ಭೈರಗೊಂಡ ಬಂಟ ಭೀಮುಗೌಡ ಬಂಧನ

7
ಭೀಮಾ ತೀರದ ರೌಡಿ ಗಂಗಾಧರ ಚಡಚಣ ಕೊಲೆ ಪ್ರಕರಣ

ಭೈರಗೊಂಡ ಬಂಟ ಭೀಮುಗೌಡ ಬಂಧನ

Published:
Updated:

ವಿಜಯಪುರ:  ಭೀಮಾ ತೀರದ ರೌಡಿ ಗಂಗಾಧರ ಚಡಚಣನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿಯಾಗಿರುವ ಕಾಂಗ್ರೆಸ್‌ ಮುಖಂಡ ಮಹಾದೇವ ಭೈರಗೊಂಡನ ಬಲಗೈ ಬಂಟ, ಹಣಕಾಸಿನ ವ್ಯವಹಾರ ನೋಡಿಕೊಳ್ಳುತ್ತಿದ್ದ ಮರಳು ಮಾಫಿಯಾ ಡಾನ್‌ ಭೀಮುಗೌಡ ಬಿರಾದಾರ (ದೇವರ ನಿಂಬರಗಿ) ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಭೀಮುಗೌಡನನ್ನು ಸೋಮವಾರ ಬಂಧಿಸಿದ ಸಿಐಡಿ ಪೊಲೀಸರು ಇಂಡಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಇದೇ 12ರವರೆಗೆ, ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದರು. ಈತನ ತಾಯಿ ಇಂಡಿ ತಾಲ್ಲೂಕು ಪಂಚಾಯ್ತಿಯ ಮಾಜಿ ಉಪಾಧ್ಯಕ್ಷೆ. ಈತ ಮರಳು ದಂಧೆಯಲ್ಲೂ ಪಾಲ್ಗೊಂಡಿದ್ದ ಎನ್ನಲಾಗಿದೆ.

ಪೊಲೀಸರ ಎನ್‌ಕೌಂಟರ್‌ಗೆ ಹತ್ಯೆಯಾಗಿದ್ದಾನೆ ಎನ್ನಲಾದ ಧರ್ಮರಾಜ ಚಡಚಣನ ಆಪ್ತ, ಧರ್ಮನ ಎಲ್ಲ ಮಾಹಿತಿಗಳನ್ನು ಮಹಾದೇವ ಭೈರಗೊಂಡನಿಗೆ ನೀಡುತ್ತಿದ್ದ ಎಂದು ಶಂಕಿಸಲಾಗಿರುವ ಶಿವಾನಂದ ಬಿರಾದಾರ ಘಟನೆ ನಡೆದ ದಿನದಿಂದಲೂ ನಾಪತ್ತೆಯಾಗಿದ್ದಾನೆ. ಎನ್‌ಕೌಂಟರ್‌ನಲ್ಲಿ ಈತನಿಗೂ ಗುಂಡೇಟು ತಗುಲಿತ್ತು. ಇದೀಗ ಸಿಐಡಿ ಪೊಲೀಸರು ಈತನ ಪತ್ತೆಗಾಗಿ ಜಾಲ ಬೀಸಿದ್ದಾರೆ ಎಂಬುದು ತಿಳಿದು ಬಂದಿದೆ.

ಮಹಾದೇವ ಭೈರಗೊಂಡನ ಅಕೌಂಟೆಂಟ್‌ ಮೊಹಸೀನ್‌ ಎಂಬಾತನನ್ನು ಸಿಐಡಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.  ಸಿಐಡಿ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿರುವ ಮಹಾದೇವ ಭೈರಗೊಂಡ ಆರೋಗ್ಯದಲ್ಲಿ ಮತ್ತೆ ಏರುಪೇರು ಕಂಡುಬಂದಿದ್ದು, ಚಿಕಿತ್ಸೆಗಾಗಿ ಸೋಮವಾರ ಬಿಎಲ್‌ಡಿಇ ಸಂಸ್ಥೆಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದೆ. ನಂತರ ಮತ್ತೆ ತನ್ನ ವಿಚಾರಣೆ ಆರಂಭಿಸಿದೆ.

ಸಿಪಿಐಗೆ ನೋಟಿಸ್‌:

‘ಚಡಚಣ ವೃತ್ತದ ಈ ಹಿಂದಿನ ಸಿಪಿಐ ಎಂ.ಬಿ.ಅಸೋಡೆಗೆ ವಿಚಾರಣೆಗೆ ಸಾಕ್ಷಿಧಾರರಾಗಿ ಹಾಜರಾಗುವಂತೆ ಸಿಐಡಿ ನೋಟಿಸ್ ನೀಡಿದೆ. ಕುಟುಂಬ ವರ್ಗದವರಿಗೂ ಮಾಹಿತಿ ನೀಡಿದೆ. ಆದರೆ ಇಲ್ಲಿಯವರೆಗೂ ಅಸೋಡೆ ವಿಚಾರಣೆಗೆ ಬಂದಿಲ್ಲ. ಮನೆಯವರನ್ನು ಪ್ರಶ್ನಿಸಿದರೆ ಮಾಹಿತಿ ನೀಡುತ್ತಿಲ್ಲ’ ಎಂದು ಸಿಐಡಿ ಎಡಿಜಿಪಿ ಚರಣ್‌ರೆಡ್ಡಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !