ಸೋಮವಾರ, ಸೆಪ್ಟೆಂಬರ್ 16, 2019
22 °C

ನಗರದಲ್ಲಿ ಕಟ್ಟೆಚ್ಚರ: ಚರ್ಚ್‌ ಫಾದರ್‌ಗಳಿಗೆ ಸೂಚನೆ

Published:
Updated:

ಬೆಂಗಳೂರು: ಶ್ರೀಲಂಕಾದಲ್ಲಿ ಸರಣಿ ಸ್ಫೋಟ ಸಂಭವಿಸಿದ ಬೆನ್ನಲ್ಲೇ, ನಗರದ ಚರ್ಚ್‌ಗಳಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆರ್ಚ್‌ ಬಿಷಪ್‌ ಅವರು ನಗರದ ಚರ್ಚ್‌ಗಳ ಫಾದರ್‌ಗಳಿಗೆ ಸೂಚನೆ ನೀಡಿದ್ದಾರೆ.

ಫಾದರ್‌ಗಳಿಗೆ ಪತ್ರ ಬರೆದಿರುವ ಆರ್ಚ್‌ ಬಿಷಪ್ ಪೀಟರ್ ಮಚಾದೋ, ‘ನಗರದಲ್ಲಿ ಪೊಲೀಸರು ಈಗಾಗಲೇ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಪೊಲೀಸರು ನೀಡುವ ಸೂಚನೆಯಂತೆ ಚರ್ಚ್‌ಗಳಲ್ಲೂ ಭದ್ರತೆಗೆ ಹೆಚ್ಚಿನ ಒತ್ತು ನೀಡಿ’ ಎಂದು ಹೇಳಿದ್ದಾರೆ.

ಪತ್ರದಲ್ಲಿರುವ ಪ್ರಮುಖ ಸೂಚನೆಗಳು:

* ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಭದ್ರತಾ ಸಿಬ್ಬಂದಿಗೆ ತರಬೇತಿ ಕೊಡಿಸಬೇಕು.

* ಚರ್ಚ್ ಮತ್ತು ಸುತ್ತಮುತ್ತಲ ಸ್ಥಳಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಸ್ತುಗಳು ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು

* ಕಡ್ಡಾಯವಾಗಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಬೇಕು. ಅದು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು

* ಚರ್ಚ್‌ಗೆ ಬರುವವರನ್ನು ಹಾಗೂ ಅವರು ತರುವ ಬ್ಯಾಗ್, ಕವರ್ ಇತ್ಯಾದಿ ವಸ್ತುಗಳನ್ನು ತಪಾಸಣೆಗೆ ಒಳಪಡಿಸಬೇಕು

Post Comments (+)