ಇಸ್ರೇಲ್‌ ವಾಯುದಾಳಿ: ಸಿರಿಯಾ ಆರೋಪ

ಶುಕ್ರವಾರ, ಜೂನ್ 21, 2019
24 °C
ಯೋಧ ಸಾವು l ಎರಡು ರಾಕೆಟ್ ನಾಶ l ಶಸ್ತ್ರಾಸ್ತ್ರ ಸಂಗ್ರಹಾಗಾರಕ್ಕೆ ಹಾನಿ

ಇಸ್ರೇಲ್‌ ವಾಯುದಾಳಿ: ಸಿರಿಯಾ ಆರೋಪ

Published:
Updated:
Prajavani

ಡಮಾಸ್ಕಸ್‌ (ಎಎಫ್‌ಪಿ): ಹಾಮ್ಸ್‌ನಲ್ಲಿನ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ಭಾನುವಾರ ಮಧ್ಯರಾತ್ರಿ ವಾಯುದಾಳಿ ನಡೆಸಿದೆ ಎಂದು ಸಿರಿಯಾ ಆರೋಪಿಸಿದೆ. 

‘ನಮ್ಮ ವಾಯುನೆಲೆಗಳ ಮೇಲೆ ಕಳೆದ 24 ಗಂಟೆಗಳಲ್ಲಿ ಎರಡು ಬಾರಿ ದಾಳಿ ನಡೆಸಿರುವ ಇಸ್ರೇಲ್‌, ಎರಡು ರಾಕೆಟ್‌ಗಳನ್ನು ನಾಶಗೊಳಿಸಿದೆ’ ಎಂದು ಸಿರಿಯಾದ ಅಧಿಕೃತ ಸುದ್ದಿ ಸಂಸ್ಥೆ ಸನಾ ಹೇಳಿದೆ. 

ದಾಳಿಯಲ್ಲಿ ಒಬ್ಬ ಯೋಧ ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಶಸ್ತ್ರಾಸ್ತ್ರ ಸಂಗ್ರಹಾಗಾರಕ್ಕೆ ಹಾನಿಯಾಗಿದೆ ಎಂದು ಅದು ಹೇಳಿದೆ. 

ಆದರೆ, ಬ್ರಿಟನ್‌ ಮೂಲದ ಮಾನವ ಹಕ್ಕುಗಳ ವೀಕ್ಷಣಾ ಸಮಿತಿಯು, ದಾಳಿಯಲ್ಲಿ ಒಬ್ಬ ಯೋಧ ಸೇರಿದಂತೆ ಐವರು ಸಾವಿಗೀಡಾಗಿದ್ದಾರೆ ಎಂದು ಹೇಳಿದೆ. 

ಇರಾನಿ ಯೋಧರು ಮತ್ತು ಹಿಜಬುಲ್ಲಾ ಅರೆಸೇನಾ ಪಡೆಗಳನ್ನೂ ಈ ವಾಯುನೆಲೆಯಲ್ಲಿ ಇರಿಸಲಾಗಿದೆ ಎಂದೂ ಸಿರಿಯಾ ಸೇನೆ ದೂರಿದೆ. 

ಸಿರಿಯಾ ಮೇಲೆ ದಾಳಿ ನಡೆಸುವುದಾಗಿ ಇಸ್ರೇಲ್‌ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಈ ವಾಯುದಾಳಿ ನಡೆದಿದೆ. 

ಕಾರ್‌ ಬಾಂಬ್‌ ಸ್ಫೋಟ 

ಅಝಾಜ್‌ (ಎಎಫ್‌ಪಿ): ಇಲ್ಲಿನ ಮಾರುಕಟ್ಟೆ ಮತ್ತು ಮಸೀದಿ ಬಳಿ ಭಾನುವಾರ ಸಂಭವಿಸಿದ ಕಾರ್‌ ಬಾಂಬ್‌ ಸ್ಫೋಟದಲ್ಲಿ 19 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.  ಮೃತಪಟ್ಟವರ ಪೈಕಿ ನಾಲ್ವರು ಮಕ್ಕಳೂ ಸೇರಿದ್ದಾರೆ. 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಭಾನುವಾರ ಸಂಜೆ ನೂರಾರು ಮಂದಿ ಮಸೀದಿಯಲ್ಲಿ ಪ್ರಾರ್ಥನೆಯಲ್ಲಿ ತೊಡಗಿದ್ದರು. ಅಲ್ಲದೆ, ಈದ್‌ ಉಲ್‌ ಫಿತ್ರ್‌ ಅಂಗವಾಗಿ ಮಾರುಕಟ್ಟೆಯಲ್ಲಿ ಹೊಸ ಬಟ್ಟೆ ಮತ್ತು ಉಡುಗೊರೆ ಖರೀದಿ ಮಾಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆದಿದೆ.  ಈವರೆಗೆ ಯಾರೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !