ಸರ್ಕಾರದ ವಿರುದ್ಧ ಅಹೋರಾತ್ರಿ ಬಿಜೆಪಿ ಧರಣಿ

ಭಾನುವಾರ, ಜೂನ್ 16, 2019
28 °C
ಭ್ರಷ್ಟ ರಾಜ್ಯ ಸರ್ಕಾರ ಮಲಗಿತ್ತು, ಬಿಜೆಪಿಯ ಹೋರಾಟದಿಂದ ಎಚ್ಚೆತ್ತಿದೆ–ಯಡಿಯೂರಪ್ಪ ಟೀಕೆ

ಸರ್ಕಾರದ ವಿರುದ್ಧ ಅಹೋರಾತ್ರಿ ಬಿಜೆಪಿ ಧರಣಿ

Published:
Updated:
Prajavani

ಬೆಂಗಳೂರು: ಜಿಂದಾಲ್‌ಗೆ ಜಮೀನು ನೀಡಿಕೆ, ಬರ ಪರಿಹಾರದಲ್ಲಿ ಸರ್ಕಾರದ ವೈಫಲ್ಯ, ಭ್ರಷ್ಟಾಚಾರ ಖಂಡಿಸಿ ಬಿಜೆಪಿ ನಾಯಕರು ಶುಕ್ರವಾರ ಅಹೋರಾತ್ರಿ ಧರಣಿ ನಡೆಸಿದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷದ ಶಾಸಕರು, ಸಂಸದರು ಇಡೀ ದಿನ ಧರಣಿ ನಡೆಸಿದರು. ರಾತ್ರಿ 10ಗಂಟೆ ಬಳಿಕ ಧರಣಿ ಸ್ಥಳದಲ್ಲೇ, ಯಡಿಯೂರಪ್ಪ ಹಾಗೂ ಶಾಸಕರಾದ ಆರ್ ಅಶೋಕ್, ಗೋವಿಂದ ಕಾರಜೋಳ, ಎನ್.ರವಿಕುಮಾರ್, ಸಂಸದ ಡಾ.ಉಮೇಶ್ ಜಾಧವ ಅವರು ನಿದ್ರೆಗೆ ಶರಣಾದರು.

ಎರಡು ದಿನಗಳ ಅಹೋರಾತ್ರಿ ಧರಣಿಗೆ ಚಾಲನೆ ನೀಡಿದ ಯಡಿಯೂರಪ್ಪ, ‘ಜಮೀನು ಪರಭಾರೆಗೆ ಜಿಂದಾಲ್‌ನಿಂದ ಸರ್ಕಾರಕ್ಕೆ ಲಂಚ ಸಿಕ್ಕಿದೆ. ತಕ್ಷಣ ಈ ನಿರ್ಧಾರ ಕೈಬಿಡಬೇಕು’ ಎಂದು ಆಗ್ರಹಿಸಿದರು.

‘ರೈತರ ಸಾಲ ಮನ್ನಾ ವಿಚಾರದಲ್ಲಿ ಸರ್ಕಾರ ಗಾಢ ನಿದ್ದೆಯಲ್ಲಿತ್ತು. ಬಿಜೆಪಿ ರಾಜ್ಯವ್ಯಾಪಿ ಪ್ರವಾಸ ಆರಂಭಿಸಿದ್ದರಿಂದಲೇ ಸಾಲ ಮನ್ನಾದತ್ತ ಗಮನ ಹರಿಸಿದೆ. ಈ ಹಿಂದೆ ರೈತರ ಸಾಲ ₹ 45 ಸಾವಿರ ಕೋಟಿ ರೈತರ ಸಾಲ ಇದೆ ಎಂದು ಹೇಳುತ್ತಿದ್ದ ಸರ್ಕಾರ ಇಂದು ಹದಿನೈದು–ಹದಿನಾರು ಸಾವಿರ ಕೋಟಿ ಸಾಲ ಇದೆ ಎಂದು ಹೇಳುತ್ತಿದೆ. ಸರ್ಕಾರ ತಕ್ಷಣ ಸರ್ವ ಪಕ್ಷ ಸಭೆ ಕರೆದು ವಾಸ್ತವವಾಗಿ ಇರುವ ಸಾಲದ ಬಗ್ಗೆ ಮಾಹಿತಿ ನೀಡಬೇಕು’ ಎಂದರು.

‘ಕಳೆದ ಒಂದು ವರ್ಷದಿಂದ ತಾಜ್‌ ಹೋಟೆಲ್‌ನಲ್ಲಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜನಸಾಮಾನ್ಯರ ಕೈಗೆ ಸಿಕ್ಕಿಯೇ ಇರಲಿಲ್ಲ. ಹೋಟೆಲ್‌ಗೆ ಹೋಗುತ್ತಿದ್ದವರು ಕಮಿಷನ್‌ ಕೊಡುವವರು ಮಾತ್ರ. ಕುರ್ಚಿ ಅಲ್ಲಾಡತೊಡಗಿದಂತೆ ಅವರು ಜನರತ್ತ ಮುಖ ಮಾಡಿದ್ದಾರೆ. ಈ ಸರ್ಕಾರ ಜನರ ಪಾಲಿಗೆ ಸತ್ತಿದೆ’ ಎಂದು ಯಡಿಯೂರಪ್ಪ ದೂರಿದರು.

‌ಕಮಿಷನ್‌ ಸರ್ಕಾರ: ‘ರಾಜ್ಯದಲ್ಲಿರುವುದು ಭ್ರಷ್ಟ, ಕಮಿಷನ್ ಸರ್ಕಾರ. ಕಮಿಷನ್ ಸಿಗುತ್ತದೆ ಎಂದಾದರೆ ವಿಧಾನಸೌಧವನ್ನೂ ಮಾರಲು ಇವರು ಹೇಸುವವರಲ್ಲ’ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯವಾಡಿದರು.

‘ಐಎಂಎ ವಂಚನೆ ಪ್ರಕರಣದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್‌ ಮತ್ತು ಶಾಸಕ ಆರ್‌.ರೋಶನ್‌ ಬೇಗ್‌ ಅವರ ವರ್ತನೆ ಸಂಶಯದಿಂದ ಕೂಡಿದ್ದು, ಇಬ್ಬರನ್ನೂ ಬಂಧಿಸಬೇಕು’ ಎಂದು ಆಗ್ರಹಿಸಿದರು.

‘ಎಸ್‌ಐಟಿಗೆ ಹೋಗಿ ಎಂದು ರೋಶನ್‌ ಬೇಗ್‌ಗೆ ಹೇಳುವ ಸಿದ್ದರಾಮಯ್ಯ. ಇದೇ ಮಾತನ್ನು ಸಚಿವ ಜಮೀರ್ ಅಹ್ಮದ್‌ ಖಾನ್‌ಗೂ ಏಕೆ ಹೇಳುತ್ತಿಲ್ಲ? ಇವರಿಬ್ಬರು ಮೈತ್ರಿ ಸರ್ಕಾರದ ಕಳ್ಳೆತ್ತುಗಳು’ ಎಂದು ಟೀಕಿಸಿದರು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !