ಇಂಡೊನೇಷ್ಯಾ: ಸಮುದ್ರಕ್ಕೆ ಪತನವಾಗಿದ್ದ ವಿಮಾನದ ಬ್ಲ್ಯಾಕ್‌ಬಾಕ್ಸ್ ಪತ್ತೆ

7

ಇಂಡೊನೇಷ್ಯಾ: ಸಮುದ್ರಕ್ಕೆ ಪತನವಾಗಿದ್ದ ವಿಮಾನದ ಬ್ಲ್ಯಾಕ್‌ಬಾಕ್ಸ್ ಪತ್ತೆ

Published:
Updated:

ಜಕಾರ್ತ: ಸುಮಾತ್ರ ದ್ವೀಪಸಮೂಹದ ಬಳಿ ಸಮುದ್ರಕ್ಕೆ ಪತನಗೊಂಡಿದ್ದ ಲಯನ್‌ ಏರ್‌ ಕಂಪನಿಗೆ ಸೇರಿದ ವಿಮಾನದ ಬ್ಲ್ಯಾಕ್‌ಬಾಕ್ಸ್ ಪತ್ತೆಹಚ್ಚಲಾಗಿದೆ ಎಂದು ಇಂಡೊನೇಷ್ಯಾದ ಮುಳುಗುತಜ್ಞರು ಗುರುವಾರ ಹೇಳಿದ್ದಾರೆ.

ವಿಮಾನದ ಅವಶೇಷಗಳ ಎಡೆಯಿಂದ ನಾವು ಬ್ಲ್ಯಾಕ್‌ಬಾಕ್ಸ್‌ ಪತ್ತೆಹೆಚ್ಚಿದ್ದೇವೆ ಎಂದು ಮುಳುಗುತಜ್ಞ ಹೆಂದ್ರಾ ಎಂಬುವವರು ಹೇಳಿದ್ದನ್ನು ಜಕಾರ್ತದ ಮೆಟ್ರೊ ಟಿವಿ ವರದಿ ಮಾಡಿದೆ. ಇದೀಗ ಬ್ಲ್ಯಾಕ್‌ಬಾಕ್ಸ್ ದೊರೆತಿರುವುದರಿಂದ ಅಪಘಾತದ ಕಾರಣ ತಿಳಿಯುವುದು ಸುಲಭವಾಗಲಿದೆ.

ಇದನ್ನೂ ಓದಿ: ಲಯನ್‌ ಏರ್‌ ವಿಮಾನ ಸಮುದ್ರದಲ್ಲಿ ಪತನ: 189 ಪ್ರಯಾಣಿಕರು, 7 ಸಿಬ್ಬಂದಿ ಸಾವು

189 ಪ್ರಯಾಣಿಕರು ಮತ್ತು ಏಳು ಸಿಬ್ಬಂದಿ ಒಳಗೊಂಡಿದ್ದ ಬೋಯಿಂಗ್ 737–800 ವಿಮಾನ ಸೋಮವಾರ ಬೆಳಿಗ್ಗೆ ಪತನಗೊಂಡಿತ್ತು. ಹಾರಾಟ ಆರಂಭಿಸಿದ 13 ನಿಮಿಷಗಳ ನಂತರ ರಾಡಾರ್‌ ಸಂಪರ್ಕದಿಂದ ಕಡಿತಗೊಂಡಿದ್ದ ವಿಮಾನ, ವೇಗವಾಗಿ ಮೇಲಕ್ಕೇರಿ ದಿಢೀರನೆ ಕೆಳಕ್ಕೆ ಕುಸಿದಿತ್ತು.

ಇದನ್ನೂ ಓದಿ: ಇಂಡೊನೇಷ್ಯಾ: ಪತನವಾದ ವಿಮಾನ ಚಲಾಯಿಸುತ್ತಿದ್ದ ಪೈಲಟ್ ಭಾರತೀಯ

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !