ಮೋದಿ–ಜಿಗಜಿಣಗಿ ಪರ ನಾರಿಯರ ಬ್ಯಾಟಿಂಗ್..!

ಶುಕ್ರವಾರ, ಏಪ್ರಿಲ್ 19, 2019
31 °C

ಮೋದಿ–ಜಿಗಜಿಣಗಿ ಪರ ನಾರಿಯರ ಬ್ಯಾಟಿಂಗ್..!

Published:
Updated:

ವಿಜಯಪುರ: ‘ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಜಿಗಜಿಣಗಿ ಕಾಕಾ ಮತ್ತೆ ಸಂಸದರಾಗಬೇಕು’ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಪದಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಸದಸ್ಯೆಯರು ಮಂಗಳವಾರ ಇಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮೋದಿ ಐದು ವರ್ಷದಲ್ಲಿ ಅತ್ಯುತ್ತಮ ಆಡಳಿತ ನೀಡಿದ್ದಾರೆ. ತ್ರಿವಳಿ ತಲಾಖ್‌ ರದ್ದುಗೊಳಿಸುವ ಮೂಲಕ ಶೋಷಣೆಯ ಕೂಪದಲ್ಲಿದ್ದ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸಿದ್ದಾರೆ. ಈ ಚುನಾವಣೆಯಲ್ಲಿ ಮುಸ್ಲಿಂ ಮಹಿಳೆಯರು ಮೋದಿಗಾಗಿ ಬಿಜೆಪಿಗೆ ಸ್ವಯಂಪ್ರೇರಿತರಾಗಿ ಮತ ನೀಡಲಿದ್ದಾರೆ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಜ್ಯೋತಿ ಅಸ್ಕಿ ತಿಳಿಸಿದರು.

‘ಈಚೆಗಿನ ವರ್ಷಗಳಲ್ಲಿ ಮಹಿಳೆಯರು ಪ್ರಜ್ಞಾವಂತರಾಗಿದ್ದಾರೆ. ಮೋದಿ ಮನೆ ಮಾತಾಗಿದ್ದು, ಮತ್ತೊಮ್ಮೆ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆಯರಾದ ದಾನಮ್ಮ ಅಂಗಡಿ, ಪ್ರಭಾವತಿ ಪಾಟೀಲ, ಶ್ರೀದೇವಿ ಐಹೊಳಿ, ಮಾಜಿ ಸದಸ್ಯೆ ಸೌಮ್ಯಾ ಕಲ್ಲೂರ, ಮಹಿಳಾ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಮ್ಮ ಜೋಗುರ. ನಗರ ಘಟಕದ ರಜನಿ ಸಂಬಣ್ಣಿ ಕೇಂದ್ರ ಸರ್ಕಾರದ ಕೊಡುಗೆಗಳನ್ನು ಬಣ್ಣಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆಯರು, ಮಹಿಳಾ ಘಟಕದ ಪದಾಧಿಕಾರಿಗಳಿಗೆ ಪತ್ರಕರ್ತರು ಕೇಳಿದ ಕೆಲ ಪ್ರಶ್ನೆಗಳಿಗೆ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಉತ್ತರಿಸಿದರು. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಗರಾಜ ದೇಸಾಯಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !