯ. ಬಿಸಿಲಿನಲ್ಲಿ ಹೊರಗೆ ಹೋಗುವಾಗ ಅಗಲವಾದ ಹ್ಯಾಟ್ ಅಥವಾ ಹತ್ತಿಯ ಸ್ಕಾರ್ಫ್ ಬಳಸಿ ಕೂದಲನ್ನು ಮುಚ್ಚಿಕೊಳ್ಳಿ. ಸೂರ್ಯನ ಕಿರಣಗಳು ಕೂದಲಿನ ನೈಸರ್ಗಿಕ ತೈಲವನ್ನು ಒಣಗಿಸಿ ಕೂದಲು ಒರಟಾಗುವಂತೆ (Frizzy hair) ಮಾಡುತ್ತವೆ.

ಹೇರ್ ಸನ್ಸ್ಕ್ರೀನ್: ಮಾರುಕಟ್ಟೆಯಲ್ಲಿ ಈಗ ಕೂದಲಿಗೆ ಹಚ್ಚುವ ಸನ್ಸ್ಕ್ರೀನ್ ಸ್ಪ್ರೇಗಳು ಲಭ್ಯವಿವೆ, ಇವುಗಳನ್ನು ಬಳಸಬಹುದು.

ವಾರಕ್ಕೆ 2-3 ಬಾರಿ ಶಾಂಪೂ: ಬೇಸಿಗೆಯಲ್ಲಿ ತಲೆಬುರುಡೆ (Scalp) ಬೇಗನೆ ಜಿಡ್ಡಾಗುತ್ತದೆ. ಮೃದುವಾದ (Sulphate-free) ಶಾಂಪೂ ಬಳಸಿ ಕೂದಲನ್ನು ಸ್ವಚ್ಛವಾಗಿಡಿ.

ಕಂಡೀಷನರ್ ಬಳಕೆ: ಕೂದಲಿನ ತುದಿಗೆ ಮಾತ್ರ ಕಂಡೀಷನರ್ ಬಳಸಿ. ಇದು ಕೂದಲು ಸಿಕ್ಕಾಗುವುದನ್ನು ತಪ್ಪಿಸುತ್ತದೆ.

ಹೈಡ್ರೇಶನ್: ನೀವು ಎಷ್ಟು ಹೆಚ್ಚು ನೀರು ಕುಡಿಯುತ್ತೀರೋ ಅಷ್ಟು ನಿಮ್ಮ ಕೂದಲಿನ ಬುಡ ಗಟ್ಟಿಯಾಗಿರುತ್ತದೆ. ಆದ್ದರಿಂದ ದಿನಕ್ಕೆ 2-3 ಲೀಟರ್ ನೀರು ಕುಡಿಯಬೇಕು.

ತಣ್ಣೀರಿನ ಸ್ನಾನ: ಬಿಸಿ ನೀರಿನ ಸ್ನಾನ ಕೂದಲನ್ನು ಮತ್ತಷ್ಟು ಒಣಗಿಸುತ್ತದೆ. ಆದ್ದರಿಂದ ತಣ್ಣೀರು ಅಥವಾ ಉಗುರುಬೆಚ್ಚಗಿನ ನೀರು ಬಳಸಿ.

ಕೂದಲಿಗೆ ನಿಯಮಿತವಾಗಿ ಕೊಬ್ಬರಿ ಎಣ್ಣೆ, ಹರಳೆಣ್ಣೆ ಅಥವಾ ಮಾರುಕಟ್ಟೆಯಲ್ಲಿ ಸಿಗುವ ಎಸೆನ್ಷಿಯಲ್ ಆಯಿಲ್ಗಳನ್ನು ಬಳಸಿ.

4 ಬೇಸಿಗೆಯಲ್ಲಿ ಕೂದಲಿನ ಆರೈಕೆ ವೇಳೆ ಈ ತಪ್ಪುಗಳನ್ನು ಮಾಡಬೇಡಿ

ಹೀಟ್ ಸ್ಟೈಲಿಂಗ್ ಬೇಡ: ಹೇರ್ ಡ್ರೈಯರ್, ಸ್ಟ್ರೈಟನಿಂಗ್ ಅಥವಾ ಕರ್ಲಿಂಗ್ ಮಿಷನ್ ಬಳಕೆಯನ್ನು ಬೇಸಿಗೆಯಲ್ಲಿ ಆದಷ್ಟು ಕಡಿಮೆ ಮಾಡಿ. ಇದು ಕೂದಲನ್ನು ಸುಡಬಹುದು.

ಬಿಗಿಯಾದ ರಬ್ಬರ್ ಬ್ಯಾಂಡ್: ಅತಿಯಾದ ಬಿಗಿಯಾಗಿ ಕೂದಲನ್ನು ಕಟ್ಟಬೇಡಿ. ಇದು ಕೂದಲಿನ ಬುಡಕ್ಕೆ ಒತ್ತಡ ಹಾಕಿ ಕೂದಲು ಉದುರುವಂತೆ ಮಾಡುತ್ತದೆ.

ಒದ್ದೆ ಕೂದಲು ಕಟ್ಟಬೇಡಿ: ಸ್ನಾನ ಮಾಡಿದ ತಕ್ಷಣ ಕೂದಲು ಕಟ್ಟಬೇಡಿ. ಇದು ವಾಸನೆಗೆ ಮತ್ತು ಶಿಲೀಂಧ್ರ (Fungal) ಸೋಂಕಿಗೆ ಕಾರಣವಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.