ರಕ್ತಕ್ಕೆ ಮಹತ್ವದ ಸ್ಥಾನ

7

ರಕ್ತಕ್ಕೆ ಮಹತ್ವದ ಸ್ಥಾನ

Published:
Updated:
Prajavani

ವಿಜಯಪುರ: ‘ಸಂಶೋಧನೆಯಿಂದ ರಕ್ತ ದೊರೆಯದು. ಮಾನವನ ದೇಹದಿಂದಲೇ ಪಡೆಯಬೇಕು. ಹೀಗಾಗಿ ರಕ್ತಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ’ ಎಂದು ಬಿಎಲ್‌ಡಿಇ ಸಂಸ್ಥೆಯ ಬ್ಲಡ್‌ ಬ್ಯಾಂಕ್‌ ಅಧಿಕಾರಿ ಡಾ.ಪ್ರಕಾಶ ಪಾಟೀಲ ತಿಳಿಸಿದರು.

ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್. ಆಯುರ್ವೇದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕ, ರೋಗ ನಿಧಾನ ವಿಭಾಗ ಹಾಗೂ ಬ್ಲಡ್ ಬ್ಯಾಂಕ್ ವತಿಯಿಂದ ರಾಷ್ಟ್ರೀಯ ಯುವ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ರಕ್ತವನ್ನು ಜೀವ ಎಂದು ಪರಿಗಣಿಸಲಾಗಿದ್ದು, ರಕ್ತವು ಮನುಷ್ಯನ ಅಗತ್ಯತೆಯಲ್ಲಿ ಒಂದಾಗಿದೆ. ತುರ್ತು ಸಂದರ್ಭಗಳಲ್ಲಿ ವ್ಯಕ್ತಿಗೆ ರಕ್ತವನ್ನು ನೀಡಲು, ಕೃತ್ರಿಮವನ್ನು ರಕ್ತ ತಯಾರಿಸುವಲ್ಲಿ ಮಾಡಿದ ಎಲ್ಲ ಸಂಶೋಧನೆಗಳು ವಿಫಲವಾಗಿವೆ. ನಾವು ರಕ್ತವನ್ನು ಮನುಷ್ಯನ ದೇಹದಿಂದ ಪಡೆಯಬೇಕು ಹೊರತು ಕೃತ್ರಿಮವಾಗಿ ಅಲ್ಲ’ ಎಂದರು.

ನಮ್ಮ ಬ್ಲಡ್ ಬ್ಯಾಂಕಿನಿಂದ ನಿಯಮಿತವಾಗಿ ರಕ್ತ ಪೂರೈಕೆ ಮಾಡಬೇಕಾದ ರೋಗಿಗಳಿಗೆ ಉಚಿತವಾಗಿ ರಕ್ತವನ್ನು ಪೂರೈಕೆ ಮಾಡಲಾಗುತ್ತಿದೆ. ಈ ಮಹತ್ತರ ಕಾರ್ಯಕ್ಕೆ ಇಂತಹ ರಕ್ತದಾನ ಶಿಬಿರಗಳು ತುಂಬ ಅನುಕೂಲಕರವಾಗಿವೆ. ಕಾರಣ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ರಕ್ತದಾನ ಮಾಡಿ, ರೋಗಿಗಳು ಆರೋಗ್ಯವಂತರಾಗಲು ಸಹಕರಿಸಬೇಕು ಎಂದರು.

ಪ್ರಾಚಾರ್ಯ ಡಾ.ಸಂಜಯ ಕಡ್ಲಿಮಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್. ಯೋಜನಾಧಿಕಾರಿ ಡಾ.ಸತೀಶ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರದಲ್ಲಿ 50 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.

ಡಾ.ಸೀತಾ ಬಿರಾದಾರ ಸ್ವಾಗತಿಸಿದರು. ಡಾ.ಜಾಸ್ಮಿನ್ ಉತ್ನಾಳ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಪೋಪಟ್ ರಾಠೋಡ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !