ಭಕ್ತವತ್ಸಲಗೆ ಗೌರವ ಅರ್ಪಣೆ

7

ಭಕ್ತವತ್ಸಲಗೆ ಗೌರವ ಅರ್ಪಣೆ

Published:
Updated:
Deccan Herald

ರಾಷ್ಟ್ರ ಹಾಗೂ ರಾಜ್ಯಮಟ್ಟದ ಚಲನಚಿತ್ರ ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಚಲನಚಿತ್ರೋದ್ಯಮ ಕ್ಷೇತ್ರದಲ್ಲಿ ಗಮನಾರ್ಹ ಕಾರ್ಯವನ್ನು ಮಾಡಿದವರು ಎಂ.ಭಕ್ತವತ್ಸಲ.‌ ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ಯಮದ ಉನ್ನತ ಅಧಿಕಾರಿಯಾಗಿದ್ದ ಅವರು ನಂತರ ಚಲನಚಿತ್ರ ಹಂಚಿಕೆ ಮತ್ತು ಪ್ರದರ್ಶನ ವಲಯಗಳಲ್ಲಿ ತೊಡಗಿಕೊಂಡಿದ್ದರು.

ಎಂ.ಎಸ್. ಸತ್ಯು ನಿರ್ದೇಶನದ ‘ಕನ್ನೇಶ್ವರರಾಮ’ ಚಿತ್ರ ನಿರ್ಮಿಸಿದ ಭಕ್ತವತ್ಸಲ ಅವರು ಅನೇಕ ಭಾಷೆಗಳಲ್ಲಿ ಚಿತ್ರ ನಿರ್ಮಾಣ ಮತ್ತು ಕನ್ನಡ ಚಲನಚಿತ್ರಗಳ ವಿತರಣೆಯಲ್ಲಿ ತೊಡಗಿಸಿಕೊಂಡು ಅನೇಕ ಚಿತ್ರಮಂದಿರಗಳ ನಿರ್ವಹಣೆ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು.

ಏಳು ವರ್ಷಗಳ ಕಾಲ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ದಕ್ಷಿಣ ಭಾರತದ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿದ್ದ ಏಕೈಕ ಕನ್ನಡಿಗ ಭಕ್ತವತ್ಸಲ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಉತ್ತಮ ಸಾಂಸ್ಥಿಕ ತಳಹದಿಯನ್ನು ಹಾಕಿಕೊಟ್ಟ ಅವರು ಸದಭಿರುಚಿ ಹಾಗೂ ಪ್ರಯೋಗಾತ್ಮಕ ಚಲನಚಿತ್ರ ನಿರ್ಮಾಣದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು.

ಪಟ್ಟಾಭಿರಾಮರೆಡ್ಡಿ ನಿರ್ದೇಶನದ ‘ಚಂಡಮಾರುತ’ ಚಿತ್ರದಲ್ಲಿ ಅಭಿನಯಿಸಿದ ಅವರು ಚಲನಚಿತ್ರ ಇತಿಹಾಸದಲ್ಲಿ ಆಳವಾದ ಅನುಭವ ಹೊಂದಿದ್ದಾರೆ. ಕನ್ನಡ ಚಲನಚಿತ್ರ ಮೂಕಿಯಿಂದ ಟಾಕಿಗೆ ಬದಲಾದಾಗ ಅಲ್ಲಿನ ತಾಂತ್ರಿಕತೆ ಕುರಿತು ಹಲವು ಪ್ರಾತ್ಯಕ್ಷಿತೆ– ವಿಚಾರ ಸಂಕಿರಣಗಳನ್ನು ಏರ್ಪಡಿಸಿದ್ದರು. ಜಾಗತಿಕ ಸಿನಿಮಾ ಬೆಳವಣಿಗೆ ಹಾಗೂ ಕರ್ನಾಟಕ ಉದ್ಯಮದ ಬಗೆಗೆ ಹಲವು ಲೇಖನ, ಪುಸ್ತಕಗಳನ್ನು ಅವರು ಬರೆದಿದ್ದಾರೆ. ರಾಜ್ಯ ಸರ್ಕಾರ ಎಂ. ಭಕ್ತವತ್ಸಲ ಅವರಿಗೆ 2012ನೇ ಸಾಲಿನ ಡಾ. ರಾಜ ಕುಮಾರ್ ಪ್ರಶಸ್ತಿ ನೀಡಿ ಗೌರವಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !