ಗಾಂಧಿ ತತ್ವಗಳಿಂದ ದೂರ ಉಳಿದ ಗುಜರಾತ್‌: ಚಿರಂಜೀವಿಸಿಂಗ್ ಬೇಸರ

7

ಗಾಂಧಿ ತತ್ವಗಳಿಂದ ದೂರ ಉಳಿದ ಗುಜರಾತ್‌: ಚಿರಂಜೀವಿಸಿಂಗ್ ಬೇಸರ

Published:
Updated:
Deccan Herald

ಬೆಂಗಳೂರು: ‘ಗಾಂಧೀಜಿಯವರ ಅಹಿಂಸಾ ತತ್ವ ಜೈನ ಧರ್ಮದಿಂದ ಬಂದದ್ದು. ಆದರೆ, ಗಾಂಧಿ ಜನಿಸಿದ ಗುಜರಾತ್‌ ಮಾತ್ರ ಅವರ ತತ್ವಗಳಿಂದ ದೂರ ಉಳಿದಿದೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿಸಿಂಗ್ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ನಡೆದ ಸಮಾಜಮುಖಿ ಪ್ರಕಾಶನದ ಚೊಚ್ಚಲ ಕೃತಿ ‘ಮಹಾಪಯಣ’ ಹಾಗೂ ಗಾಂಧಿ ವಿಶೇಷಾಂಕಗಳ ಬಿಡುಗಡೆ ಮಾಡಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾರತ ಸ್ವಾತಂತ್ರ್ಯದಲ್ಲಿ ಗಾಂಧೀಜಿ ಪಾತ್ರ ಏನು ಎಂಬುದು ಚರ್ಚೆಯಾಗಬೇಕಿದೆ. ಆಧುನಿಕ ಯುಗದಲ್ಲಿ ಗಾಂಧಿ ತತ್ವಗಳು ಎಷ್ಟು ಪ್ರಸ್ತುತ ಎಂಬುದರ ವಿಮರ್ಶೆ ಹಾಗೂ ಅವುಗಳ ಅನುಸರಣೆ ಬಗ್ಗೆ ಸ್ಪಷ್ಟವಾಗಬೇಕಿದೆ’ ಎಂದರು.

ರಾಜ್ಯಸಭಾ ಸದಸ್ಯ ಎಲ್.ಹನುಂತಯ್ಯ ಮಾತನಾಡಿ,‘ ಗಾಂಧೀಜಿಯವರಷ್ಟು ವೈವಿಧ್ಯಮಯ ವ್ಯಕ್ತಿ ಇನ್ನೊಬ್ಬರಿಲ್ಲ. ಹಾಗೆಯೇ ವೈರುಧ್ಯಗಳ ವ್ಯಕ್ತಿಯೂ ಹೌದು. ಗಾಂಧೀಜಿಯವರನ್ನು ಅತಿಯಾಗಿ ಟೀಕಿಸಿದವರು ಅಂಬೇಡ್ಕರ್ ಅವರು. ಆದರೆ, ಸಂವಿಧಾನ ರಚನೆಯಲ್ಲಿ ಅವರನ್ನು ರಚನಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ ಉದಾತ್ತ ವ್ಯಕ್ತಿ ಗಾಂಧಿ’ ಎಂದು ಕೊಂಡಾಡಿದರು.

ಸಾಹಿತಿ ಕೆ.ಪುಟ್ಟಸ್ವಾಮಿ ಮಾತನಾಡಿದರು. ಬಿ.ಎನ್.ಬಚ್ಚೇಗೌಡ ಅಧ್ಯಕ್ಷತೆ ವಹಿಸಿದ್ದರು. 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !