ನಾಲೆಯಲ್ಲಿ ಯುವಕನ ಶವ ಪತ್ತೆ

7

ನಾಲೆಯಲ್ಲಿ ಯುವಕನ ಶವ ಪತ್ತೆ

Published:
Updated:
Deccan Herald

ಸಂತೇಮರಹಳ್ಳಿ: ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿ ಸಮೀಪದ ಕಮರವಾಡಿ ಬಳಿಯ ಕಬಿನಿ ನಾಲೆಯಲ್ಲಿ ಗುರುವಾರ ಅವಿವಾಹಿತ ಯುವಕನ ಶವ ಪತ್ತೆಯಾಗಿದೆ.

ನಂಜನಗೂಡು ತಾಲ್ಲೂಕು ತಗಡೂರು ಸಮೀಪದ ಕೊತ್ತಯ್ಯನ ಹುಂಡಿ ಗ್ರಾಮದ ಆರ್.ಮಧುಕರ (27) ಮೃತರು.

 ಮಧುಕರ ಅಕ್ಟೋಬರ್‌ 2ರಂದು ತನ್ನ ಸ್ನೇಹಿತನೊಂದಿಗೆ ಅಳಗಂಚಿ ಸಮೀಪದಲ್ಲಿರುವ ಬೆಂಡಗಳ್ಳಿ ಬಳಿಯ ಕಬಿನಿ ನಾಲೆಗೆ ಹೋಗಿದ್ದರು. ಈ ವೇಳೆ ಚಪ್ಪಲಿ, ಬಟ್ಟೆಗಳನ್ನು ನಾಲೆಯ ದಡದಲ್ಲಿ ಇಟ್ಟು ನೀರಿಗೆ ಇಳಿದ ಸಂದರ್ಭದಲ್ಲಿ ಮಧುಕರ ಕೊಚ್ಚಿ ಹೋದರು ಎನ್ನಲಾಗದೆ. ಘಟನೆ ಬಳಿಕ ಸ್ನೇಹಿತ ನಾಪತ್ತೆಯಾಗಿದ್ದಾನೆ.

ಗುರುವಾರ ಕಮರವಾಡಿ ಗ್ರಾಮದ ಕಬಿನಿ ನಾಲೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಸಂತೇಮರಹಳ್ಳಿ ಪೊಲೀಸ್‌ ಸಿಬ್ಬಂದಿ ತನಿಖೆ ಕೈಗೊಂಡಾಗ ಮಧುಕರ ಎಂದು ಗೊತ್ತಾಗಿದೆ.

ಈ ಸಂಬಂಧ ಸಂತೇಮರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !