ಮೆಟ್ರೊ ಮಾರ್ಗದಲ್ಲಿ ದೋಷವಿಲ್ಲ: ಬಿಎಂಆರ್‌ಸಿಎಲ್‌

ಶುಕ್ರವಾರ, ಮೇ 24, 2019
24 °C

ಮೆಟ್ರೊ ಮಾರ್ಗದಲ್ಲಿ ದೋಷವಿಲ್ಲ: ಬಿಎಂಆರ್‌ಸಿಎಲ್‌

Published:
Updated:

ಬೆಂಗಳೂರು: ಸೌತ್‌ ಎಂಡ್‌ ಸರ್ಕಲ್‌ ಮೆಟ್ರೊ ನಿಲ್ದಾಣ ಸಮೀಪದ ಮಾರ್ಗದ 66 ಮತ್ತು 67ನೇ ಕಂಬಗಳ ಪೆಡಿಸ್ಟಲ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ಕುರಿತು ಬೆಂಗಳೂರು ಮೆಟ್ರೊ ರೈಲು ನಿಗಮ(ಬಿಎಂಆರ್‌ಸಿಎಲ್‌) ಸ್ಪಷ್ಟನೆ ನೀಡಿದೆ. 

‘ಪೆಡಿಸ್ಟಲ್‌ನಲ್ಲಿ ಎರಡು ಪದರಗಳಿರುತ್ತವೆ. ಆ ಪದರಗಳು ಬಿಟ್ಟುಕೊಂಡಾಗ ಬಿರುಕಿನಂತೆ ಕಾಣುತ್ತದೆ. ಎಲ್ಲ ಕಂಬಗಳಲ್ಲಿ ಈ ಲಕ್ಷಣ ಸಾಮಾನ್ಯ’ ಎಂದು ತಿಳಿಸಿದೆ.

ಮೆಟ್ರೊದ ಎತ್ತರಿಸಿದ ಮಾರ್ಗ ಹಾಗೂ ಆಧಾರಕಂಬದ ನಡುವಿನ ಚೌಕಾಕಾರದ ಕಾಂಕ್ರಿಟ್ ರಚನೆಯೇ ಪೆಡಿಸ್ಟಲ್.

‘ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ 67ನೇ ಕಂಬದ ಪರೀಕ್ಷೆ ನಡೆಸಲಾಗಿದೆ. 66 ಕಂಬದ ಪರೀಕ್ಷೆಯನ್ನು ಶುಕ್ರವಾರ ರಾತ್ರಿ ನಡೆಸಲಾಗುವುದು’ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ. 

‘ಪೆಡಿಸ್ಟಲ್‍ನಲ್ಲಿ ಬಿರುಕು ಇಲ್ಲದಿರುವುದರಿಂದ ರೈಲು ಕಾರ್ಯಾಚರಣೆ ಹಾಗೂ ಕಂಬದ ಭದ್ರತೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದ್ದರಿಂದ ಪ್ರಯಾಣಿಕರು ಸುರಕ್ಷಿತವಾಗಿ ಪ್ರಯಾಣ ಮಾಡಬಹುದು’ ಎಂದು ನಿಗಮ ತಿಳಿಸಿದೆ.

ಟ್ರಿನಿಟಿ ಮೆಟ್ರೊ ನಿಲ್ದಾಣ ಸಮೀಪದ ಎತ್ತರಿಸಿದ ಮಾರ್ಗದ ಡಕ್ಟ್‌ನಲ್ಲಿ ಕಳೆದ ಡಿಸೆಂಬರ್‌ನಲ್ಲಿ ಬಿರುಕು ಕಾಣಿಸಿಕೊಂಡು ಮೆಟ್ರೊ ಸಂಚಾರ ವ್ಯತ್ಯಯ ಉಂಟಾಗಿದ್ದನ್ನು ಸ್ಮರಿಸಬಹುದು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !