ವಿದ್ಯುತ್‌ ಅಡಚಣೆ: ಬೆಸ್ಕಾಂ ಸ್ಪಷ್ಟನೆ

7

ವಿದ್ಯುತ್‌ ಅಡಚಣೆ: ಬೆಸ್ಕಾಂ ಸ್ಪಷ್ಟನೆ

Published:
Updated:

ಬೆಂಗಳೂರು: ಮೆಟ್ರೊ ರೈಲು ನಿಗಮದ ಕಾಮಗಾರಿಗಾಗಿ ನೆಲದಡಿಯ ಕೇಬಲ್‌ ಸ್ಥಳಾಂತರ ಮಾಡಬೇಕಾಗಿದ್ದ ಕಾರಣ ಸೆ.29 ಮತ್ತು 30ರಂದು ಹೂಡಿ, ತಿರುಮಲಶೆಟ್ಟಿಹಳ್ಳಿ, ಕೊರಳೂರು, ಸಮೇತನಹಳ್ಳಿ, ಚನ್ನಸಂದ್ರ, ಕಾಡಗೋಡಿ ಸುತ್ತಮುತ್ತ ವಿದ್ಯುತ್‌ ಪೂರೈಕೆ ವ್ಯತ್ಯಯಗೊಂಡಿತ್ತು ಎಂದು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ಸ್ಪಷ್ಟಪಡಿಸಿದೆ.

ಅದೇ ಸಮಯದಲ್ಲಿ ಕೆಪಿಟಿಸಿಎಲ್‌ ಕೂಡ ಈ ಪ್ರದೇಶಗಳಲ್ಲಿ ಪ್ರಮುಖ ನಿರ್ವಹಣಾ ಕಾರ್ಯಗಳನ್ನು ಕೈಗೊಂಡಿತ್ತು. ಹಲವು ಗಂಟೆಗಳ ಕಾಲ ವಿದ್ಯುತ್‌ ಪೂರೈಕೆ ವ್ಯತ್ಯಯಗೊಳ್ಳಲು ಈ ಎರಡೂ ಕಾಮಗಾರಿಗಳು ಕಾರಣವಾಗಿದ್ದವು. ಈ ಕುರಿತು ಮುಂಚಿತವಾಗಿಯೇ ಪತ್ರಿಕಾ ಪ್ರಕಟಣೆಯನ್ನೂ ನೀಡಲಾಗಿತ್ತು ಎಂದು ಸಂಸ್ಥೆ ತಿಳಿಸಿದೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !