ಶನಿವಾರ, ಡಿಸೆಂಬರ್ 7, 2019
21 °C

ಬಿಜೆಪಿ ಮುಸ್ಲಿಂ ವಿರೋಧಿ: ಇಮ್ರಾನ್‌ ಖಾನ್‌

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಇಸ್ಲಾಮಾಬಾದ್‌: ಭಾರತದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ನಡೆ, ಪಾಕಿಸ್ತಾನ ಮತ್ತು ಮುಸ್ಲಿಂ ವಿರೋಧಿಯಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಆರೋಪಿಸಿದ್ದಾರೆ.

ಸ್ಥಗಿತಗೊಂಡಿರುವ ದ್ವಿಪಕ್ಷೀಯ ಮಾತುಕತೆ ಮುಂದಿನ ವರ್ಷ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ಬಳಿಕ ನಡೆಯುವ ನಿರೀಕ್ಷೆ ಇದೆ ಎಂದಿದ್ದಾರೆ.

2008ರ ಮುಂಬೈ ದಾಳಿಕೋರರನ್ನು ಬಂಧಿಸಲು ಪಾಕಿಸ್ತಾನದ ಸರ್ಕಾರ ಸಿದ್ಧವಿದೆ. ಇದರಲ್ಲಿ ದೇಶದ ಹಿತಾಸಕ್ತಿಯೂ ಅಡಗಿದೆ ಎಂದೂ ಅವರು ಹೇಳಿದ್ದಾರೆ.

’ಮಾತುಕತೆಗಾಗಿ ನಾವು ಮುಂದಿರಿಸಿದ ಪ್ರಸ್ತಾಪಗಳನ್ನು ಭಾರತದ ಈಗಿನ ಸರ್ಕಾರ ನಿರಾಕರಿಸಿದೆ‘ ಎಂದು ಇಮ್ರಾನ್‌ ವಾಷಿಂಗ್ಟನ್‌ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮಾತುಕತೆ ಮತ್ತು ಭಯೋತ್ಪಾದನೆ ಎರಡೂ ಜೊತೆಯಾಗಿ ಸಾಗದು ಎಂದು ಭಾರತವು ಪಾಕಿಸ್ತಾನಕ್ಕೆ ಈ ಹಿಂದೆ ಹೇಳಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು