ಬೆಂಗಳೂರು– ಮೈಸೂರು ಹೆದ್ದಾರಿ: 2021ಕ್ಕೆ ಪೂರ್ಣ

ಬುಧವಾರ, ಜೂನ್ 26, 2019
29 °C

ಬೆಂಗಳೂರು– ಮೈಸೂರು ಹೆದ್ದಾರಿ: 2021ಕ್ಕೆ ಪೂರ್ಣ

Published:
Updated:

ಬೆಂಗಳೂರು: ಈಗಾಗಲೇ ಸಾಕಷ್ಟು ತಡವಾಗಿದ್ದ ಬೆಂಗಳೂರು– ಮೈಸೂರು ನಡುವಿನ ದಶಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, 2021ರ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.

ಮೊದಲ ಹಂತದಲ್ಲಿ ಬೆಂಗಳೂರು– ನಿಡಘಟ್ಟ ನಡುವಿನ 56.20 ಕಿ.ಮೀ ಕಾಮಗಾರಿಯನ್ನು ₹2,190 ಕೋಟಿ ವೆಚ್ಚದಲ್ಲಿ ಈಗಾಗಲೇ ಆರಂಭಿಸಲಾಗಿದ್ದು, ಇದಕ್ಕಾಗಿ 219.57 ಹೆಕ್ಟೇರ್ ಭೂಮಿ ವಶಪಡಿಸಿಕೊಳ್ಳಲಾಗಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಮಂಗಳವಾರ ತಿಳಿಸಿದರು. 2ನೇ ಹಂತದಲ್ಲಿ ನಿಡಘಟ್ಟ– ಮೈಸೂರು ನಡುವಿನ 61.10 ಕಿ.ಮೀ ಕೆಲಸವನ್ನು ₹2,283.50 ಕೋಟಿ ಮೊತ್ತದಲ್ಲಿ ಕೈಗೆತ್ತಿಕೊಂಡಿದ್ದು, 226 ಹೆಕ್ಟೇರ್ ಭೂಮಿ ವಶಪಡಿಸಿಕೊಳ್ಳಲಾಗಿದೆ. ಈ ತಿಂಗಳ ಅಂತ್ಯಕ್ಕೆ ಕೆಲಸ ಪ್ರಾರಂಭವಾಗಲಿದ್ದು, ಈ ಕಾಮಗಾರಿ ಸಹ 2021ಕ್ಕೆ ಪೂರ್ಣಗೊಳ್ಳಲಿದೆ ಎಂದು ವಿವರಿಸಿದರು.

ಚೆನ್ನೈ ಎಕ್ಸ್‌ಪ್ರೆಸ್ ರಸ್ತೆ: ಬೆಂಗಳೂರು– ಚೆನ್ನೈ ನಡುವಿನ ಎಕ್ಸ್‌ಪ್ರೆಸ್ ರಸ್ತೆ ನಿರ್ಮಾಣಕ್ಕೂ ಚಾಲನೆ ನೀಡಲಾಗಿದೆ. ಬೆಂಗಳೂರು– ಮಾಲೂರು ವರೆಗಿನ 27 ಕಿ.ಮೀ ರಸ್ತೆಯನ್ನು ₹1,114 ಕೋಟಿ ವೆಚ್ಚದಲ್ಲಿ, ಮಾಲೂರು– ಬಂಗಾರಪೇಟೆವರೆಗಿನ 17 ಕಿ.ಮೀ ರಸ್ತೆಯನ್ನು ₹1,374 ಕೋಟಿ, ಬಂಗಾರಪೇಟೆ– ಚಿತ್ತಂಪಲ್ಲಿವರೆಗೆ 17.5 ಕಿ.ಮೀ ರಸ್ತೆಯನ್ನು ₹844 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದರು.ರಾಜ್ಯ ಸರ್ಕಾರದ ₹25,851 ಕೋಟಿ ಅನುದಾನದಲ್ಲಿ ವಿವಿಧೆಡೆ 1,117 ಕಿ.ಮೀ ರಾಜ್ಯ ಹೆದ್ದಾರಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ಶಿರಾಡಿಘಾಟ್‌ನಲ್ಲಿ ಸುರಂಗ ಮಾರ್ಗ
ಸಕಲೇಶಪುರ– ಮಂಗಳೂರು ಮಧ್ಯದ ಶಿರಾಡಿಘಾಟ್‌ನಲ್ಲಿ 23.60 ಕಿ.ಮೀ ಸುರಂಗ ಮಾರ್ಗ ನಿರ್ಮಾಣಕ್ಕೆ ₹1,200 ಕೋಟಿ ಮೊತ್ತದಲ್ಲಿ ಯೋಜನೆ ರೂಪಿಸಲಾಗಿದ್ದು, ಶೀಘ್ರ ಚಾಲನೆ ನೀಡಲಾಗುವುದು ಎಂದು ರೇವಣ್ಣ ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !