ಮಾಲಾಧಾರಿಗಳಿಂದ ರಕ್ತದಾನ

7

ಮಾಲಾಧಾರಿಗಳಿಂದ ರಕ್ತದಾನ

Published:
Updated:
Deccan Herald

ಸಿಂದಗಿ: ಅಯ್ಯಪ್ಪಸ್ವಾಮಿ ಮಾಲಾಧಾರಿ ಕಿರಣ ಅವರ 28ನೇ ಜನ್ಮದಿನದ ಅಂಗವಾಗಿ ಮಾಲಾಧಾರಿಗಳು ಮಂಗಳವಾರ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದರು.

ಇಲ್ಲಿಯ ಎಪಿಎಂಸಿ ಆವರಣದಲ್ಲಿನ ರೈತ ಭವನದಲ್ಲಿ ಮಂಗಳವಾರ 57 ಜನ ರಕ್ತದಾನ ಮಾಡಿದರು. ಇವರಲ್ಲಿ 22 ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ರಕ್ತದಾನ ಮಾಡಿದರು. ಈ ಸೇವಾ ಕಾರ್ಯ ಕಂಡು 35 ಜನ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.

ಜಿಲ್ಲಾ ಸರ್ಕಾರಿ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಸುಮಾ ಮಮದಾಪುರ ಮಾತನಾಡಿ, ರಕ್ತ ಸಂಗ್ರಹದ ಕೊರತೆ ಕಾಡುತ್ತಿದ್ದ ವಿಜಯಪುರ ಸರ್ಕಾರಿ ಆಸ್ಪತ್ರೆ ರಕ್ತನಿಧಿ ಕೇಂದ್ರಕ್ಕೆ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ರಕ್ತದಾನ ಮಾಡುವ ಮೂಲಕ ದೈವಿಸ್ವರೂಪರಾಗಿದ್ದಾರೆ ಎಂದರು.

ಸರ್ಕಾರಿ ಆಸ್ಪತ್ರೆಯ ರಕ್ತನಿಧಿ ಕೇಂದ್ರಕ್ಕೆ ರಕ್ತದಾನ ಮಾಡಿದರೆ ಶೇ 100ರಷ್ಟು ಉಪಯೋಗವಾಗುತ್ತದೆ. ಈ ರಕ್ತ ಬಡ ಜನರಿಗೆ ದೊರಕುತ್ತದೆ. ವಿಜಯಪುರದಲ್ಲಿ ರಕ್ತ ಸಂಗ್ರಹದ ಕೊರತೆ ಇದೆ ಎಂದೇ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಮೊರೆ ಹೋಗಲಾಗುತ್ತದೆ. ಆದರೆ ಸೊಲ್ಲಾಪುರದಿಂದ ಒಬ್ಬರಾದರೂ ಅಲ್ಲಿ ರಕ್ತ ಸಿಗುತ್ತಿಲ್ಲ ಎಂದು ಇಲ್ಲಿಗೆ ಬಂದಿರುವ ಉದಾಹರಣೆಗಳಿಲ್ಲ ಎಂದು ಡಾ.ಸುಮಾ ಹೇಳಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ದಿನಕ್ಕೆ 30 ಹೆರಿಗೆ ಆಗುತ್ತದೆ. ಪ್ರತಿ ಮಹಿಳೆಗೂ ರಕ್ತ ಅಗತ್ಯ. ಆದರೆ  ಸೊಲ್ಲಾಪುರಕ್ಕೆ ತೆರಳಿ ರಕ್ತ ತರಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿಂದಗಿ ಸರ್ಕಾರಿ ಆಸ್ಪತ್ರೆಯ ರಾಜು ನರಗೋದಿ ಮಾತನಾಡಿದರು. ಸಂತೋಷ ಗುರುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ಕಿರಣ, ಶಾಂತು ಕುಂಬಾರ, ರಾಜು ಉಪ್ಪಿನ, ಶಾಂತೂ ಹಿರೇಮಠ ಇದ್ದರು. ಆರೋಗ್ಯ ಇಲಾಖೆಯ ಎಂ.ಪಿ.ಸಾಗರ ಸ್ವಾಗತಿಸಿ, ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !