ಸೈಕಲ್ ಏರಿದ ಕೃಷಿ ಸಚಿವರು

7

ಸೈಕಲ್ ಏರಿದ ಕೃಷಿ ಸಚಿವರು

Published:
Updated:
ಶಾಲಾ ಮಕ್ಕಳೊಂದಿಗೆ ಕುರೂಡಿ ಅರಣ್ಯ ಪ್ರದೇಶದಲ್ಲಿ ಸೈಕಲ್ ಏರಿ ವಾಯು ವಿಹಾರ ಮಾಡಿದ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ.

ಗೌರಿಬಿದನೂರು: ಹೊಸೂರು ಹೋಬಳಿಯ ಹೊಸಕೋಟೆ ಬಳಿ ಇರುವ ಅರಣ್ಯ ಪ್ರದೇಶದ ಬಳಿ ನೂತನವಾಗಿ ನಿರ್ಮಿಸಿರುವ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಬಳಿ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ವಿದ್ಯಾರ್ಥಿಗಳೊಂದಿಗೆ ಸೈಕಲ್ ಏರಿ ವಾಯು ವಿಹಾರ ಮಾಡಿದರು.

ನಂತರ ಮಾತನಾಡಿದ ಅವರು 'ತಾಲ್ಲೂಕಿನ ಹೊರವಲಯದ ಅರಣ್ಯ ಪ್ರದೇಶದಲ್ಲಿ ವಿಶ್ವ ಪರಿಸರ ದಿನಾಚರಣೆ ದಿನ ವಿವಿಧ ಸಂಘಸಂಸ್ಥೆಗಳು ಮತ್ತು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ವಿದ್ಯಾರ್ಥಿಗಳ ಜೊತೆಗೂಡಿ ನೆಟ್ಟು ಪೋಷಿಸಿದ್ದ ಗಿಡಗಳು ಬೆಳೆಯುತ್ತಿವೆ. ಇದಕ್ಕೆ ಪೂರಕವಾಗಿ ಸಮೀಪದಲ್ಲಿಯೇ ವಿಜ್ಞಾನ ಪಾರ್ಕ್ ನಿರ್ಮಾಣವಾಗಲಿದೆ. ಈ ಪ್ರದೇಶವನ್ನು ಪ್ರವಾಸೋದ್ಯಮ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲಾಗುವುದು’ ಎಂದು ಭರವಸೆ ನೀಡಿದರು.

ವಿದ್ಯಾರ್ಥಿಗಳು ಈ ಭಾಗದಲ್ಲಿ ಸೈಕ್ಲಥಾನ್ ನಡೆಸಿದಲ್ಲಿ ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಂತ ಬಾಳಬಹುದು. ಜೊತೆಗೆ ಪರಿಸರ ಮತ್ತು ವೈಜ್ಞಾನಿಕ ವಿಚಾರಗಳ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಳ್ಳಲು ಸಹಕಾರಿ ಆಗುವುದು ಎಂದು ತಿಳಿಸಿದರು.

ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿ ಡಾ.ಸಿ. ನಾರಾಯಣಸ್ವಾಮಿ, ಎಂಜಿನಿಯರ್ ಮುನಿಸ್ವಾಮಿಗೌಡ, ಉಪನ್ಯಾಸಕ ಜಿ.ವಿ. ಶ್ರೀನಿವಾಸ್ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !