ಬೆಳ್ಳಂದೂರು ಕೆರೆ: ಉಲ್ಬಣಿಸಿದ ನೊರೆ

ಶುಕ್ರವಾರ, ಮೇ 24, 2019
29 °C

ಬೆಳ್ಳಂದೂರು ಕೆರೆ: ಉಲ್ಬಣಿಸಿದ ನೊರೆ

Published:
Updated:
Prajavani

ವೈಟ್‌ಫೀಲ್ಡ್‌: ನಗರದಲ್ಲಿ ಸುರಿದ ಮಳೆಯಿಂದಾಗಿ ಬೆಳ್ಳಂದೂರು ಹಾಗೂ ವರ್ತೂರು ಕೆರೆ ಕೊಡಿಗಳಲ್ಲಿ ಮತ್ತೆ ನೊರೆಯ ಸಮಸ್ಯೆ ಕಾಣಿಸಿಕೊಂಡಿದೆ.

ಬೆಳ್ಳಂದೂರು ಕೆರೆಗೆ ಕಾರ್ಖಾನೆ ಮತ್ತು ಬಹುಮಹಡಿ ಕಟ್ಟಡಗಳ ತ್ಯಾಜ್ಯನೀರು ಹರಿದು ಬರುತ್ತಿದೆ. ಅದರೊಂದಿಗೆ ಮಳೆನೀರು ಸೇರಿ ನೊರೆ ಸಮಸ್ಯೆ ಹೆಚ್ಚುತ್ತಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ. 

ಕೆರೆ ಸಂರಕ್ಷಣೆ ಮಾಡುವಂತೆ ಹಲವಾರು ಬಾರಿ ಮನವಿ ಮಾಡಿ, ಪ್ರತಿಭಟನೆಗೆ ಇಳಿದಿದ್ದರೂ ಸರ್ಕಾರ ಸೂಕ್ತ ಕ್ರಮ ವಹಿಸದೆ, ಕೇವಲ ಆಶ್ವಾಸನೆ ನೀಡುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. 

ನೊರೆಯಿಂದ ದುರ್ನಾತ ಹೆಚ್ಚುತ್ತಿದೆ. ಬೆಳ್ಳಂದೂರು, ಯಮಲೂರು, ಕೆಂಪಾಪುರ, ಚಲ್ಲಘಟ್ಟ, ಇಬ್ಬಲೂರು, ದೇವರಬೀಸನಹಳ್ಳಿ, ಕಾಡುಬೀಸನಹಳ್ಳಿಯ ಜನರ ನೆಮ್ಮದಿ ಹಾಳಾಗಿದೆ. ‘ಸಮಸ್ಯೆ ಹೀಗೇ ಬೆಳೆದರೆ, ಬದುಕುವುದಾದರೂ ಹೇಗೆ’ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. 

‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸರ್ಕಾರಕ್ಕೆ ಛೀಮಾರಿ ಹಾಕಿ, ಕೆರೆ ಅಭಿವೃದ್ಧಿಗೆ ಗಡುವು ನೀಡಿದ ನಂತರ, ಕೆರೆ ಸ್ವಚ್ಛಗೊಳಿಸಲು ಕೆಲವು ಪ್ರಯೋಗಗಳನ್ನು ಮಾಡಲಾಗಿದೆ. ಆದರೆ, ಅವುಗಳಿಂದ ಯಾವುದೇ ಪ್ರಯೋಜನ ಆಗಿಲ್ಲ’ ಎಂದು ದೂರುತ್ತಿದ್ದಾರೆ. 

ನೊರೆ ನಿಯಂತ್ರಣಕ್ಕೆ ಅಳವಡಿಸಿದ್ದ ಸ್ಪ್ರಿಂಕ್ಲರ್‌ಗಳು ಸಹ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಹಾಕಿರುವ ತಂತಿಬೇಲಿಯನ್ನು ದಾಟಿ ನೊರೆಯು ವಾಹನಗಳ ಮೇಲೆ ಬೀಳುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !