ಜಾತ್ರಾ ಮಹೋತ್ಸವದಲ್ಲಿ ಬಿಜೆಪಿ ರೋಡ್ ಷೋ

ಬುಧವಾರ, ಮೇ 22, 2019
24 °C

ಜಾತ್ರಾ ಮಹೋತ್ಸವದಲ್ಲಿ ಬಿಜೆಪಿ ರೋಡ್ ಷೋ

Published:
Updated:
Prajavani

ಸಿಂದಗಿ(ವಿಜಯಪುರ): ತಾಲ್ಲೂಕಿನ ಗೋಲಗೇರಿಯಲ್ಲಿ ಶುಕ್ರವಾರ ಸಂಜೆ ಜಾತ್ರಾ ಮಹೋತ್ಸವದಲ್ಲಿ ಚುನಾವಣಾ ರೋಡ್ ಷೋ ನಡೆದಿದೆ.

ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ರೋಡ್ ಷೋ ನಡೆಸಿದರು. ಮಾಜಿ ಶಾಸಕ ರಮೇಶ ಭೂಸನೂರ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಬಿಜೆಪಿ ಮುಖಂಡರಾದ ಸಂತೋಷ ಪಾಟೀಲ ಡಂಬಳ, ಸಿದ್ದು ಬುಳ್ಳಾ, ಪ್ರಭುಗೌಡ ಪಾಟೀಲ ಡಂಬಳ, ಮಹಾಂತೇಶ ಸಾತಿಹಾಳ, ಸೈಫನ್ ಕೋರವಾರ, ತಾ.ಪಂ. ಸದಸ್ಯ ಶ್ರೀಶೈಲ ಚಳ್ಳಗಿ, ಗೌಡಣ್ಣ ಆಲಮೇಲ, ಅಶೋಕ ಅಣಚೆಗಾವಿ, ಮಲ್ಲಿಕಾಕಾರ್ಜುನ ಜೋಗೂರ ಮುಂಚೂಣಿಯಲ್ಲಿದ್ದರು.

ಕಾರ್ಯಕರ್ತರು ಪಕ್ಷದ ಬಾವುಟ ಹಾಗೂ ಜಿಗಜಿಣಗಿ ಭಾವಚಿತ್ರವುಳ್ಳ ಫಲಕ ಹಿಡಿದುಕೊಂಡು ರೋಡ್ ಷೋದಲ್ಲಿ ಭಾಗವಹಿಸಿದ್ದರು.

ಜಾತ್ರಾ ಮಹೋತ್ಸವದ ನಿಮಿತ್ತ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಜಿಗಜಿಣಗಿ ದೇವಸ್ಥಾನದ ಹೊರಗಡೆ ಗೊಲ್ಲಾಳೇಶ್ವರ ಮೂರ್ತಿಯ ದರ್ಶನ ಪಡೆದುಕೊಂಡರು. ನಂತರ ಬಸ್ ತಂಗುದಾಣ ಬಳಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ‘ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ಮೂಲಕ ದೇಶದ ಅಭಿವೃದ್ಧಿಗಾಗಿ ಕೈ ಜೋಡಿಸಲು ಬಿಜೆಪಿಗೆ ಮತ ಹಾಕಿ’ ಎಂದು ಮನವಿ ಮಾಡಿಕೊಂಡರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !