ರಾಜ್ಯದಲ್ಲಿ ಭಾನುವಾರ, ಸೋಮವಾರ ಮಳೆ ಸಾಧ್ಯತೆ

ಸೋಮವಾರ, ಮಾರ್ಚ್ 25, 2019
31 °C

ರಾಜ್ಯದಲ್ಲಿ ಭಾನುವಾರ, ಸೋಮವಾರ ಮಳೆ ಸಾಧ್ಯತೆ

Published:
Updated:

ಬೆಂಗಳೂರು: ಮಾರ್ಚ್‌ ತಿಂಗಳ ಮೊದಲ ವಾರದಲ್ಲಿಯೇ ತಾಪಮಾನ ಭಾರೀ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವುದರಿಂದ ರಾಜ್ಯದ ದಕ್ಷಿಣ ಒಳನಾಡಿನ ಕೆಲವೆಡೆ ಭಾನುವಾರ ಮತ್ತು ಸೋಮವಾರ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

‘ಬಿಸಿಲಿನ ಪ್ರಖರತೆ ಹೆಚ್ಚಾಗಿರುವುದರಿಂದ ಮಂಡ್ಯ, ಮೈಸೂರು ಹಾಗೂ ಹಾಸನ ಭಾಗಗಳಲ್ಲಿ ತೀರ ಸಣ್ಣ ಪ್ರಮಾಣದ ಮಳೆಯಾಗಲಿದೆ’ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್‌.ಶ್ರೀನಿವಾಸ ರೆಡ್ಡಿ ತಿಳಿಸಿದರು. 

‘ಕಳೆದ ನಾಲ್ಕು ದಿನಗಳಲ್ಲಿ ರಾಜ್ಯದ ಕೆಲವೆಡೆ 40ಕ್ಕೂ ಅಧಿಕ ಪ್ರಮಾಣದಲ್ಲಿ ತಾಪಾಮಾನ ಏರಿಕೆಯಾಗಿತ್ತು’ ಎಂದರು.

ಮಂಗಳವಾರ, ಕಲಬುರ್ಗಿಯಲ್ಲಿ 38, ಗದಗ, ವಿಜಯಪುರ, ಬಳ್ಳಾರಿಯಲ್ಲಿ 36, ರಾಯಚೂರು, ಚಿತ್ರದುರ್ಗ 35, ಮೈಸೂರು ಹಾಗೂ ಮಂಡ್ಯದಲ್ಲಿ 34 ಡಿಗ್ರಿ ಸೆಲ್ಸಿಯಸ್‌ ಗರಿಷ್ಟ ತಾಪಮಾನ ದಾಖಲಾಗಿದೆ.

‘ಸದ್ಯ ರಾಜ್ಯದೆಲ್ಲೆಡೆ ತಾಪಮಾನ ವಾಡಿಕೆ ಪ್ರಮಾಣದಲ್ಲಿದೆ. ದಿನ ಕಳೆದಂತೆ ಬಿಸಿಲಿನ ಪ್ರಖರತೆ ಅಧಿಕವಾಗುತ್ತಿದ್ದು, ಈ ಬಾರಿ ದಾಖಲೆಯ ಪ್ರಮಾಣದಲ್ಲಿ ತಾಪಮಾನ ಏರಲಿದೆ. ಫೆಬ್ರುವರಿಯಲ್ಲೇ 40 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು’ ಎಂದರು.

ಬರಹ ಇಷ್ಟವಾಯಿತೆ?

  • 19

    Happy
  • 5

    Amused
  • 1

    Sad
  • 3

    Frustrated
  • 1

    Angry

Comments:

0 comments

Write the first review for this !