ಅಂಧ ಕ್ರಿಕೆಟಿಗರೊಂದಿಗೆ ಕರುಣ್ ಬ್ಯಾಟಿಂಗ್

7

ಅಂಧ ಕ್ರಿಕೆಟಿಗರೊಂದಿಗೆ ಕರುಣ್ ಬ್ಯಾಟಿಂಗ್

Published:
Updated:
Deccan Herald

ಶಂಕರ ಕಣ್ಣಿನ ಆಸ್ಪತ್ರೆಯು ‘ಮೈಕ್ರೋಸಾಫ್ಟ್’ ಸಹಯೋಗದಲ್ಲಿ ಅಂಧರಿಗಾಗಿ ‘ಕ್ರಿಕೆಟ್ ಪಂದ್ಯಾವಳಿ’ ಆಯೋಜಿಸುವ ಮೂಲಕ ವಿಶ್ವ ದೃಷ್ಟಿ ದಿನವನ್ನು ಆಚರಿಸಿತು.

ಪಂದ್ಯಾವಳಿಯಲ್ಲಿ ನಾಲ್ಕು ತಂಡಗಳು ಭಾಗವಹಿಸಿದ್ದವು. ಭಾರತ ಕ್ರಿಕೆಟ್ ತಂಡದ ಆಟಗಾರ ಕರುಣ್ ನಾಯರ್ ಅತಿಥಿಯಾಗಿ ಪಾಲ್ಗೊಂಡಿದ್ದರು. ಅಂಧರನ್ನು ಮತ್ತು ಅಂಧರ ಕ್ರಿಕೆಟ್‌ ಅನ್ನು ಪ್ರೋತ್ಸಾಹಿಸಲೆಂದು ಸ್ವತಃ ಕರುಣ್ ನಾಯರ್ ಕಣ್ಣಿಗೆ ಬಟ್ಟೆಕಟ್ಟಿಕೊಂಡು ಬ್ಯಾಟಿಂಗ್‌ ಮಾಡಿ ಗಮನಸೆಳೆದರು.‌ ಅಂಧ ಕ್ರಿಕೆಟಿಗರು ಉತ್ಸಾಹದಿಂದ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಸಂತಸಪಟ್ಟರು.

‘ಯಾವುದೇ ಭೇದವಿಲ್ಲದೆ ಜನರನ್ನು ಬೆಸೆಯುವ ಆಟ ಕ್ರಿಕೆಟ್. ದೃಷ್ಟಿ ದೋಷವುಳ್ಳವರು ಈ ಆಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು. ಕ್ರಿಕೆಟಿಗನಾಗಿ ನಾನು ಈ ಪಂದ್ಯಾವಳಿಯಲ್ಲಿ ಭಾಗಿಯಾಗಿರುವುದು ಮನಸಿಗೆ ಸಂತಸವಾಗಿದೆ’ ಎಂದು ಕರುಣ್ ನಾಯರ್ ಪ್ರತಿಕ್ರಿಯಿಸಿದರು.

‘ಅಂಧ ಕ್ರಿಕೆಟಿಗರ ಸಾಮರ್ಥ್ಯ ಮತ್ತು ಸ್ಫೂರ್ತಿ ಮೆಚ್ಚುವಂತಹದ್ದು. ಅಂಗವಿಕಲತೆಯನ್ನು ಮೆಟ್ಟಿ ನಿಂತು ಆಟದಲ್ಲಿ ತೊಡಗಿಕೊಂಡಿರುವುದು ಶ್ಪಾಘನೀಯ. ವೃತ್ತಿ ಬದುಕಿನಲ್ಲಿ ನಾವು ಗಾಯದ ಸಮಸ್ಯೆ ಹಾಗೂ ಕೆಟ್ಟ ಫಾರ್ಮ್‌ನಿಂದಾಗಿ ಅದೆಷ್ಟೋ ಕಠಿಣ ಪರಿಸ್ಥಿತಿಗಳನ್ನು ಎದುರಿಸಿದ್ದೇವೆ. ಅದರಿಂದ ಹೊರಬಂದು ಮರುಹೋರಾಟ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಅಂತಹದ್ದರಲ್ಲಿ ಅಂಧರು ಜೀವನದ ವಿರುದ್ಧವೇ ಸೆಣೆಸುತ್ತಿರುವುದು ನಾವು ಎದುರಿಸುವ ಎಲ್ಲ ಕಷ್ಟಗಳಿಗೂ ಮೀರಿದ್ದು’ ಎಂದು ಅವರು ಹೇಳಿದರು.

‘ವಿಶ್ವ ದೃಷ್ಟಿ ದಿನದ ಆಚರಣೆಯನ್ನು ಈ ಪಂದ್ಯವಾಳಿಗಿಂತಲೂ ಮಿಗಿಲಾಗಿ ಆಚರಿಸಲು ಸಾಧ್ಯವಿಲ್ಲ. ಕ್ರಿಕೆಟ್‍ ಅನ್ನು ದೇಶದಲ್ಲಿ ಉನ್ನತ ಮಟ್ಟದಲ್ಲಿ ಪೂಜಿಸಲಾಗುತ್ತದೆ. ಆದರೆ, ಅಂಧರು ಮಾತ್ರ ಈ ಆಟವನ್ನು ಕಣ್ತುಂಬಿಕೊಳ್ಳಲಾಗದೇ ಕೊರಗುತ್ತಿದ್ದಾರೆ. ಹೀಗಾಗಿ, ಅಂಧರಿಗೆಂದೇ ಈ ಪಂದ್ಯಾವಳಿಯನ್ನು ಆಯೋಜಿಸಿದ್ದೇವೆ’ ಎನ್ನುತ್ತಾರೆ ಮಕ್ಕಳ ನೇತ್ರಶಾಸ್ತ್ರಜ್ಞ ಮತ್ತು ಶಂಕರ ಕಣ್ಣಿನ ಪ್ರತಿಷ್ಠಾನದ ಅಧ್ಯಕ್ಷ ಡಾ.ಕೌಶಿಕ್ ಮುರಳಿ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !