ಭಾನುವಾರ, 11 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆರ್‍ರಾಕೋಟ: ಧರಿಸಿದರೆ ಬದಲಾಗುವ ನೋಟ!

Last Updated 12 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಸರಳವಾದ ಉಡುಗೆ; ಹೆಚ್ಚು ಡಿಸೈನ್‌ಅಥವಾ ಗಾಢಬಣ್ಣವಿಲ್ಲದ ತೀರಾ ಸೌಮ್ಯ ಎನಿಸುವ ಬಟ್ಟೆ. ಆದರೂ ಉಡುಪಿನ ಬಣ್ಣಕ್ಕೆ ಅಥವಾ ಡಿಸೈನ್‌ಗೆ ಹೊಂದುವ ಟೆರ್‍ರಾಕೋಟ ಶೈಲಿಯ ಸರವನ್ನೋ ಅಥವಾ ಕೇವಲ ತುಸು ಉದ್ದದ ಕಿವಿಯೋಲೆಯನ್ನೋ ಹಾಕಿಕೊಳ್ಳಿ. ನಿಮ್ಮ ಒಟ್ಟಾರೆ ನೋಟವೇ ಬದಲಾಗಿ ಬಿಡುತ್ತದೆ!

ಟೆರ್‍ರಾಕೋಟ ಎಂದರೆ, ಬೇಯಿಸಿದ ಮಣ್ಣು ಎಂದರ್ಥ. ಕೈಮಗ್ಗ ಬಟ್ಟೆಗಳಿಗೆ ಇರುವ ಕ್ರೇಜ್‌ ಮತ್ತು ಬೇಡಿಕೆ ಟೆರ್‍ರಾಕೋಟ ಒಡವೆಗೂ ಇದೆ. ಇವನ್ನು ಕೈಮಗ್ಗದ ಉಡುಗೆಗಳೊಂದಿಗೆ ಹೊಂದಿಸಿಕೊಂಡರೆ, ಅದರ ಅಂದವೇ ಬೇರೆ. ಕೈಮಗ್ಗದ ಬಟ್ಟೆಗಳ ಬಳಕೆಮತ್ತು ಟೆರ್‍ರಾಕೋಟದ ಬಳಕೆ ಹಿಂದೆ, ಫ್ಯಾಷನ್‌ ಬಗೆಗೆಗಿನ ಆಸಕ್ತಿ ಮಾತ್ರ ಕಾರಣವಲ್ಲ, ಆ ಎರಡರ ಇತಿಹಾಸಕ್ಕೆ ಇರುವ ದೇಸಿ ಸಂಸ್ಕೃತಿಯೂ ಕಾರಣವಾಗಿದೆ.

ಪರಿಸರ ಸ್ನೇಹಿಯಾದ ಟೆರ್‍ರಾಕೋಟದ ಬಳಕೆ ತುಸು ಕಷ್ಟ ಎನಿಸುವಂಥದ್ದು. ಮಣ್ಣಿನಿಂದ ಮಾಡಿರುವ ಕಾರಣ ಬಿದ್ದರೆ ಮುರಿದು ಹೋಗುವ ಸಂಭವವೇ ಹೆಚ್ಚು. ಇದರ ಖರೀದಿಜೇಬು ಖಾಲಿ ಮಾಡುವ ಬಾಬತ್ತಿನದಲ್ಲ. ಹತ್ತಿ ಬಟ್ಟೆಯಿಂದ ಸುತ್ತಿ ಇಟ್ಟರೂ ಇದನ್ನು ಕಾಪಾಡಿಕೊಳ್ಳಬಹುದು.ವಿವಿಧ ಶೈಲಿಯ, ಬಣ್ಣದ,ವಿನ್ಯಾಸಗಳ ಸರಗಳು, ಕಿವಿಯೋಲೆ, ಬಳೆ, ಬ್ರೇಸ್‌ಲೆಟ್‌, ಹೂಪ್ಸ್‌ಗಳು ಮುಂತಾದ ವೈವಿಧ್ಯಮಯ ಶೈಲಿಯಲ್ಲಿಟೆರ್‍ರಾಕೋಟ ಆಭರಣಗಳು ಸಿಗುತ್ತವೆ. ನೈಸರ್ಗಿಕ ಬಣ್ಣಗಳನ್ನು ಇಲ್ಲಿ ಬಳಸಲಾಗುತ್ತದೆ.

ಟೆರ್‍ರಾಕೋಟ ಒಡವೆಗಳು ಸಾಂಪ್ರದಾಯಿಕ ಅಥವಾ ಮಾಡರ್ನ್‌ ಲುಕ್‌ ಎರಡಕ್ಕೂ ಹೊಂದಿಕೆ ಆಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ಈ ಒಡವೆಗಳು ಮದುವಣಗಿತ್ತಿಯರ ಅಚ್ಚುಮೆಚ್ಚಿನ ಆಯ್ಕೆ ಕೂಡ ಆಗಿದೆ. ಖಾದಿ ಸೀರೆಗಳು, ಕಾಟನ್‌ ಸೀರೆಗಳೊಂದಿಗೂ ಟೆರ್‍ರಾಕೋಟ ಅಂದವಾಗಿ ಕಾಣುತ್ತವೆ. ಅಜ್ರಖ್‌, ಡಾಬು ಪ್ರಿಂಟ್‌ ಇರುವ ಸೀರೆ, ಚೂಡಿದಾರ್, ಉದ್ದನೆಯ ಸ್ಕರ್ಟ್‌ ಜೊತೆಗೂ ಈ ಒಡವೆಗಳು ಸಾಂಪ್ರದಾಯಿಕ ಲುಕ್‌ ನೀಡುತ್ತವೆ.

ಆಫೀಸ್‌ಗೆ ಹೋಗುವಾಗ, ಮೀಟಿಂಗ್‌, ಪಾರ್ಟಿಗಳಿಗೂಟೆರ್‍ರಾಕೋಟದ ಬಳಕೆ ಮಾಡಬಹುದಾಗಿದೆ. ಜೀನ್ಸ್‌ ಹಾಕಿ, ಅದರ ಮೇಲೊಂದು ಟಾಪ್‌ ಹಾಕಿಕೊಂಡಾಗಲೂಮಾಡರ್ನ್‌ ಲುಕ್‌ ನಿಮ್ಮದಾಗುತ್ತದೆ. ಚೂಡಿದಾರ್‌, ಉದ್ದನೆಯ ಸ್ಕರ್ಟ್‌ನೊಂದಿಗೂಟೆರ್‍ರಾಕೋಟದ ಕಾಂಬಿನೇಷನ್‌ ಉತ್ತಮವಾಗಿರುತ್ತದೆ.

ಸೀರೆಯೊಂದಿಗೆ ಮ್ಯಾಚ್‌ ಮಾಡುವಾಗ ಹಲವು ರೀತಿಯ ಬ್ಲೌಸ್‌ನ ವಿನ್ಯಾಸಕ್ಕೂ ಟೆರ್‍ರಾಕೋಟದ ಸರಗಳು ಮ್ಯಾಚ್‌ ಆಗುತ್ತವೆ. ಹೈನೆಕ್‌ ಬ್ಲೌಸ್‌, ಸ್ಲೀವ್‌ಲೆಸ್‌ ಬ್ಲೌಸ್‌ಗಳು, ಬೋಟ್‌ ನೆಕ್‌ ಸೇರಿದಂತೆ ವಿವಿಧ ವಿನ್ಯಾಸದ ಕತ್ತಿನ ರವಿಕೆಗಳ ಜೊತೆಗೆ ಈ ಆಭರಣವನ್ನು ಹೊಂದಿಸಿಕೊಳ್ಳಬಹುದಾಗಿದೆ.

ಟೆರ್‍ರಾಕೋಟ ಶೈಲಿಯ ಒಡವೆಗಳು ಯುವತಿಯ ಅಚ್ಚುಮೆಚ್ಚು ಸರಿ. ಹಾಗೆಯೇ ಇದು ಎಲ್ಲಾ ವಯಸ್ಸಿನವರಿಗೂ ಹೊಂದುವಂಥ ಒಡವೆ ಆಗಿದೆ. ಇದರ ಕ್ರೇಜ್‌ ಹೇಗಿದೆ ಎಂದರೆ, ಇದನ್ನು ಬಿಟ್ಟು ಬೇರೆ ಯಾವುದನ್ನೂ ಧರಿಸದವರೂ ಇದ್ದಾರೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಎಲ್ಲರೂ ಇದನ್ನು ಇಷ್ಟಪಡುತ್ತಾರೆ.

ಟೆರ್‍ರಾಕೋಟ ಒಡವೆ ಧರಿಸಿದಾಗ ಇದರೊಂದಿಗೆ ಬಂಗಾರವನ್ನೋ ಅಥವಾ ಬೇರೆ ಆಭರಣಗಳನ್ನೋ ಬಳಸದಿದ್ದರೆ ಉತ್ತಮ. ಹೀಗೆ ಬಳಕೆ ಮಾಡುವುದುಟೆರ್‍ರಾಕೋಟದ ಅಂದವನ್ನು ಕಡಿಮೆ ಮಾಡಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT