‘ಬೋಸ್ ಶಿಸ್ತು, ದೇಶಭಕ್ತಿ ಯುವಕರಿಗೆ ಮಾದರಿ’

7

‘ಬೋಸ್ ಶಿಸ್ತು, ದೇಶಭಕ್ತಿ ಯುವಕರಿಗೆ ಮಾದರಿ’

Published:
Updated:
Prajavani

ವಿಜಯಪುರ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ಶಾಲಾ–ಕಾಲೇಜು, ಸಂಘ–ಸಂಸ್ಥೆಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್‌ಚಂದ್ರ ಬೋಸ್‌ ಜಯಂತಿ ಆಚರಿಸಲಾಯಿತು.

ಶಾಂತಿನಿಕೇತನ ಶಿಕ್ಷಣ ಸಂಸ್ಥೆ: ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಜಯಂತಿ ಆಚರಿಸಲಾಯಿತು.

ಪ್ರಾಚಾರ್ಯ ಚಂದನಗೌಡ ಮಾಲಿಪಾಟೀಲ, ದೇಶಭಕ್ತಿಯ ವಿಷಯ ಬಂದರೇ ನಮಗೆ ಮೊದಲಿಗೆ ನೆನಪಾಗುವುದು ಸುಭಾಷ್‌ಚಂದ್ರ ಬೋಸರು. ಅವರ ಶಿಸ್ತು, ದೇಶಭಕ್ತಿ ಇಂದಿನ ಯುವಕರಿಗೆ ಮಾದರಿಯಾಗಿದೆ ಎಂದರು.

ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ, ಎ.ಎಚ್.ಸಗರ, ಆನಂದ ಕೋರಿಕಂತಿಮಠ, ಮಧುಮತಿ ಪಡತಾರೆ, ಸೀಮಾ ಸದಲಗಾ, ಗಿರಿಜಾ ಕರಡಿ, ಸಾವಿತ್ರಿ, ಮೀನಾಕ್ಷಿ ಹಿಪ್ಪರಗಿ, ಸಮೀನಾ ತೊರವಿ, ಸುರೇಖಾ ಪಾಟೀಲ, ಇಲಿಯಾಸ್, ವೈಶಂಪಾಯನ, ಹಫೀಜ್, ಸರೋಜಾ ಕರ್ಕಳಿ, ಶೋಭಾ ಕೂಡಗಿ, ಎಸ್.ಎ.ಹುಗ್ಗಿ, ಭಾರತಿ ಪಾಟೀಲ, ಅನಿಲ ಬಾಗೇವಾಡಿ, ವಿದ್ಯಾಭಾರತಿ, ದೀಪಾ ತಿಳಿಗೋಳ ಹಾಗೂ ವಿದ್ಯಾರ್ಥಿಗಳು ಇದ್ದರು.

ಎಕ್ಸಲಂಟ್‌ ಪ್ರಾಥಮಿಕ, ಪ್ರೌಢಶಾಲೆ: ನಗರದ ಎಕ್ಸಲಂಟ್‌ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸುಭಾಷ್‌ಚಂದ್ರ ಬೋಸ್‌ ಜಯಂತಿ ಆಚರಿಸಲಾಯಿತು.

ನಿವೃತ್ತ ಪ್ರಾಚಾರ್ಯ ಎಂ.ಐ.ಹೊರಪೇಟ ಮಾತನಾಡಿ, ‘ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎಂಬಂತೆ ತಂದೆ ತಾಯಿಗಳೇ ಜಗತ್ತಿಗೆ ಬೆಳಕನ್ನು ಕೊಡುವ ಕಣ್ಮಣಿಗಳು. ಬ್ರಿಟಿಷರ ದಬ್ಬಾಳಿಕೆಯಲ್ಲಿ ನರಳುತ್ತಿದ್ದ ಜನರನ್ನು ರಕ್ಷಿಸಲು ದಿಟ್ಟತನದಿಂದ ಹೋರಾಟ ಮಾಡಿದವರು ಸುಭಾಷ್‌ಚಂದ್ರ ಬೋಸ್‌. ದೇಶ ಸೇವೆಗಾಗಿ ಮಗನನ್ನು ಕೊಟ್ಟ ಬೋಸರ ತಾಯಿ ಪದ್ಮಾವತಿದೇವಿಯನ್ನು ಸಹ ಪ್ರತಿಯೊಬ್ಬರು ನೆನೆಯಬೇಕು’ ಎಂದರು.

ರಾಜಶೇಖರ ಕೌಲಗಿ ಅಧ್ಯಕ್ಷತೆ ವಹಿಸಿದ್ದರು. ಸುಮಾ ಮಿರಗಿ, ಪಿ.ಬಿ.ಕೊಳಮೆಲಿ ಮಾತನಾಡಿದರು. ಮುಖ್ಯೋಪಾಧ್ಯಾಯ ಎಂ.ಐ.ಬಿರಾದಾರ, ಎಂ.ಎಚ್.ಹುಗ್ಗೇನವರ, ಆರ್.ಕೆ.ದೇಶಪಾಂಡೆ, ರೇಖಾ ಮಾಳಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಎಸ್.ಐ.ಬಿರಾದಾರ ಸ್ವಾಗತಿಸಿದರು. ಜಯಶ್ರೀ ಗುಡ್ಡದ ನಿರೂಪಿಸಿದರು. ಎ.ಬಿ.ಗೊಬ್ಬೂರ ವಂದಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !