ಬಿಜೆಪಿ ಪ್ರಣಾಳಿಕೆ ಸುಳ್ಳಿನ ಕಂತೆ- ಸಿದ್ದರಾಮಯ್ಯ

ಬುಧವಾರ, ಏಪ್ರಿಲ್ 24, 2019
31 °C

ಬಿಜೆಪಿ ಪ್ರಣಾಳಿಕೆ ಸುಳ್ಳಿನ ಕಂತೆ- ಸಿದ್ದರಾಮಯ್ಯ

Published:
Updated:

ಬೆಂಗಳೂರು: ‘ಬಿಜೆಪಿ ಚುನಾವಣಾ ಪ್ರಣಾಳಿಕೆ ಸುಳ್ಳಿನ ಕಂತೆ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ರಾಮ ಮಂದಿರ ನಿರ್ಮಿಸುತ್ತೇವೆ ಎಂಬ ಭರವಸೆ ಹೊಸದೇನೂ ಅಲ್ಲ. ಪ್ರಣಾಳಿಕೆಯಲ್ಲಿ ಹಿಂದೆ ಹೇಳಿದ್ದನ್ನೇ ಪುನರಾವರ್ತಿಸಿದ್ದಾರೆ. ಜನರಿಗೆ ಮೋದಿ ಮೇಲೆ ವಿಶ್ವಾಸ ಇಲ್ಲ’ ಎಂದರು.

‘ಲೋಕಸಭೆ ಚುನಾವಣೆಯಲ್ಲಿ ಮತ್ತೆ ರಾಮ ಎದ್ದು ಬಂದಿದ್ದಾನೆ. ಪ್ರಚಾರಕ್ಕೆ ರಾಮನನನ್ನು ಮೋದಿ ಕರೆದುಕೊಂಡು ಹೊರಟಿದ್ದಾರೆ. ಆಯೋಧ್ಯೆಯಲ್ಲಿ ರಾಮ ನೆಮ್ಮದಿಯಾಗಿದ್ದ’ ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

‘ತಮ್ಮ ಐದು ವರ್ಷದ ವೈಫಲ್ಯ ಮುಚ್ಚೋಕೆ ಹೀಗೆ ಮಾಡ್ತಿದ್ದಾರೆ. ಮೋದಿಯವರೇ ಇನ್ನೆಷ್ಟು ಕಾಲ ಜನರ ಭಾವನೆ ಜೊತೆ ಆಟವಾಡ್ತೀರಾ. ಜನರನ್ನು ಮೋಸ ಮಾಡ್ತೀರಾ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಬಿಜೆಪಿ ಪ್ರಣಾಳಿಕೆಯಲ್ಲಿ ಯಾವ ನೈಜತೆಯೂ ಇಲ್ಲ. ಈಗ ಮತ್ತೆ ರಾಮ ಮಂದಿರ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ. ಬಹುಮತ ಪಡೆದು ಆಡಳಿತ ನಡೆಸಿ ಐದು ವರ್ಷ ಕಳೆದರೂ ಯಾಕೆ ಮಂದಿರ ಕಟ್ಟಲಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !