ಬಿಜೆಪಿಗರ ಖರೀದಿ ಸಾಧ್ಯವಿಲ್ಲ; ಯತ್ನಾಳ

7

ಬಿಜೆಪಿಗರ ಖರೀದಿ ಸಾಧ್ಯವಿಲ್ಲ; ಯತ್ನಾಳ

Published:
Updated:

ವಿಜಯಪುರ: ‘ಬಿಜೆಪಿ ಶಾಸಕರ ಖರೀದಿ ಸಾಧ್ಯವಿಲ್ಲ. ಸಿದ್ದರಾಮಯ್ಯ ಇಂತಹ ದುಸ್ಸಾಹಸಕ್ಕೆ ಕೈ ಹಾಕುವ ಬದಲು ಕಾಂಗ್ರೆಸ್‌ ಉಳಿಸಿಕೊಳ್ಳಲು ಮುಂದಾಗಲಿ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಅಪ್ಸರಾ ಚಿತ್ರ ಮಂದಿರದಲ್ಲಿ ಬುಧವಾರ ‘ಉರಿ’ ಚಲನಚಿತ್ರ ವೀಕ್ಷಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಯತ್ನಾಳ, ‘ತಂತ್ರ–ಪ್ರತಿತಂತ್ರ ಏನು ನಡೆದಿದೆ ಎಂಬುದು ಗೊತ್ತಿಲ್ಲ. ಗುರುವಾರ ವಿಧಾನಸಭಾ ಅಧಿವೇಶನದಲ್ಲಿ ಭಾಗಿಯಾಗುವೆ. ಅಲ್ಲಿ ಪಾಲ್ಗೊಂಡ ಬಳಿಕವೇ ಮುಂದಿನ ಸಿನಿಮಾ ಏನು ಎಂಬುದು ತಿಳಿಯಲಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಇದೀಗ ನಡೆದಿರುವ ರಾಜಕೀಯ ಬೆಳವಣಿಗೆ ಸರಿಯಿಲ್ಲ. ಕರ್ನಾಟಕದಲ್ಲಿ ಪ್ರಜಾತಂತ್ರವೇ ಗೊಂದಲದಲ್ಲಿದೆ. ಈ ದ್ವಂದ್ವಕ್ಕಿಂತ ಸಮ್ಮಿಶ್ರ ಸರ್ಕಾರ ರಾಜೀನಾಮೆ ನೀಡೋದೇ ಒಳಿತು’ ಎಂದು ಬಸನಗೌಡ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !