ಬೋರಗಿಯ ನೀರಿನ ಸಮಸ್ಯೆ ನೀಗಿಸಿ

ಶುಕ್ರವಾರ, ಏಪ್ರಿಲ್ 26, 2019
31 °C

ಬೋರಗಿಯ ನೀರಿನ ಸಮಸ್ಯೆ ನೀಗಿಸಿ

Published:
Updated:
Prajavani

ಸಿಂದಗಿ ತಾಲ್ಲೂಕಿನ ಗುಬ್ಬೇವಾಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೋರಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಜನರು ಕುಡಿಯಲು ನೀರು ಸಿಗದೆ ನಿತ್ಯ ಪರದಾಡುತ್ತಿದ್ದಾರೆ. ಬೇಸಿಗೆ ಬಿಸಿಲಿನ ಏರಿಕೆಯಿಂದ ಅಂತರ್ಜಲ ಮಟ್ಟ ಕುಸಿದು ಗ್ರಾಮದಲ್ಲಿನ ಬೋರ್‌ವೆಲ್, ಬಾವಿ, ಕೈ ಪಂಪುಗಳಲ್ಲಿ ನೀರಿನ ಪ್ರಮಾಣ ಬತ್ತುತ್ತಿದೆ. ಬರುವ ಅಲ್ಪ ಸ್ವಲ್ಪ ನೀರು ಕೂಡಾ ಕಲುಷಿತಗೊಂಡಿದೆ.

ಇದರಿಂದ ಜನರಿಗೆ ರೋಗ ಬರುವ ಸಾಧ್ಯತೆಗಳಿವೆ. ಜನರು ತಮ್ಮ ಎಲ್ಲಾ ಕೆಲಸ ಬಿಟ್ಟು, ನೀರಿಗಾಗಿಯೇ ನಿಲ್ಲುವಂತಾಗಿದೆ. ಗ್ರಾಮದಲ್ಲಿ ಕೆರೆ ಇದ್ದರೂ; ನೀರಿನ ದಾಹ ಇಂಗುತ್ತಿಲ್ಲ. ಜನರ ಸಹನೆಯ ಕಟ್ಟೆಯೊಡೆಯುವ ಮುನ್ನವೇ ಸಂಬಂಧಿಸಿದವರು ಎಚ್ಚೆತ್ತುಕೊಂಡು ನೀರು ಪೂರೈಸಬೇಕಿದೆ.

ಸದ್ದಾಂ ಆಲಗೂರ, ಬೋರಗಿ

ಕಂಪ್ಯೂಟರ್‌ ಸೌಲಭ್ಯ ಒದಗಿಸಿ

ದೇವರಹಿಪ್ಪರಗಿ ತಾಲ್ಲೂಕಿನ ಭೈರವಾಡಗಿ ಗ್ರಾಮದ ಜಿ.ಎಚ್.ಪಾಟೀಲ ಸರ್ಕಾರಿ ಪ್ರೌಢಶಾಲೆಯಲ್ಲಿ ಐದಾರು ವರ್ಷಗಳಿಂದ 10ಕ್ಕೂ ಹೆಚ್ಚು ಕಂಪ್ಯೂಟರ್‌ ಬಳಕೆಯಾಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಸಿಗದಾಗಿದೆ.

ಸಂಬಂಧಿಸಿದವರಿಗೆ ಹಲ ಬಾರಿ ಮನವಿ ಮಾಡಿದರೂ ಸ್ಪಂದನೆ ಶೂನ್ಯವಾಗಿದೆ. ಇನ್ನಾದರೂ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ಸಿಗುವಂತಾಗಲಿ.

ಅಶೋಕ ಬಿರಾದಾರ, ಭೈರವಾಡಗಿ

ಕಿರಿಕಿರಿ ತಪ್ಪಿಸಿ

ವಿಜಯಪುರದ ಸಿದ್ಧೇಶ್ವರ ಗುಡಿ ರಸ್ತೆಯನ್ನು ಏಕಮುಖ ಸಂಚಾರ ರಸ್ತೆಯನ್ನಾಗಿ ಮಾಡಿರುವುದು ಸಂತಸದ ಸಂಗತಿ. ಆದರೆ ಪ್ರತಿ ಭಾನುವಾರ ರಾಮಮಂದಿರ ರಸ್ತೆಯಲ್ಲಿ ವಾರದ ಸಂತೆ ನಡೆಯಲಿದೆ. ಈ ಸಂದರ್ಭ ಕೋಟೆಗೋಡೆವರೆಗೂ ವಾಹನ ಚಾಲನೆ ಕಷ್ಟಕರವಾಗಲಿದೆ. ಇದಕ್ಕೆ ಸಂಬಂಧಿಸಿದವರು ಸೂಕ್ತ ಪರಿಹಾರ ಕಲ್ಪಿಸಬೇಕಿದೆ.

ಜೆ.ಜೆ.ದೊಡ್ಡಮನಿ, ಆದರ್ಶನಗರ, ವಿಜಯಪುರ

ಅಧಿಕಾರಿಗಳ ಪ್ರತಿಕ್ರಿಯೆ

ರೈತರಿಂದ ಖರೀದಿಸಿರುವ ತೊಗರಿಯ ಹಣವನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡುವಂತೆ, ಮಾರ್ಚ್‌ 14ರ ‘ಪ್ರಜಾವಾಣಿ’ ಸಂಚಿಕೆಯ ಕುಂದು–ಕೊರತೆಯಲ್ಲಿ ಗಮನ ಸೆಳೆಯಲಾಗಿತ್ತು. ಇದಕ್ಕೆ ದೇವರಹಿಪ್ಪರಗಿ ತಾಲ್ಲೂಕು ತಹಶೀಲ್ದಾರ್ ರಮೇಶ ಅಳವಂಡಿಕರ ಪ್ರತಿಕ್ರಿಯಿಸಿದ್ದು, ಶೀಘ್ರದಲ್ಲೇ ಕೃಷಿ ಇಲಾಖೆ, ಫೆಡರೇಷನ್ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಭೈರವಾಡಗಿ ಗ್ರಾಮಕ್ಕೆ ಈಗಾಗಲೇ ಎರಡು ಬಸ್ ಸಂಚರಿಸುತ್ತಿದ್ದು, ಬಸವನಬಾಗೇವಾಡಿ ಸಾರಿಗೆ ನಿಯಂತ್ರಕರ ಜತೆ ಸಮಾಲೋಚಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ದೇವರಹಿಪ್ಪರಗಿಯ ಸಾರಿಗೆ ನಿಯಂತ್ರಕ ಎಸ್‌.ಜಿ.ಆವುಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ನೀವೂ ಬರೆಯಿರಿ...

ನಿಮ್ಮೂರಿನ ಸಮಸ್ಯೆ ಕುರಿತು ‘ಪ್ರಜಾವಾಣಿ’ಯ ಕುಂದು ಕೊರತೆ ಅಂಕಣಕ್ಕೆ ನೀವೂ ಬರೆಯಬಹುದು. ನೂರು ಪದಗಳಲ್ಲಿ ಸಾರ್ವಜನಿಕ ಸಮಸ್ಯೆಗಳನ್ನು ಬರೆದು ಕಳುಹಿಸಿ. ಜತೆಗೆ ನಿಮ್ಮ ಸಂಪರ್ಕ ಸಂಖ್ಯೆಯನ್ನೂ ನಮೂದಿಸಿ.
ಪತ್ರಗಳನ್ನು ಕಳುಹಿಸಬೇಕಾದ ವಿಳಾಸ:

ವರದಿಗಾರರು, ‘ಪ್ರಜಾವಾಣಿ’ ಕಚೇರಿ, ಸಾಂಗಲೀಕರ್‌ ಬಿಲ್ಡಿಂಗ್‌, ಸಕಾಫ್‌ ರೋಜಾ ಬಡಾವಣೆ, ಕೇಂದ್ರ ಬಸ್‌ ನಿಲ್ದಾಣದ ಸಮೀಪ, ವಿಜಯಪುರ, ದೂರವಾಣಿ ಸಂಖ್ಯೆ: 08352–221515, 9448470153. ಇ–ಮೇಲ್‌ ವಿಳಾಸ: pvvijayapur@prajavani.co.in, prajavani.bijapur@gmail ವಾಟ್ಸ್‌ ಆ್ಯಪ್‌ ನಂಬರ್‌ 9980339732

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !