ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಪ್ರಾಯೋಜಿತ ಲೇಖನ

ನಿಮ್ಮ ಮುಂದಿನ ಫೋನ್‌ ಆಯ್ಕೆ 'Redmi Note 11 Pro' ಸರಣಿಯದ್ದೇ ಆಗಿರಲು ಇರುವ 11 ಪ್ರಮುಖ ಕಾರಣಗಳು

Last Updated 6 ಮಾರ್ಚ್ 2022, 15:07 IST
ಅಕ್ಷರ ಗಾತ್ರ

Redmi ತನ್ನ ಹೊಚ್ಚ ಹೊಸ 'Redmi Note 11 Pro'  ಸರಣಿಯ ಫೋನ್‌ಗಳನ್ನು ತಮ್ಮೆದುರು ಇಡಲು ಸಜ್ಜಾಗಿದೆ. ಉತ್ಕೃಷ್ಟ ಫೀಚರ್‌ಗಳೊಂದಿಗೆ 'Redmi Note 11 Pro Plus 5G’ ಹಾಗೂ ‘Redmi Note 11 Pro' ಹೊರ ಬರುತ್ತಿದ್ದು, ಈ ಬೆಲೆಯಲ್ಲಿ ದೊರೆಯಲಿರುವ ಅತ್ಯುತ್ತಮ ಫೋನ್‌ ಆಗಿ ಗುರುತಿಸಿಕೊಳ್ಳಲಿವೆ.

ನಂಬಿಕೆ ಆಗುತ್ತಿಲ್ಲವೇ? ಹಾಗಾದರೆ, ಈ 11 ಕಾರಣಗಳನ್ನು ಓದಿ:

1. ಫೋನ್‌ನ ಮುಖ್ಯ ಕ್ಯಾಮೆರಾದಲ್ಲಿ 108 MP ಇಮೇಜ್‌ ಸೆನ್ಸರ್‌ ಅಳವಡಿಸಲಾಗಿದೆ. ಮಧ್ಯಮ ಶ್ರೇಣಿಯ ಫೋನ್‌ಗಳಲ್ಲಿ ಇಂಥ ಗುಣಮಟ್ಟದ ಕ್ಯಾಮೆರಾ ಬಳಕೆಯಾಗಿರುವುದು ಅತಿ ಅಪರೂಪವಾಗಿದೆ. 

2. Redmi Note 11 Pro ಫೋನ್‌ನಲ್ಲಿ AMOLED ಸ್ಕ್ರೀನ್‌ ಅಳವಡಿಸಲಾಗಿದ್ದು, ಬಣ್ಣಗಳ ಅತ್ಯುತ್ತಮ ಅನುಭವ ಸಿಗಲಿದೆ.

3. 120 ಹರ್ಟ್ಸ್‌ ರಿಫ್ರೆಷ್ ರೇಟ್‌ ಇರುವುದರಿಂದ ಡಿಸ್‌ಪ್ಲೇನಲ್ಲಿ ಯಾವುದೇ ಆ್ಯನಿಮೇಷನ್‌ ಅಥವಾ ದೃಶ್ಯಗಳನ್ನು ನೋಡುವಾಗ ಅಥವಾ ಕಾರ್ಯಾಚರಿಸುವಾಗ ವಿಳಂಬ ಎದುರಾಗುವುದಿಲ್ಲ. ಬಹಳ ಸರಾಗವಾಗಿ ಮತ್ತು ಅತ್ಯಂತ ವೇಗವಾಗಿ ಕಾರ್ಯಾಚರಣೆ ಸಾಧ್ಯವಾಗುತ್ತದೆ.

4. ನೇರವಾಗಿ ಸೂರ್ಯನ ಬೆಳಕಿನಲ್ಲೂ ಸುಲಭವಾಗಿ ಸ್ಕೀನ್‌ನಲ್ಲಿ ಓದಲು 1200ನಿಟ್ಸ್‌ ಬ್ರೈಟ್‌ನೆಸ್‌ ಜೊತೆಗೆ ರೀಡಿಂಗ್‌ ಮೋಡ್‌ 3.0 ವ್ಯವಸ್ಥೆ ಅನುವಾಗಲಿದೆ.

5. ಜಗತ್ತಿನ ಅತ್ಯಂತ ತೆಳುವಾದ ಅಲ್ಟ್ರಾ–ಹೈ ರೆಸಲ್ಯೂಷನ್‌ ಎಚ್‌ಎಂ2 ಇಮೇಜ್‌ ಸೆನ್ಸರ್‌ ಹಾಗೂ 9 ಇನ್‌ 1 ಪಿಕ್ಸೆಲ್‌ ಬಿನ್ನಿಂಗ್ ತಂತ್ರಜ್ಞಾನ ಒಳಗೊಂಡಿದ್ದು, ಮಂದ ಬೆಳಕಿನಲ್ಲೂ ಉತ್ತಮ ಚಿತ್ರಗಳನ್ನು ಸೆರೆ ಹಿಡಿಯುವುದು ಸಾಧ್ಯವಾಗುತ್ತದೆ.

6. ಅತ್ಯಂತ ವೇಗವಾಗಿ ಚಾರ್ಜ್‌ ಮಾಡಲು 67 ವ್ಯಾಟ್‌ ಸೋನಿಕ್‌ ಚಾರ್ಜ್‌ 3.0 ಅಳವಡಿಸಲಾಗಿದ್ದು, ಕೇವಲ 15 ನಿಮಿಷ ಚಾರ್ಜ್ ಮಾಡಿ ಇಡೀ ದಿನ ಫೋನ್‌ ಬಳಸಬಹುದು.

7. Redmi Note 11 Pro ಸರಣಿಯ ಫೋನ್‌ಗಳಲ್ಲಿ 5000mAh ಬ್ಯಾಟರಿ ಇದ್ದು, ಚಾರ್ಜಿಂಗ್‌ ಬಗ್ಗೆ ಯೋಚಿಸದೆ ದಿನವಿಡೀ ಫೋನ್‌ನಲ್ಲಿ ಕಾರ್ಯಾಚರಿಸಬಹುದು.

8. 'Redmi Note 11 Pro Plus 5G' ಫೋನ್‌ನಲ್ಲಿ ಅತ್ಯಾಧುನಿಕ 5ಜಿ ತಂತ್ರಜ್ಞಾನ ವ್ಯವಸ್ಥೆ ಇದ್ದು, ಕಡಿಮೆ 5ಜಿ ಬ್ಯಾಂಡ್‌ಗಳನ್ನು ಹೊಂದಿರುವ ಇತರ 5ಜಿ ಫೋನ್‌ಗಳಿಗಿಂತ ಶ್ರೇಷ್ಠವಾಗಿದೆ.

9. ಸ್ಮಾರ್ಟ್‌ಫೋನ್‌ ಬಿಸಿಯಾಗದಂತೆ ತಡೆಯಲು ಲಿಕ್ವಿಡ್‌ ಕೂಲಿಂಗ್‌ ತಂತ್ರಜ್ಞಾನವನ್ನು 'Redmi Note 11 Pro Plus 5G' ಫೋನ್‌ನಲ್ಲಿ ಬಳಸಲಾಗಿದೆ. ಬಿಸಿಯಾಗದಂತೆ ತಡೆಯುವ ವ್ಯವಸ್ಥೆಯು ಈ ದರ ಶ್ರೇಣಿಯ ಯಾವುದೇ ಫೋನ್‌ಗಳಿಗಿಂತಲೂ ಉತ್ತಮವಾಗಿದೆ.

10.  'Redmi Note 11 Pro Plus 5G' ಫೋನ್‌ನಲ್ಲಿ ಅತ್ಯಾಧುನಿಕ 5ಜಿ ತಂತ್ರಜ್ಞಾನ ಒಳಗೊಂಡಿರುವ Qualcomm® Snapdragon™ 695 ಪ್ರೊಸೆಸರ್‌ ಅಳವಡಿಸಲಾಗಿದೆ. ಇದರಿಂದಾಗಿ ಫೋನ್‌ನ ಕಾರ್ಯಾಚರಣೆಯು ಸರಾಗವಾಗಿ ಮತ್ತು ವೇಗವಾಗಿ ನಡೆಯಲಿದೆ.

11.  ಈ ಎಲ್ಲವನ್ನೂ ₹20,000ಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಪಡೆಯಲಿದ್ದೀರಿ!!  'Redmi Note 11 Pro' ಸರಣಿಯ ಫೋನ್‌ಗಳು ಕೇವಲ ಗೇಮ್‌ ಚೇಂಜರ್‌ ಮಾತ್ರವಲ್ಲ, ಇದು ಇಡೀ ಗೇಮ್ ಅನ್ನೇ ಮರು ವ್ಯಾಖ್ಯಾನಿಸಲಿದೆ.
 

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT
ADVERTISEMENT