‘ಪ್ರಸಾರ ಭಾರತಿ ಅಲ್ಲ, ಪ್ರಚಾರ ಭಾರತಿ’

7

‘ಪ್ರಸಾರ ಭಾರತಿ ಅಲ್ಲ, ಪ್ರಚಾರ ಭಾರತಿ’

Published:
Updated:
Deccan Herald

ಬೆಂಗಳೂರು: ‘ಆಕಾಶವಾಣಿ ಯಾವತ್ತೂ ಒಂದು ಮಾಧ್ಯಮ ಸಂಸ್ಥೆಯಾಗಿ ಬೆಳೆಯಲಿಲ್ಲ. ಪ್ರಸಾರ ಭಾರತಿ, ಸರ್ಕಾರದ ಪರ ಪ್ರಚಾರ ಭಾರತಿಯಾಗಿ ಬದಲಾಗಿದೆ’ ಎಂದು ಆಕಾಶವಾಣಿಯ ನಿವೃತ್ತ ಉದ್ಘೋಷಕ ಕೆ.ಟಿ.ಕೃಷ್ಣಕಾಂತ್‌ ಭಾನುವಾರ ಇಲ್ಲಿ ವಿಷಾದ ವ್ಯಕ್ತಪಡಿಸಿದರು.

‘ನುಡಿನುಡಿತ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಆಕಾಶವಾಣಿ ಉದ್ಯೋಗಿಗಳು ಅನುಭವಿಸುತ್ತಿರುವ ಶೋಷಣೆ, ಕರಾಳ ಮುಖಗಳನ್ನು ಬಯಲಿಗೆಳೆಯುವ ಅಗತ್ಯವಿದೆ’ ಎಂದರು. 

ಸಾಹಿತಿ ನಾ.ದಾಮೋದರ ಶೆಟ್ಟಿ, ‘ಕೃತಿಯಲ್ಲಿ, ಬಾಲ್ಯದ ತುಂಟಾಟ, ಹರಿಕಥೆಯನ್ನು ಮೈಗೂಡಿಸಿಕೊಂಡು ಬೆಳೆದ ರೀತಿ, ವೃತ್ತಿ ಜೀವನದ ಒಳಹೋಗುಗಳು, ತಂದೆ–ತಾಯಿಯ ಪಾತ್ರ ಹಾಗೂ ಬದುಕನ್ನು ಕಟ್ಟಿಕೊಳ್ಳಲು ಪಟ್ಟ ಪಾಡು... ಎಲ್ಲವನ್ನೂ ಒಪ್ಪವಾಗಿ ಸಾದರಪಡಿಸಿದ್ದಲ್ಲದೆ, ಒಂದು ಸಮಗ್ರ ಕೃತಿ ಹೇಗಿರಬೇಕೆಂಬುದನ್ನು ಇದರಿಂದ ತಿಳಿದುಕೊಳ್ಳಬಹುದು’ ಎಂದು ಅಭಿಪ್ರಾಯಪಟ್ಟರು. 

ಕೃತಿ ಹೆಸರು: ನುಡಿನುಡಿತ
ಲೇಖಕಿ: ನಾರಾಯಣೀ ದಾಮೋದರ್‌
ಬೆಲೆ : ₹400
ಪುಟಗಳು : 434
ಪ್ರಕಾಶನ : ನಿರಂತರ

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !