ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಪ್ರಾಯೋಜಿತ ಲೇಖನ

ರಸಪ್ರಶ್ನೆಗಳು ವಿಷಯಗಳ ವಿಶಾಲ ವ್ಯಾಪ್ತಿಯ ಬಗ್ಗೆ ತಿಳಿಯಲು ಮತ್ತು ಹೆಚ್ಚು ಆತ್ಮವಿಶ್ವಾಸದಿಂದಿರಲು ನನಗೆ ಸಹಾಯ ಮಾಡಿವೆ

Last Updated 28 ಅಕ್ಟೋಬರ್ 2020, 5:25 IST
ಅಕ್ಷರ ಗಾತ್ರ

ಕಟ್ಟಾ ರಸಪ್ರಶ್ನೆ ಪ್ರೇಮಿಯಾದ 14 ವರ್ಷದ ಕೃಷ್ಣಾರ್ಪಿತ್, ಸ್ವರೂಪ ನಿರ್ಮಿತ ಕಲಿಕೆಯ ವಿನೋದ ಮತ್ತು ಹೆಚ್ಚಿನ ಸಮಗ್ರತೆಯ ಬಗ್ಗೆ ಮಾತನಾಡುತ್ತಾನೆ.

ಕೃಷ್ಣಾರ್ಪಿತ್ ನೆಟ್ಟಾಯಿಕ್ಕೋಡತ್, ಕಳೆದ 8 ವರ್ಷಗಳಿಗಿಂತಲೂ ಹೆಚ್ಚು ಕಾಲ ರಸಪ್ರಶ್ನೆಯಲ್ಲಿ ತೊಡಗಿಸಿಕೊಂಡಿದ್ದಾನೆ, ಏಕೆಂದರೆ "ರಸಪ್ರಶ್ನೆ ಸ್ಪರ್ಧೆಯಲ್ಲಿ ನಿಪುಣತೆ ಪಡೆಯಲು ಶ್ರಮಿಸುವುದು, ಹೊಸ ಮೋಜಿನ ವಿಷಯಗಳನ್ನು ಕಲಿಯುವಂತೆ ಮಾಡುತ್ತದೆ ಮತ್ತು ಅವನ ಸ್ಪರ್ಧಾತ್ಮಕ ಮನೋಭಾವ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ" ಎಂದು ಅವನು ನಂಬುತ್ತಾನೆ. ಅವನಂತೆಯೇ, ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ವಿದ್ಯಾರ್ಥಿ ಜೀವನಶೈಲಿಯ ಭಾಗವಾಗಿ ರಸಪ್ರಶ್ನೆ ಅಳವಡಿಸಿಕೊಂಡಿರುವ, ತಮ್ಮ ಪೋಷಕರು ಮತ್ತು ಶಿಕ್ಷಕರಿಂದ ಪ್ರೋತ್ಸಾಹ ಪಡೆದಿರುವ ಅನೇಕ ವಿದ್ಯಾರ್ಥಿಗಳಿದ್ದಾರೆ. ಕಾರಣ? ಇದು ಕೇವಲ ಒಂದು ಮೋಜಿನ ಕಲಿಕೆಯ ಮಾರ್ಗವಷ್ಟೇ ಅಲ್ಲದೇ ಅವರಲ್ಲಿ ಗುಣಲಕ್ಷಣಗಳನ್ನು ಬೆಳೆಸುವ ಅಭ್ಯಾಸವೂ ಆಗಿದ್ದು, ಅವರನ್ನು ಪರಿಪೂರ್ಣ ವಯಸ್ಕರಾಗಿ ಬೆಳೆಯಲು ಸಹಾಯ ಮಾಡುತ್ತದೆ.

2020 ರಲ್ಲಿ, ಸಾಂಕ್ರಾಮಿಕ ರೋಗವು ಉಲ್ಬಣಗೊಳ್ಳುತ್ತಿದ್ದಂತೆ, ಜಗತ್ತು ಕಾರ್ಯನಿರ್ವಹಿಸುತ್ತಿದ್ದ ವಿಧಾನವೂ ಬದಲಾಯಿತು. ಸ್ಕ್ರೀನ್‌ ಸಮಯ ಮತ್ತು ಗ್ಯಾಜೆಟ್‌ಗಳ ಬಳಕೆಯನ್ನು ಸಮತೋಲನಗೊಳಿಸುವಾಗ ತಮ್ಮ ಮಕ್ಕಳು ತಮ್ಮ ಸಮಯವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ ಎಂದು ಖಚಿತಪಡಿಸಿಕೊಳ್ಳುವ ಸವಾಲನ್ನು ಪೋಷಕರು ಎದುರಿಸಿದರು. ಕೃಷ್ಣಾ‌ರ್ಪಿತ್‌ನ ರಸಪ್ರಶ್ನೆಗಳ ಬಗೆಗಿನ ಒಲವು ಅವನನ್ನು ಮೈಂಡ್ ವಾರ್ಸ್‌ನ ರಸಪ್ರಶ್ನೆಗಳಲ್ಲಿ ನಿಯಮಿತ ಭಾಗಿಯನ್ನಾಗಿ ಮಾಡಿತು, ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಪ್ಲಾಟ್‌ಫಾರ್ಮ್‌ನ ಕೊಡುಗೆಗಳೊಂದಿಗೆ ತನ್ನ ಅಭ್ಯಾಸವನ್ನು ಉಳಿಸಿಕೊಳ್ಳಲು ಸಂತೋಷಪಟ್ಟನು. “ಲಾಕ್‌ಡೌನ್ ಕಾರಣದಿಂದ, ಹೊರಕ್ಕೆ ಹೋಗಲು ಸಾಧ್ಯವಾಗಲಿಲ್ಲ, ಆದರೆ ನನ್ನ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಲು ನಾನು ನಿರ್ಧರಿಸಿದೆ. ರಸಪ್ರಶ್ನೆಯಲ್ಲಿ ನನಗಿರುವ ಆಸಕ್ತಿಗೆ ಧನ್ಯವಾದಗಳು, ನಮ್ಮ ಶಾಲಾ ಪಠ್ಯಕ್ರಮದ ಹೊರತಾಗಿಯೂ ಹೊಸ ವಿಷಯಗಳನ್ನು ಕಲಿಯುವಲ್ಲಿ ನಾನು ನಿರತನಾಗಿರಲು ಸಾಧ್ಯವಾಯಿತು” ಎಂದು ಕೇರಳದ ಕೊಚ್ಚಿಯ ಭವಾನ್ಸ್ ವರುಣ ವಿದ್ಯಾಲಯದ 9 ನೇ ತರಗತಿಯ ವಿದ್ಯಾರ್ಥಿ ಹೇಳುತ್ತಾನೆ.

ಸ್ವತಃ ಶಿಕ್ಷಕಿಯೂ ಆಗಿರುವ ತನ್ನ ಅತ್ತೆಯಿಂದ ಕೃಷ್ಣಾರ್ಪಿತ್, ರಸಪ್ರಶ್ನೆಯ ಪ್ಲ್ಯಾಟ್‌ಫಾರ್ಮ್ ಆದ ಮೈಂಡ್ ವಾರ್ಸ್‌ಗೆ 2019 ರಲ್ಲಿ ಪರಿಚಿತನಾದನು. ಅಂದಿನಿಂದ, ಅವನ ಕ್ಯಾಲೆಂಡರ್‌ನಲ್ಲಿ ಸಂಜೆ 6: 30 ನ್ನು ಮೈಂಡ್ ವಾರ್ಸ್ ರಸಪ್ರಶ್ನೆ ಸಮಯ ಎಂದು ಗುರುತಿಸುವುದರೊಂದಿಗೆ "ಮನಮೋಹಕ ಸ್ವರೂಪ" ದಲ್ಲಿ ಇನ್ನೂ ಹೆಚ್ಚಿನ ಸ್ಕೋರ್ ಮಾಡುವಂತೆ ಸ್ವತಃ ಸವಾಲು ಹಾಕಿಕೊಳ್ಳುವುದು ಅವನ ದೈನಂದಿನ ವೇಳಾಪಟ್ಟಿಯ ಒಂದು ಭಾಗವಾಯಿತು. “ನಾನು ಗೆದ್ದ ಸ್ಪರ್ಧೆಗಳಿಗಿಂತ ನಾನು ಕಳೆದುಕೊಂಡ ಸ್ಪರ್ಧೆಗಳಿಂದ ನಾನು ಹೆಚ್ಚು ಕಲಿತಿದ್ದೇನೆ. ಮೈಂಡ್ ವಾರ್ಸ್ ಒಲಿಂಪಿಯಾಡ್‌ನಲ್ಲಿ ಭಾಗವಹಿಸಲು ನಾನು ಎದುರು ನೋಡುತ್ತಿದ್ದೇನೆ, ಏಕೆಂದರೆ 2020 ನೇ ವರ್ಷ - ಜ್ಞಾನವು ನಿಮಗೆ ವಿಶ್ವಾಸವನ್ನು ನೀಡುತ್ತದೆ ಎಂಬ ಒಂದು ವಿಷಯವನ್ನು ನನಗೆ ಕಲಿಸಿದೆ. ನಾವು ಅನೇಕ ಬುದ್ಧಿವಂತ ಮನಸ್ಸುಗಳೊಂದಿಗೆ ಸ್ಪರ್ಧಿಸಿದರೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ನಾವು ಉನ್ನತ ಶ್ರೇಣಿಯನ್ನು ಪ್ರವೇಶಿಸುವಾಗ ಹೆಚ್ಚಿನ ಆತ್ಮವಿಶ್ವಾಸವನ್ನು ಪಡೆಯುತ್ತೇವೆ. ನಾವು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದರೆ, ನಮ್ಮ ದೌರ್ಬಲ್ಯವನ್ನು ನಾವು ಅರಿತುಕೊಳ್ಳುತ್ತೇವೆ ಮತ್ತು ಅವುಗಳ ಕುರಿತಾಗಿ ಕೆಲಸ ಮಾಡಲು ಪ್ರಾರಂಭಿಸುತ್ತೇವೆ. ಬದಲಾಗುತ್ತಿರುವ ಸಮಯದೊಂದಿಗೆ ನಾನು ನವೀಕರಿಸಿದ್ದೇನೆ ಮತ್ತು ಈ ಅವಧಿಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನದನ್ನು ಕಲಿತಿದ್ದೇನೆ. ಇದು ಸ್ಪರ್ಧೆಗಿಂತ ಹೆಚ್ಚಿನದಾದದ್ದು; ಇದು ಮುಂದಿನ ನನ್ನ ಜೀವನಕ್ಕಾಗಿ ತಯಾರಿ ಮಾಡುವ ನನ್ನ ಕಲಿಕಾ ರೇಖೆಯಾಗಿದೆ ”ಎಂದು ಉತ್ಸಾಹಭರಿತ ಕೃಷ್ಣಾರ್ಪಿತ್ ಹೇಳುತ್ತಾನೆ.

ಈ ಚಿಕ್ಕ ಹುಡುಗನಂತೆ, ಸಾವಿರಾರು ಮಕ್ಕಳು ರಾಷ್ಟ್ರಮಟ್ಟದ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಪ್ರಯೋಜನಗಳ ಅನುಭವ ಪಡೆದಿದ್ದಾರೆ. ಇದು ಅವರ ಅರ್ಹತೆಯನ್ನು ಸಾಬೀತುಪಡಿಸುವ ಅವಕಾಶವನ್ನು ನೀಡುವ ಮೂಲಕ ಅವರಲ್ಲಿ ಹೆಮ್ಮೆ ಮತ್ತು ಸಾಧನೆಯ ಭಾವನೆಯನ್ನು ಮೂಡಿಸುತ್ತದೆ. ಮೈಂಡ್ ವಾರ್ಸ್ ಈ ಸಿದ್ಧಾಂತವನ್ನು ಆಧರಿಸಿದ ಒಂದು ಅನುಕರಣೀಯ ಪ್ಲ್ಯಾಟ್‌ಫಾರ್ಮ್‌ ಆಗಿದೆ. ವಿವರವಾದ ಸಮೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ಜಿಕೆ ಒಲಿಂಪಿಯಾಡನ್ನು ರಚಿಸಲಾಗಿದ್ದು, ಇದು ಭಾರತದಾದ್ಯಂತದ 1,000 ಕ್ಕೂ ಹೆಚ್ಚು ಶಾಲೆಗಳ ಪ್ರಾಂಶುಪಾಲರು ಮತ್ತು ಶಿಕ್ಷಕರ ತಜ್ಞ ಶಿಫಾರಸುಗಳಲ್ಲಿನ ಅಂಶಗಳನ್ನು ಒಳಗೊಂಡಿದ್ದು, ಅದನ್ನು ನಿಜವಾದ ಪ್ರಜಾಪ್ರಭುತ್ವ ಮತ್ತು ಅಂತರ್ಗತ ಪ್ರಕ್ರಿಯೆಯನ್ನಾಗಿಸುತ್ತದೆ. ಬಹುಮಾನಗಳನ್ನು ಗೆಲ್ಲುವ ಸಲುವಾಗಿ ವಿವಿಧ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಅದು ಅವರನ್ನು ಪ್ರೇರೇಪಿಸುತ್ತದೆ. ಇಷ್ಟೇ ಅಲ್ಲದೆ, ಕಲಿಕೆ ಯಾವುದೇ ಹಂತದಲ್ಲಿ ನಿಲ್ಲುವುದಿಲ್ಲ ಎಂದು ಖಚಿತಪಡಿಸುವುದರೊಂದಿಗೆ, ಮೈಂಡ್ ವಾರ್ಸ್ ತಂಡವು ಪ್ರತಿದಿನವೂ ಅದನ್ನು ನವೀಕರಿಸುತ್ತದೆ.

ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷರಾದ ಶ್ರೀ ಉಮೇಶ್ ಕೆ. ಆರ್. ಬನ್ಸಾಲ್ ಅವರು, “ಮೈಂಡ್ ವಾರ್ಸ್ ಒಲಿಂಪಿಯಾಡ್, ಮಕ್ಕಳಿಗೆ ತಮ್ಮ ಜ್ಞಾನ, ಪ್ರತಿಕ್ರಿಯಾಶೀಲತೆ, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಉತ್ತಮಗೊಳಿಸುವ ಪ್ಲ್ಯಾಟ್‌ಫಾರ್ಮನ್ನು ಒದಗಿಸುವ ಗುರಿಯನ್ನು ಹೊಂದಿದೆ ಮತ್ತು ಸಮಗ್ರ ರೀತಿಯಲ್ಲಿ ನಿರಂತರವಾಗಿ ಕಲಿಯಲು ಅವರನ್ನು ಪ್ರೋತ್ಸಾಹಿಸುತ್ತದೆ” ಎಂದು ಹೇಳಿದ್ದಾರೆ.

ಮೈಂಡ್ ವಾರ್ಸ್ ಒಲಿಂಪಿಯಾಡ್ ಭಾರತದ ಅತಿದೊಡ್ಡ ರಸಪ್ರಶ್ನೆ ಮತ್ತು ಜ್ಞಾನ ಪ್ಲ್ಯಾಟ್‌ಫಾರ್ಮ್‌ನಲ್ಲಿ 24 * 7 ಅಭ್ಯಾಸದ ವಿಶಿಷ್ಟ ಸೌಲಭ್ಯದೊಂದಿಗೆ ಭಾರತದ ಎಲ್ಲ ವಿದ್ಯಾರ್ಥಿಗಳಿಗೆ ತೆರೆದಿದೆ ಮತ್ತು ಅದರ ರಾಷ್ಟ್ರೀಯ ಅರ್ಹತಾ ಪಟ್ಟಿಯಲ್ಲಿ 1,000 ಉನ್ನತ ವಿದ್ಯಾರ್ಥಿಗಳನ್ನು ಗುರುತಿಸುತ್ತದೆ.

ನೋಂದಾಯಿಸಿಕೊಳ್ಳಲು www.mindwars.co.in ಗೆ ಲಾಗ್‌ ಇನ್‌ ಮಾಡಿ.

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT
ADVERTISEMENT