ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಪ್ರತಿಭಾನ್ವೇಷಣೆ

Last Updated 26 ಜೂನ್ 2019, 19:30 IST
ಅಕ್ಷರ ಗಾತ್ರ

ಫ್ಯಾಷನ್‌ ಲೋಕದಲ್ಲಿ ಛಾಪು ಮೂಡಿಸಲು ಬಯಸುವ ಮಹಿಳೆಯರಿಗೆ ವಿಶೇಷ ವೇದಿಕೆ ಯನ್ನು ಫ್ಯಾಷನ್‌ ಟಿವಿ ಒದಗಿಸುತ್ತಿದೆ.

‘ಕಮರ್‌ ಫಿಲ್ಮ್‌ ಫ್ಯಾಕ್ಟರಿ’ ಮೂಲಕ ಪ್ರಸ್ತುತ ಪಡಿಸುತ್ತಿರುವ ‘ವುಮೆನ್ಸ್‌ ಡೇಔಟ್‌ ವಿಥ್‌ ಫ್ಯಾಷನ್‌’ ಎನ್ನುವ ಕಾರ್ಯಕ್ರಮದ ಮೂಲಕ ಮಹಿಳೆಯರಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸುವ ಯತ್ನ ಕೈಗೊಳ್ಳಲಾಗಿದೆ. ’ಸಂಸಾರದ ಜಂಜಾಟದಿಂದ ಹೊರಬಂದು ತಮ್ಮ ಪ್ರತಿಭೆ ಪ್ರದರ್ಶಿಸಲು ‘ಎಫ್‌ಟಿವಿ’ ಅವಕಾಶ ಕಲ್ಪಿಸುತ್ತಿದೆ. ಫ್ಯಾಷನ್‌ ಜಗತ್ತಿಗೆ ಪ್ರವೇಶ ಪಡೆಯಬೇಕು ಎನ್ನುವ ಮಹಿಳೆಯರಿಗೆ ಇದು ಒಂದೆಡೆ ವೇದಿಕೆಯಾದರೆ, ಇನ್ನೊಂದೆಡೆ ಬೆಂಗಳೂರಿನಲ್ಲಿರುವ ಯುವ ವಿನ್ಯಾಸಗಾರರಿಗೂ ಅವಕಾಶ ನೀಡುವ ಉದ್ದೇಶವಾಗಿದೆ’ ಎಂದು ಕಾರ್ಯಕ್ರಮದ ನಿರ್ದೇಶಕ ಶಿವಕುಮಾರ್‌ ತಿಳಿಸಿದರು.

‘ಫ್ಯಾಷನ್‌ ಜಗತ್ತು ಈಗ ಅತಿ ವೇಗದಲ್ಲಿ ಸಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಕಾಣುತ್ತಿರುವ ಬೆಳವಣಿಗೆಯನ್ನು ಬೆಂಗಳೂರಿಗೆ ತಲುಪಿಸಬೇಕು ಎನ್ನುವ ಉದ್ದೇಶ ನಮ್ಮದಾಗಿದೆ. ಪ್ರತಿಯೊಬ್ಬ ಮಹಿಳೆಯಲ್ಲೂ ಹುದುಗಿರುವ ಪ್ರತಿಭೆಯನ್ನು ಹೊರತರಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಫ್ಯಾಷನ್‌ ಟಿ.ವಿ.ಯ ಭಾರತದ ಮಾಲೀಕ ಕುಮಾರ್‌ ತಿಳಿಸಿದರು.

18ರಿಂದ 50 ವರ್ಷದ ಒಳಗಿನ ಎಲ್ಲ ವರ್ಗದ ಮಹಿಳೆಯರಿಗೆ ಇಲ್ಲಿ ಅವಕಾಶವಿದೆ. ಮಾರ್ಜಾಲ ನಡಿಗೆ, ಅಭಿನಯ ಪ್ರದರ್ಶಿಸಬಹುದಾಗಿದೆ. ಆಯ್ಕೆಯಾದವರಿಗೆ ಒಂದು ತಿಂಗಳು ತರಬೇತಿ ನೀಡಲಾಗುವುದು. ಕ್ಯಾಮೆರಾ ಎದುರಿಸುವುದು, ನಟನೆ ಮುಂತಾದ ವಿಷಯಗಳ ಬಗ್ಗೆ ನುರಿತ ತಜ್ಞರಿಂದ ತರಬೇತಿ ದೊರೆಯಲಿದೆ. ಬಳಿಕ ಆಗಸ್ಟ್‌ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ.

ಆಸಕ್ತರು ಭಾವಚಿತ್ರದ ಜತೆ ಸಂಪೂರ್ಣ ವಿವರಗಳನ್ನು ಜುಲೈ 30ರ ಒಳಗೆ reethu.kamarfilmfactory@gmail.com ಕಳುಹಿಸಬೇಕು. ಮೊಬೈಲ್‌ ಸಂಖ್ಯೆ: 9448458041,9180485 39501

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT