ಪಾರಿವಾಳದ ಆಸೆಗೆ ಜೀವ ತೆತ್ತ ಬಾಲಕ
ಚಾಮರಾಜನಗರ: ಚನ್ನಪ್ಪನಪುರ ಗ್ರಾಮದ ವೀರಭದ್ರಸ್ವಾಮಿ ದೇವಸ್ಥಾನದ ಗೋಪುರ ಏರಿ ಪಾರಿವಾಳ ಹಿಡಿಯಲು ಹೋದ ಬಾಲಕ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ.
ಗುರುವಾರ ಸಂಜೆ ಘಟನೆ ನಡೆದಿದ್ದು, ತಾಲ್ಲೂಕಿನ ಅಮಚವಾಡಿ ಗ್ರಾಮದ ಕಿಕ್ಕೇರಿ ಬಸವಶೆಟ್ಟಿ ಅವರ ಮಗ ಶಿವು (17) ಮೃತಪಟ್ಟಿರುವ ಬಾಲಕ.
ಶಿವು ಆಗಾಗ ಅಮಚವಾಡಿ ಗ್ರಾಮದ ಸಮೀಪವಿರುವ ಚನ್ನಪ್ಪನಪುರ ಗ್ರಾಮದ ವೀರಭದ್ರಸ್ವಾಮಿ ದೇವಸ್ಥಾನಕ್ಕೆ ಹೋಗುತ್ತಿದ್ದ. ಈ ವೇಳೆ ಪಾರಿವಾಳಗಳನ್ನು ಹಿಡಿಯುತ್ತಿದ್ದ. ಅದರಂತೆ ಗುರುವಾರ ಕೂಡ ದೇವಸ್ಥಾನಕ್ಕೆ ತೆರಳಿ ಪಾರಿವಾಳ ಹಿಡಿಯಲು ಗೋಪುರ ಏರಿದ್ದಾನೆ. ಈ ಸಮಯದಲ್ಲಿ ಕಾಲುಜಾರಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಮುಂಜಾನೆ ದೇವಸ್ಥಾನಕ್ಕೆ ವಾಯುವಿಹಾರಿಗಳು ಹೋದಾಗ ಈ ವಿಷಯ ತಿಳಿದಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬರಹ ಇಷ್ಟವಾಯಿತೆ?
0
0
0
0
0
0 comments
View All