ವಾಯುಪಡೆ ಬಲ ಹೆಚ್ಚಿಸಿದ ಬ್ರಹ್ಮೋಸ್‌ ಪರೀಕ್ಷೆ

ಮಂಗಳವಾರ, ಜೂನ್ 18, 2019
29 °C

ವಾಯುಪಡೆ ಬಲ ಹೆಚ್ಚಿಸಿದ ಬ್ರಹ್ಮೋಸ್‌ ಪರೀಕ್ಷೆ

Published:
Updated:
Prajavani

ನವದೆಹಲಿ: ರಷ್ಯಾ ನಿರ್ಮಿತ ಎಸ್‌ಯು–30ಎಂಕೆಐ ಫೈಟರ್‌ ಜೆಟ್‌ಗಳಿಂದ ಚಿಮ್ಮಿದ ಬ್ರಹ್ಮೋಸ್‌ ಕ್ಷಿಪಣಿ ನಿಗದಿತ ಗುರಿ ತಲುಪುವ ಮೂಲಕ ಶತ್ರು ಪಾಳೆಯ ಮೇಲೆ ವೈಮಾನಿಕ ಪ್ರಹಾರ ನಡೆಸುವ ವಾಯುಪಡೆ ಬಲಕ್ಕೆ ಶಕ್ತಿ ತುಂಬಿದೆ.

ದೇಶದ ದಕ್ಷಿಣ ಭಾಗದಲ್ಲಿರುವ ವಾಯುನೆಲೆಯಿಂದ ಬುಧವಾರ ನಭಕ್ಕೆ ಹಾರಿದ ಎಸ್‌ಯು–20ಎಂಕೆಐ, 300 ಕಿ.ಮೀ ದೂರ ಕ್ರಮಿಸಿ, ಕಾರ್‌ನಿಕೋಬಾರ್‌ ದ್ವೀಪದ ಭೂಪ್ರದೇಶದಲ್ಲಿ ಗುರುತಿಸಲಾಗಿದ್ದ ಗಮ್ಯ ಸ್ಥಾನಕ್ಕೆ ಕ್ಷಿಪಣಿಯನ್ನು ಹಾರಿಸಿತು. ವಾಯುಪಡೆ ಅಧಿಕಾರಿಗಳಲ್ಲದೇ, ಡಿಆರ್‌ಡಿಒ ಹಾಗೂ ಬ್ರಹ್ಮೋಸ್‌ ಏರೋಸ್ಪೇಸ್‌ನ ವಿಜ್ಞಾನಿಗಳು ಹಾಗೂ ಎಂಜಿನಿಯರ್‌ಗಳು ಈ ಯಶಸ್ವಿ ಕಾರ್ಯಾಚರಣೆಗೆ ಸಾಕ್ಷಿಯಾದರು.

ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂಬ ವಾಯಪಡೆಯ ನಿರ್ಧಾರ ಈ ಪರೀಕ್ಷೆಯಿಂದ ಮತ್ತಷ್ಟೂ ಗಟ್ಟಿಗೊಳ್ಳಲಿದೆ ಎಂಬ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

‘ಸಾಗರದಲ್ಲಿರುವ ಗುರಿ ತಲುಪಬಲ್ಲ ಹಾಗೂ ನೆಲದಲ್ಲಿನ ಗುರಿ ಮುಟ್ಟಬಲ್ಲ ಪರೀಕ್ಷೆಗಳು ಯಶಸ್ವಿಯಾಗಿ ನೆರವೇರಬೇಕು ಎಂಬುದು ವಾಯುಪಡೆಯ ಬೇಡಿಕೆ. ಹೀಗಾಗಿ ತಿಂಗಳೊಳಗಾಗಿ ಮತ್ತೊಂದು ಪರೀಕ್ಷೆಯನ್ನು ನಡೆಸಲಾಗುತ್ತದೆ. ಆ ನಂತರ 300 ಕಿ.ಮೀ. ದೂರ ಕ್ರಮಿಸುವ ಈ ಕ್ಷಿಪಣಿ ವಾಯುಪಡೆ ಬತ್ತಳಿಕೆ ಸೇರಲಿದೆ’ ಎಂದು ಬ್ರಹ್ಮೋಸ್‌ ಏರೋಸ್ಪೇಸ್‌ ಅಧಿಕಾರಿಗಳು ಹೇಳಿದರು.

ಸದ್ಯ, ನೌಕಾಪಡೆಯ 11 ಯುದ್ಧನೌಕೆಗಳಲ್ಲಿ  ಬ್ರಹ್ಮೋಸ್‌ ಕ್ಷಿಪಣಿಗಳನ್ನು ಅಳವಡಿಸಿದ್ದರೆ, ಸೇನೆಯ ಮೂರು ರೆಜಿಮೆಂಟ್‌ಗಳ ಬಳಿ ಈ ಪ್ರಬಲ ಕ್ಷಿಪಣಿ ವ್ಯವಸ್ಥೆ ಇದೆ. ವಾಯುಪಡೆಯೂ ಬ್ರಹ್ಮೋಸ್‌ ಕ್ಷಿಪಣಿಗಳನ್ನು ಹೊಂದಿದರೆ, ಅತಿವೇಗದಲ್ಲಿ ಗುರಿ ತಲುಪಬಲ್ಲ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದ ವಿಶ್ವದ ಮೊದಲ ಮತ್ತು ಏಕೈಕ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತದ್ದಾಗಲಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !