ಬಳ್ಳಾರಿಯನ್ನು ಅಲ್ಲಾಡಿಸಲು ಆಗದೇ?

7

ಬಳ್ಳಾರಿಯನ್ನು ಅಲ್ಲಾಡಿಸಲು ಆಗದೇ?

Published:
Updated:

ಬಳ್ಳಾರಿ: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ನಂತರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಡಿ.ಕೆ. ಶಿವಕುಮಾರ್‌ ಅವರ ಪತ್ರಿಕಾಗೋಷ್ಠಿ ಏರ್ಪಾಡಾಗಿತ್ತು. ಅವರು ಮಾತಿಗೇನೋ ಆರಂಭಿಸಿದರು, ಆದರೆ ಅವರ ಧ್ವನಿ ಎಲ್ಲರಿಗೂ ಕೇಳಿಸುತ್ತಿರಲಿಲ್ಲ. ಆದ್ದರಿಂದ ಟ್ರಾಫಿಕ್‌ ಪೊಲೀಸರು ಬಳಸುವ ಮೈಕ್‌ಗೆ ಅವರು ಮೊರೆಹೋಗಬೇಕಾಯಿತು. ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಒಂದು ಹಾಸ್ಯದ ಸನ್ನಿವೇಶ ನಿರ್ಮಾಣವಾಯಿತು.

ಮೈಕ್‌ ಹಿಡಿದು ಅವರು ‘ಹಲೋ’ ಎಂದರೂ ಧ್ವನಿ ಸಹಜವಾಗಿ ಕೇಳಿ ಬರಲಿಲ್ಲ. ಧ್ವನಿವರ್ಧಕವನ್ನು ಸರಿಪಡಿಸಲು ರಾಜ್ಯಸಭೆಯ ಸದಸ್ಯ ನಾಸಿರ್‌ ಹುಸೇನ್‌ ಮುಂದಾದರು, ಕೆಲವು ಪತ್ರಕರ್ತರೂ ಕೈಜೋಡಿಸಿದರು. ಆದರೆ ಫಲ ನೀಡಲಿಲ್ಲ.

ಈ ಸಂದರ್ಭವನ್ನು ಹಾಸ್ಯಕ್ಕೆ ಬಳಸಿದ ಶಿವಕುಮಾರ್‌, ‘ಬಳ್ಳಾರಿಯನ್ನು ಅಷ್ಟು ಸುಲಭಕ್ಕೆ ಅಲ್ಲಾಡಿಸಲು ಸಾಧ್ಯವಿಲ್ಲ’ ಎಂದರು. ‘ಈಗಾಗಲೇ ಹಲವು ಸಚಿವರು ಬಂದು ಬಳ್ಳಾರಿಯನ್ನು ಅಲ್ಲಾಡಿಸಿ ಹೋಗಿದ್ದಾರಲ್ಲಾ’ ಎಂದು ಪತ್ರಕರ್ತರು ಸಣ್ಣಗೆ ತಿವಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ‘ನಾನು ನಡೆಸಲಿರುವ ಮೊದಲ ಕೆಡಿಪಿ ಸಭೆಯಲ್ಲಿ ‘ನಾನೇನು’ ಎಂಬುದನ್ನು ತೋರಿಸುತ್ತೇನೆ’ ಎಂದು ಅಷ್ಟೇ ಮೊನಚಾದ ಬಾಣವನ್ನು ಪತ್ರಕರ್ತರತ್ತ ಎಸೆದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !