ಮಂಗಳವಾರ, ಡಿಸೆಂಬರ್ 10, 2019
26 °C

ಅವಹೇಳನಕಾರಿ ಲೇಖನ: ಪ್ರಿಯಾಂಕಾ ಕ್ಷಮೆಯಾಚಿಸಿದ ಜಾಲತಾಣ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ವಾಷಿಂಗ್ಟನ್‌:‌ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಹಾಲಿವುಡ್ ಗಾಯಕ ನಿಕ್ ಜೋನಸ್ ಅವರ ‍ಪ್ರೀತಿ ನಿಜವೇ ? ಆಕೆ ‘ಜಾಗತಿಕ ಮೋಸದ ಕಲಾವಿದೆ’ ಎಂದು ಲೇಖನ ಪ್ರಕಟಿಸಿದ್ದ ‘ದಿ ಕಟ್‌’ ಜಾಲತಾಣವು ಕ್ಷಮೆಯಾಚಿಸಿದೆ.

ನ್ಯೂಯಾರ್ಕ್‌ ಮೂಲದ ಈ ಜಾಲತಾಣದಲ್ಲಿ ಲೇಖಕ ಹಾಗೂ ಕಾಮೆಡಿಯನ್‌ ಮರಿಯಾ ಸ್ಮಿತ್‌ ಬರೆದಿದ್ದ ಸುದೀರ್ಘ ಲೇಖನದಲ್ಲಿ, ಪ್ರಿಯಾಂಕಾ ತನ್ನ ವೈಯಕ್ತಿಕ ಬೆಳವಣಿಗೆಗೆ ನಿಕ್‌ ಜೋನಸ್‌, ಆಕೆಯ ಸಹೋದರರನ್ನು ಬಳಸಿಕೊಂಡಿದ್ದಳು ಎಂದು ದೂರಿದ್ದರು. ಅಲ್ಲದೇ ವೈಯಕ್ತಿಕ ಸಂಬಂಧಗಳನ್ನು ಪ್ರಶ್ನಿಸಲಾಗಿತ್ತು. 

ಈ ಲೇಖನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಒಳಗಾಗಿತ್ತು, ಅಲ್ಲದೇ, ಲೇಖಕ ಬಳಸಿದ ಪದದ ಬಗ್ಗೆ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು.

ಈ ಬೆಳವಣಿಗೆ ಬೆನ್ನಲ್ಲೇ ಜಾಲತಾಣವು ಕ್ಷಮೆಯಾಚಿಸಿದ್ದು, ಪ್ರಕಟಗೊಂಡ ಲೇಖನವು ನಮ್ಮ ಗುಣಮಟ್ಟಕ್ಕೆ ತಕ್ಕುದಾಗಿರಲಿಲ್ಲ. ಅಲ್ಲದೇ ಅದನ್ನು ತೆಗೆದುಹಾಕಲಾಗುತ್ತದೆ’ ಎಂದು ಸ್ಪಷ್ಟಪಡಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು