ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಪ್ರಾಯೋಜಿತ ಲೇಖನ

ಆ್ಯಕ್ಟ್ 1978 ಸಿನಿಮಾ ಮೆಚ್ಚಿದ ಕಿಚ್ಚ

Last Updated 25 ನವೆಂಬರ್ 2020, 10:11 IST
ಅಕ್ಷರ ಗಾತ್ರ

ಆ್ಯಕ್ಟ್ 1978 ಸಿನಿಮಾ ನೋಡಲು ಹೇಳಿದ ಕಿಚ್ಚ

ಬೆಂಗಳೂರು: ನಾಳೆ ಶುಕ್ರವಾರ..ಚಿತ್ರರಂಗಕ್ಕೆ ಒಂದು ರೀತಿಯ ಶುಭ ಶುಕ್ರವಾರ ಅಂತಾನೇ ಹೇಳಬಹುದು. ಯಾಕಂದ್ರೆ ಕೊರೊನಾ ವೈರಸ್ ನಡುವೆ ಖಾಲಿ ಹೊಡೆಯುತ್ತಿರುವ ಥಿಯೇಟರ್ ಗಳಿಗೆ ಮರುಜೀವ ತರಲು ಆ್ಯಕ್ಟ್ 1978 ಸಿನಿಮಾ ರೆಡಿಯಾಗಿದೆ.

ಜನಗಳೇ ಬಾರದ ಥಿಯೇಟರ್ ಗಳಿಗೆ ಸಿನಿಮಾ ರಿಲೀಸ್ ಮಾಡಿ ಏನು ಮಾಡೋದು ಎಂಬ ಪ್ರಶ್ನೆ ನಡುವೆ ಮಂನ್ಸೋರೆ ಧೈರ್ಯ ಮಾಡಿ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಇದೀಗ ಈ ಸಿನಿಮಾ ಸ್ಯಾಂಡಲ್ ವುಡ್ ಬಾದ್ ಶಾ ಕಿಚ್ಚ ಸುದೀಪ್ ಶುಭ ಹಾರೈಸಿ, ಹೊಗಳಿಕೆಯ ಸುರಿಮಳೆ ಸುರಿಸಿದ್ದಾರೆ.

ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವ ಫೋಟೊವೊಂದನ್ನು ಶೇರ್ ಮಾಡಿದ್ದಾರೆ. ಅದರ ಜೊತೆಗೆ ಸಿನಿಮಾದ ಬಗ್ಗೆ ಒಂದಷ್ಟು ಅನಿಸಿಕೆಯನ್ನು ಬರೆದಿದ್ದಾರೆ. ' ಈ ಸಿನಿಮಾವನ್ನ ನೋಡಿದೆ. ಅದ್ಭುತ ಪ್ರಯತ್ನ, ಎಲ್ಲರ ನಟನೆಯೂ ಅದ್ಭುತವಾಗಿದೆ. ನಾಳೆ ಸಿನಿಮಾ ರಿಲೀಸ್ ಆಗುತ್ತಿದೆ. ನನ್ನ ಕಡೆಯಿಂದ ಶುಭಹಾರೈಕೆಗಳು ಎಂದು ಚಿತ್ರತಂಡಕ್ಕೆ ಶುಭಹಾರೈಸಿ ಟ್ವೀಟ್ ಮಾಡಿದ್ದಾರೆ.

ಆ್ಯಕ್ಟ್ 1978 ಸಿನಿಮಾ ಈಗಾಗಲೇ ಸಖತ್ ಸೌಂಡ್ ಮಾಡುತ್ತಿದೆ. ಮಂನ್ಸೋರೆ ನಿರ್ದೇಶನದ ಮೂರನೆಯ ಸಿನಿಮಾ ಇದು. ದೇವರಾಜ್ ಆರ್ ಬಂಡವಾಳ ಹೂಡಿದ್ದು, ಟಿ ಕೆ ದಯಾನಂದ್, ವೀರು ಮಲ್ಲಣ್ಣ ಕಥೆ, ಚಿತ್ರಕಥೆ ಬರೆದಿದ್ದಾರೆ.

ಯಜ್ಞಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಮಾಡಿದ್ದು, ದತ್ತಣ್ಣ, ಶೃತಿ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ.

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT