ಮಂಗಳವಾರ, ಅಕ್ಟೋಬರ್ 27, 2020
27 °C

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ರ ಖಾಸಗಿತನದ ಸುರಕ್ಷತೆ: ಹೊಸ ತಲೆಮಾರಿನವರಿಗೆ ಭಾರಿ ಪ್ರೀತಿ

ಪ್ರಾಯೋಜಿತ ಬರಹ Updated:

ಅಕ್ಷರ ಗಾತ್ರ : | |

ಕ್ಷಣಾರ್ಧದಲ್ಲೇ ಖಾಸಗಿ ಸ್ಕ್ರೀನ್‌ನಿಂದ ಸಾರ್ವಜನಿಕವಾಗಿ ಕಾಣಿಸಬಹುದಾದ ಸ್ಕ್ರೀನ್‌ಗೆ ಬದಲಾಗಲು ಸಹಕಾರಿಯಾಗಿದೆ 'ಕ್ವಿಕ್‌ ಸ್ವಿಚ್‌' ವ್ಯವಸ್ಥೆ. ಗ್ಯಾಲರಿ, ವೆಬ್‌ ಬ್ರೌಸರ್‌, ವಾಟ್ಸ್‌ಆ್ಯಪ್‌ ಹಾಗೂ ಇತರೆ ಆ್ಯಪ್‌ಗಳನ್ನು ಖಾಸಗಿಯಾಗಿ ಬಳಸುವಾಗ ಅಲ್ಲಿಂದ ಸಾರ್ವಜನಿಕ ಬಳಕೆಗೆ ಸ್ವಿಚ್‌ ಆಗಲು ಎರಡು ಬಾರಿ  ಪವರ್‌ ಕೀ ಒತ್ತಿದರೆ ಸಾಕು!

ಹೊಸ ತಲೆಮಾರಿನವರು ಹಾಗೂ ಮಿಲೇನಿಯಲ್ಸ್‌ ಅತಿ ಹೆಚ್ಚು ಸಮಯವನ್ನು ಅವರ ಸ್ಮಾರ್ಟ್‌ಫೋನ್‌ಗಳಲ್ಲಿ ಕಳೆಯುತ್ತಾರೆ. ಇನ್‌ಸ್ಟಾಗ್ರಾಮ್‌ ಅಥವಾ ಸ್ನ್ಯಾಪ್‌ಚಾಟ್‌ಗೆ ಫೋಟೊಗಳನ್ನು ಅಪ್‌ಲೋಡ್‌ ಮಾಡಲು ಅಥವಾ ಫೇಸ್‌ಬುಕ್‌ ಮೆಸೆಂಜರ್‌ ಇಲ್ಲವೇ ವಾಟ್ಸ್‌ಆ್ಯಪ್‌ನಲ್ಲಿ ಯಾರೊಂದಿಗಾದರೂ ಮಾತುಕತೆ ನಡೆಸಲು ಸ್ಮಾರ್ಟ್‌ಫೋನ್‌ ಬಳಸುತ್ತಿರುತ್ತಾರೆ. ಅವರ ನಿತ್ಯದ ಚಟುವಟಿಕೆಗಳಲ್ಲಿ ಬೇರೆ ಯಾವುದೇ ಸಾಧನಗಳಿಗಿಂತ ಸ್ಮಾರ್ಟ್‌ಫೋನ್‌ ಬಳಸುವುದೇ ಹೆಚ್ಚು.

ಹೊಸ ಬದಲಾವಣೆಯೊಂದಿಗೆ ಸ್ಯಾಮ್‌ಸಂಗ್‌  ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ಸ್ಮಾರ್ಟ್‌ಫೋನ್‌ಗಳು ಮಿಲೇನಿಯಲ್ಸ್‌ ಹಾಗೂ ಹೊಸ ತಲೆಮಾರಿನವರನ್ನು ಮತ್ತೊಂದು ನವೀನ ಜಗತ್ತಿಗೆ ಪರಿಚಯಿಸುತ್ತದೆ. ಸೂಪರ್‌ ಅಮೊಲೆಡ್‌ ಡಿಸ್‌ಪ್ಲೇ, ಕ್ವಾಡ್‌–ಕ್ಯಾಮೆರಾ ಸೆಟ್‌ಅಪ್ಸ್‌ ಹಾಗೂ ದೀರ್ಘಾವಧಿ ವರೆಗೂ ಉಳಿಯುವ ಬ್ಯಾಟರಿಯನ್ನು ಹೊಸ ಸ್ಮಾರ್ಟ್‌ಫೋನ್‌ಗಳು ಒಳಗೊಂಡಿವೆ. ಈ ಫೋನ್‌ಗಳು ಯಾವುದೇ ಕಾರ್ಯಾಚರಣೆಯನ್ನು ಅಡೆತಡೆ ಇಲ್ಲದೆ ಪೂರ್ಣಗೊಳಿಸುತ್ತವೆ.

ಮತ್ತಷ್ಟು ಉತ್ತಮವಾದ ಅಂಶವೆಂದರೆ, ಮಿಲೇನಿಯಲ್ಸ್‌ ಹಾಗೂ ಹೊಸ ತಲೆಮಾರಿನವರು ಈಗ ಒತ್ತಡವಿಲ್ಲದಂತೆ ಮುಂದುವರಿಯಬಹುದು ಮತ್ತು ಆಲ್ಟ್‌ ಝಡ್‌ ಲೈಫ್‌ ಅನುಭವಿಸಬಹುದಾಗಿದೆ. ಇಲ್ಲಿ ನಿಮ್ಮ ಖಾಸಗಿ ಕ್ಷಣಗಳು ಖಾಸಗಿಯಾಗಿಯೇ ಉಳಿಯುತ್ತವೆ ಹಾಗೂ ನಿಮ್ಮನ್ನು ಬಿಟ್ಟು ಬೇರೆ ಯಾರೊಬ್ಬರಿಗೂ ಅದನ್ನು ಕಾಣುವುದು ಸಾಧ್ಯವಿರುವುದಿಲ್ಲ. ಉದ್ಯಮದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಖಾಸಗಿ ಮಾಹಿತಿ ಸುರಕ್ಷತೆಗಾಗಿ ಎರಡು ಹೊಸ ಸೌಲಭ್ಯಗಳನ್ನು ಪರಿಚಯಿಸಲಾಗಿದೆ–ಕ್ವಿಕ್‌ ಸ್ವಿಚ್‌ ಮತ್ತು ಇಂಟೆಲಿಜೆಂಟ್‌ ಕಂಟೆಂಟ್‌ ಸಜೆಷನ್ಸ್‌–ಇವುಗಳಿಂದಾಗಿ ನೀವು ಮತ್ತೆಂದೂ ಹಿಂದಿರುಗಲು ಇಷ್ಟ ಪಡುವುದಿಲ್ಲ.

ಖಾಸಗಿತನದ ಸುರಕ್ಷತೆಗೆ ಆದ್ಯತೆ

ನೀವು ನಿತ್ಯವೂ ಅವರ ಸ್ಮಾರ್ಟ್‌ಫೋನ್‌ ಬಳಸಲು ಇಷ್ಟಪಡುವವರು ಆಗಿದ್ದರೆ, ನೀವು ಸದಾ ನಿಮ್ಮ ಖಾಸಗಿ ಮಾಹಿತಿ ಸುರಕ್ಷಿತವಾಗಿಡಲೂ ಸಹ ಇಷ್ಟಪಡುವವರೇ ಆಗಿರುತ್ತೀರಿ. ನಮ್ಮಲ್ಲಿ ಬಹಳಷ್ಟು ಜನರಿಗೆ ಇಂಥ ಅನುಭವ ಆಗಿರುತ್ತದೆ, ಯಾರೋ ಒಬ್ಬರು ನಮ್ಮ ಫೋನ್‌ಗಳನ್ನು ಫೋಟೊ ತೆಗೆಯಲು ಬಳಸುತ್ತಿರುತ್ತಾರೆ ಹಾಗೂ ಅದರಲ್ಲಿನ ಖಾಸಗಿ ಮಾಹಿತಿಯನ್ನು ನೋಡುವುದರೊಂದಿಗೆ ಎಲ್ಲ ಮುಗಿಯುತ್ತದೆ. ಹಾಗೇ, ನಿಮ್ಮ ಹೊಸ ಸ್ಮಾರ್ಟ್‌ಫೋನ್‌ನ್ನು ಸ್ನೇಹಿತರು ಅಥವಾ ಕುಟುಂಬದ ಸದಸ್ಯರು ನೋಡುತ್ತಿರುವ ಸಂದರ್ಭ ನೆನಪಿಸಿಕೊಳ್ಳಿ, ಅವರ ಕಣ್ಣಿಗೆ ಯಾವುದು ಬೀಳಬಾರದಿತ್ತೊ ಅದೇ  ಸಂದೇಶವನ್ನೇ ಅವರು ನೋಡಿದರೆ?

ಹೌದು, ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಎಲ್ಲ ಖಾಸಗಿ ಹಾಗೂ ವೈಯಕ್ತಿಕ ಮಾಹಿತಿಗಳು ಸಂಗ್ರಹವಾಗಿರುತ್ತವೆ, ಬೇರೆ ಯಾರಾದರೂ ನಮ್ಮ ಫೋನ್‌ ಬಳಸುತ್ತಿದ್ದಾರೆ ಎಂದಾದರೆ ತಳಮಳ ಹೆಚ್ಚುತ್ತದೆ. ಅಂಥ ಆತಂಕದಿಂದ ಹೊರಬರಬೇಕಾದರೆ ತುಂಬ ಸರಳವಾಗಿ ಪವರ್‌ ಕೀ ಎರಡು ಬಾರಿ ಒತ್ತಿದರೆ ಸಾಕು. ಕ್ವಿಕ್‌ ಸ್ವಿಚ್‌ ಎಂದು ಕರೆಯಲಾಗುತ್ತಿರುವ ಈ ಸೌಲಭ್ಯವನ್ನು ವಿಶೇಷವಾಗಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ51 ಮತ್ತು ಎ71 ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರವೇ ಅಳವಡಿಸಲಾಗಿದೆ.

ಇದನ್ನು ಇನ್ನೂ ಚೆನ್ನಾಗಿ ತಿಳಿದುಕೊಳ್ಳಲು ನಟಿ ರಾಧಿಕಾ ಮದನ್‌ ಅವರ ಜೀವನದಿಂದ ಉದಾಹರಣೆ ತೆಗೆದುಕೊಳ್ಳೋಣ. ಈ ವಿಡಿಯೊದಲ್ಲಿ ರಾಧಿಕಾ ಅವರ ಗೆಳೆಯನಿಗಾಗಿ (ಸನ್ನಿ ಸಿಂಗ್‌ ಅಭಿನಯಿಸಿದ್ದಾರೆ) ಹುಟ್ಟಿದ ಹಬ್ಬಕ್ಕೆ ಸರ್ಪ್ರೈಸ್‌ ನೀಡಲು ಸ್ಮಾರ್ಟ್‌ಫೋನ್‌ನಲ್ಲಿ ಯೋಜನೆ ರೂಪಿಸುತ್ತಿರುತ್ತಾರೆ. ಸನ್ನಿ ದಿಢೀರನೆ ಬರಬಹುದೆಂದು ರಾಧಿಕಾ ಊಹಿಸಿರುವುದಿಲ್ಲ ಹಾಗೂ ಏನೇ ಆದರೂ ಸಹ ಸರ್ಪ್ರೈಸ್‌ ಹಾಳಾಗಲು ಬಿಡಲು ಸಿದ್ಧವಿರುವುದಿಲ್ಲ.

ಅವರು ತುಂಬ ಸುಲಭವಾಗಿ 'ಕ್ವಿಕ್‌ ಸ್ವಿಚ್‌' ಬಳಸುವ ಮೂಲಕ ಗುಟ್ಟನ್ನು ಕಾಪಾಡಿಕೊಳ್ಳುತ್ತಾರೆ!

ಈಗಂತೂ ಒಳ್ಳೆಯ ಫೋಟೊ ಕ್ಲಿಕ್‌ ಮಾಡಲು ತಮ್ಮ ಸ್ಮಾರ್ಟ್‌ಫೋನ್‌ನ್ನು ಬೇರೆ ಯಾವುದೇ ವ್ಯಕ್ತಿಗೆ ಆತಂಕವಿಲ್ಲದೆ ಕೊಡಬಹುದು, ಇದಕ್ಕೆಲ್ಲ ಕ್ವಿಕ್‌ ಸ್ವಿಚ್‌ಗೆ ಧನ್ಯವಾದ ಅರ್ಪಿಸಬೇಕು. ಅಥವಾ ಯುಟ್ಯೂಬ್‌ನಲ್ಲಿ ವೈರಲ್‌ ಆಗಿರುವ ವಿಡಿಯೊ ನೋಡಲು ಯಾವುದೇ ಯೋಚನೆ ಇಲ್ಲದೆ ಸ್ನೇಹಿತರಿಗೆ ನಿಮ್ಮ ಫೋನ್‌ ಕೊಡಬಹುದು. ಪವರ್‌ ಕೀ ಎರಡು ಬಾರಿ ಒತ್ತಿ ಹಾಗೂ ಫೋನ್‌ನ ಗ್ಯಾಲರಿ, ಬ್ರೌಸರ್‌, ವಾಟ್ಸ್‌ಆ್ಯಪ್‌, ಇನ್ನಿತರೆ ಆ್ಯಪ್‌ಗಳ ಖಾಸಗಿ ಬಳಕೆಯಿಂದ ಸಾರ್ವಜನಿಕವಾಗಿ ಕಾಣಿಸಬಹುದಾದ ಸ್ಕ್ರೀನ್‌ಗೆ ವರ್ಗಾಯಿಸಬಹುದು.

ಇನ್ನೂ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಕಂಟೆಂಟ್‌ ಸಜೆಷನ್ಸ್‌ ಖಾಸಗಿಯಾಗಿ ಇಡಬೇಕಾದ ಚಿತ್ರಗಳ ಬಗ್ಗೆ ಸಲಹೆ ನೀಡುತ್ತದೆ. ಅದನ್ನು ರೂಪಿಸಿಕೊಳ್ಳುವುದು ಬಹಳ ಸರಳ. ನಿರ್ದಿಷ್ಟ ವ್ಯಕ್ತಿಯ ಮುಖ ಅಥವಾ ಚಿತ್ರಗಳನ್ನು ನೀವು ನಿಗದಿ ಪಡಿಸಬೇಕು ಹಾಗೂ ಅದಕ್ಕೆ ಸಂಬಂಧಿಸಿದ ಫೋಟೊಗಳು ಪ್ರೈವೇಟ್‌ ಫೋಲ್ಡರ್‌ಗೆ ವರ್ಗಾವಣೆಯಾಗುತ್ತವೆ. ಡಿಫೆನ್ಸ್‌ ಗ್ರೇಡ್‌ ಸುರಕ್ಷತಾ ವ್ಯವಸ್ಥೆ ಸ್ಯಾಮ್‌ಸಂಗ್‌ ನಾಕ್ಸ್‌ನಿಂದಾಗಿ 'ಕಂಟೆಂಟ್‌ ಸಜೆಷನ್ಸ್‌' ಸುರಕ್ಷತೆಗೆ ಒಳಪಟ್ಟಿದೆ. ಈಗಂತೂ ನಿಮ್ಮ ಖಾಸಗಿ ಮಾಹಿತಿ ಹಿಂದೆಂದಿಗಿಂತಲೂ ಅತ್ಯಂತ ಸುರಕ್ಷಿತವಾಗಿದೆ.

ಸಿಂಗಲ್‌ ಟೇಕ್‌

ಸಿಂಗಲ್‌ ಟೇಕ್‌ ಫೀಚರ್‌ ಈ ಫೋನ್‌ಗಳಲ್ಲಿನ ವೈಶಿಷ್ಯವಾಗಿದೆ. ಫೋಟೊ ತೆಗೆಯುವಾಗ ಯಾವ ಫ್ರೇಮ್‌ ಸರಿಯಾಗಿರುತ್ತದೆ ಎಂದು ನಿರ್ಧರಿಸುವುದು ಗೊಂದಲವಾದಾಗ 'ಸಿಂಗಲ್‌ ಟೇಕ್‌' ನೆರವಿಗೆ ಬರುತ್ತದೆ. ಸುಮ್ಮನೆ ನಿಮ್ಮ ಸ್ಮಾರ್ಟ್‌ಫೋನ್‌ ತೆಗೆದುಕೊಳ್ಳಿ ಹಾಗೂ ಸಿಂಗಲ್‌ ಟೇಕ್‌ ಆಯ್ಕೆ ಮಾಡಿ  ಹಾಗೂ ನೀವು ಕ್ಲಿಕ್‌ ಮಾಡುವ ಚಿತ್ರಗಳು ಎಲ್ಲವನ್ನೂ ಹೇಳುತ್ತವೆ.

ಈ ಸೌಲಭ್ಯದಿಂದಾಗಿ 10 ಬಗೆಯ ಫೋಟೊಗಳು ಹಾಗೂ ವಿಡಿಯೊಗಳನ್ನು (7 ಫೋಟೊಗಳು ಮತ್ತು 3 ವಿಡಿಯೊಗಳು) ಕ್ಲಿಕ್‌ ಮಾಡಬಹುದು. ಸಿಂಗಲ್‌ ಟೇಕ್‌ನಿಂದ ತೆಗೆದ ಫೋಟೊ ಮತ್ತು ವಿಡಿಯೊಗಳು ತಕ್ಷಣವೇ ಗ್ಯಾಲರಿಯಲ್ಲಿ ಲಭ್ಯವಾಗುತ್ತವೆ. ಸಿಂಗಲ್‌ ಟೇಕ್‌ ಅತ್ಯುತ್ತಮ ಕ್ಷಣಗಳನ್ನು ಹಲವು ಶಾಟ್‌ಗಳಲ್ಲಿ ಸೆರೆಹಿಡಿದು ಒಂದೇ ಆಲ್ಬಮ್‌ನಲ್ಲಿ ಸಂಗ್ರಹಿಸಿಡುತ್ತದೆ. ಇಲ್ಲಿನ ಕ್ಯಾಮೆರಾ ಸಾಫ್ಟ್‌ವೇರ್‌ ತಾನಾಗಿಯೇ ಶಾರ್ಟ್‌ ಮೂವಿ, ಜಿಫ್‌ ಆ್ಯನಿಮೇಷನ್‌ಗಳು ಹಾಗೂ ಸ್ಟೈಲೈಜ್ಡ್‌ ಇಮೇಜ್‌ಗಳು ಸೇರಿದಂತೆ ಹಲವು ರೀತಿಯ ಚಿತ್ರ ಮತ್ತು ವಿಡಿಯೊಗಳನ್ನು ಎಐ ಸಹಾಯದಿಂದ ಸೆರೆ ಹಿಡಿಯುತ್ತದೆ.

ಸಿಂಗಲ್‌ ಟೇಕ್‌ನಿಂದ ಅತ್ಯುತ್ತಮ ಫೋಟೊ ಗುರುತಿಸಿ, ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪ್ರಕಟಿಸಿಕೊಳ್ಳಲು ಸಹಕಾರಿಯಾಗುತ್ತದೆ.

ನೈಟ್‌ ಹೈಪರ್‌ಲ್ಯಾಪ್ಸ್‌

ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ಹೊಸ ತಲೆಮಾರಿನವರು ಹಾಗೂ ಮಿಲೇನಿಯಲ್ಸ್‌ ನಿತ್ಯವೂ ಬಹಳಷ್ಟು ಫೋಟೊಗಳನ್ನು ಕ್ಲಿಕ್ಕಿಸಿಕೊಳ್ಳುವುದು ಆಶ್ಚರ್ಯವೇನೂ ಅಲ್ಲ. ಊಟಕ್ಕಾಗಿ ರೆಸ್ಟೊರೆಂಟ್‌ಗಳಿಗೆ ಹೋಗಲಿ ಅಥವಾ ಪಾರ್ಕ್‌ನಲ್ಲಿ ಓಡಾಟಕ್ಕೆ ಹೋಗಲಿ, ಫೋಟೊಗಳಂತೂ ಕ್ಲಿಕ್ಕಿಸದೆ ಇರುವುದಿಲ್ಲ. ಇಂಥ ಸಂದರ್ಭಗಳಲ್ಲೇ ಹೈಪರ್‌ಲ್ಯಾಪ್ಸ್‌– ಟೈಮ್‌ ಲ್ಯಾಪ್ಸ್‌ ಆಯ್ಕೆ ಬಳಕೆಗೆ ಬರುತ್ತದೆ. ಸ್ಯಾಮ್‌ಸಂಗ್‌ನಲ್ಲಿ ನೈಟ್‌ ಹೈಪರ್‌ಲ್ಯಾಪ್ಸ್‌ ಸೌಲಭ್ಯ ಇರುವುದರಿಂದ ರಾತ್ರಿಯಲ್ಲಿ ಅಥವಾ ಅತಿ ಕಡಿಮೆ ಬೆಳಕು ಇರುವ ಜಾಗದಲ್ಲಿಯೂ ಅತ್ಯುತ್ತಮವಾದ ಫೋಟೊಗಳನ್ನು ತೆಗೆದುಕೊಳ್ಳಬಹುದಾಗಿದೆ. ಅದಂತೂ ಸಂಭ್ರಮಿಸುವಂಥದ್ದು.

ಈ ಸೌಲಭ್ಯಗಳ ಹೊರತಾಗಿ ಇನ್ನೂ ಬಹಳಷ್ಟು ಹೊಸ ಕ್ಯಾಮೆರಾ ಫೀಚರ್‌ಗಳನ್ನು ಅಳವಡಿಸಲಾಗಿದೆ. ಕಸ್ಟಮ್‌ ಫಿಲ್ಟರ್‌, ಕ್ವಿಕ್‌ ವಿಡಿಯೊ ರೆಕಾರ್ಡಿಂಗ್‌, ರೆಕಾರ್ಡ್‌ ಮಾಡುವಾಗಲೇ ಕ್ಯಾಮೆರಾ ಸ್ವಿಚ್‌ ಮಾಡುವುದು (ಪ್ರಸ್ತುತ ಗ್ಯಾಲಕ್ಸಿ ಎ51ನಲ್ಲಿ ಲಭ್ಯ), ಎಐ ಗ್ಯಾಲರಿ ಜೂಮ್‌ ಹಾಗೂ ಸ್ಮಾರ್ಟ್ ಸೆಲ್ಫಿ ಆ್ಯಂಗಲ್‌ ಸೌಲಭ್ಯಗಳಿವೆ.

ಪಡೆಯಿರಿ ಆಲ್ಟ್‌ ಝಡ್‌ ಲೈಫ್‌ನ ಅನುಭವ

ಮತ್ತೊಬ್ಬರಿಗೆ ನಮ್ಮ ಸ್ಮಾರ್ಟ್‌ಫೋನ್‌ಗಳನ್ನು ನೀಡಲು ಆತಂಕಕ್ಕೆ ಒಳಗಾಗುತ್ತಿದ್ದ ದಿನಗಳಂತೂ ಇನ್ನು ಇಲ್ಲವಾಗಿದೆ. ಈಗಂತೂ ಅದು ನಿರಾತಂಕವಾಗಿದ್ದು, ಅದಕ್ಕಾಗಿ ಸ್ಯಾಮ್‌ಸಂಗ್‌ಗೆ ಧನ್ಯವಾದ ತಿಳಿಸಬೇಕಿದೆ.

ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ನಿಜಕ್ಕೂ ಉತ್ಕೃಷ್ಟವಾದ ಸ್ಮಾರ್ಟ್‌ಫೋನ್‌ಗಳಾಗಿವೆ. ನಾಲ್ಕು ಕ್ಯಾಮೆರಾ ಸೆಟ್‌ಅಪ್‌ನಿಂದಾಗಿ (ಕ್ವಾಡ್‌–ಕ್ಯಾಮೆರಾ) ಚಿತ್ರೀಕರಿಸಲ ಖುಷಿ ಸಿಗುತ್ತದೆ ಹಾಗೂ ಅತ್ಯುತ್ತಮ ವೀಕ್ಷಣೆ ಅನುಭವವನ್ನು ಈ ಫೋನ್‌ಗಳ ಡಿಸ್‌ಪ್ಲೇ ನೀಡುತ್ತದೆ. ಈ ಎಲ್ಲದರೊಂದಿಗೆ ಇಡೀ ದಿನ ಚಾರ್ಜ್‌ ಉಳಿಯುವ ಬ್ಯಾಟರಿ ನೀಡಲಾಗಿದ್ದು, ಇನ್ನೂ ಏನನ್ನು ತಾನೇ ಬಯಸುತ್ತೇವೆ?

ಈ ಎಲ್ಲ ಸೌಲಭ್ಯಗಳೊಂದಿಗೆ ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ಸ್ಮಾರ್ಟ್‌ಫೋನ್‌ಗಳು 'ಆಲ್ಟ್‌ ಝಡ್‌ ಲೈಫ್‌' ಅನುಭವಿಸಲು ಅನುವು ಮಾಡಿಕೊಡುತ್ತದೆ.

ಇನ್ನೂ ನೀವು ಅದರ ಅನುಭವ ಪಡೆದಿಲ್ಲವೇ, ಮತ್ತೆ ಇನ್ನಾವುದಕ್ಕಾಗಿ ಕಾಯುತ್ತಿರುವಿರಿ?