ಸಂಘಟನೆ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್‌

7
8 ಪ್ರಕರಣ ಪತ್ತೆ: ಅರ್ಧ ಕೆ.ಜಿ ಚಿನ್ನ ಜಪ್ತಿ

ಸಂಘಟನೆ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್‌

Published:
Updated:
ಮಹೇಂದ್ರ

ಬೆಂಗಳೂರು: ಸಂಘಟನೆ ಹೆಸರು ಹೇಳಿಕೊಂಡು ವಸತಿಗೃಹ ಹಾಗೂ ಬ್ಯೂಟಿ ಪಾರ್ಲರ್‌ಗಳಿಗೆ ನುಗ್ಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆರೋಪದಡಿ ಮಹೇಂದ್ರ ಕುಮಾರ್ ಎಂಬಾತನನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿಯಾದ ಆತ, ‘ಜೈ ಭಾರತ್ ಸಂಘ’ದ ರಾಷ್ಟ್ರೀಯ ಅಧ್ಯಕ್ಷನೆಂದು ಹೇಳಿಕೊಂಡು ಓಡಾಡುತ್ತಿದ್ದ. ಕೆಲ ದಿನಗಳ ಹಿಂದೆ ಮಾರತ್ತಹಳ್ಳಿಯ ವಸತಿಗೃಹಕ್ಕೆ ನುಗ್ಗಿ, ಸ್ನೇಹಿತೆ ಜೊತೆಗಿದ್ದ ಯುವಕನನ್ನು ಬೆದರಿಸಿ ಹಣ ವಸೂಲಿ ಮಾಡಿದ್ದ. ಆ ಸಂಬಂಧ ಯುವಕ ನೀಡಿದ್ದ ದೂರಿನಡಿ ಆರೋಪಿಯನ್ನು ಬಂಧಿಸಲಾಗಿದೆ. ಆತನಿಂದ ಅರ್ಧ ಕೆ.ಜಿ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು. 

ಎಸ್ಸೆಸ್ಸೆಲ್ಸಿವರೆಗೆ ಓದಿದ್ದ ಆರೋಪಿ, 3 ವರ್ಷಗಳ ಹಿಂದೆ ಸಂಘಟನೆ ಕಟ್ಟಿಕೊಂಡಿದ್ದ. ಯುವಕ–ಯುವತಿಯರು ಇರುತ್ತಿದ್ದ ವಸತಿಗೃಹ ಹಾಗೂ ಬ್ಯೂಟಿ ಪಾರ್ಲರ್‌ ಹೋಗುತ್ತಿದ್ದ ಆರೋಪಿ, ಅವರ ಫೋಟೊ ಹಾಗೂ ವಿಡಿಯೊ ತೆಗೆದುಕೊಳ್ಳುತ್ತಿದ್ದ. ಅವುಗಳನ್ನು ತೋರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಹಣ ಕೊಡದಿದ್ದರೆ ಫೋಟೊ ಹಾಗೂ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಪೊಲೀಸರು ವಿವರಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !