ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಪ್ರಾಯೋಜಿತ ಲೇಖನ

ಮಾರ್ಚ್‌ 9ರಂದು 'Redmi Note 11 Pro' ಸರಣಿಯ ಫೋನ್‌ಗಳ ಅನಾವರಣ. ಈ ಹೊಸ ಫೋನ್‌ ಬಗ್ಗೆ ಇಲ್ಲಿದೆ ಸಾಕಷ್ಟು ವಿವರ

Last Updated 7 ಮಾರ್ಚ್ 2022, 15:02 IST
ಅಕ್ಷರ ಗಾತ್ರ

ಸಾಂಕ್ರಾಮಿಕದ ಬಿಕ್ಕಟ್ಟಿನ ನಡುವೆ ಕೆಲವು ವರ್ಷಗಳಿಂದ ಜಾಗತಿಕವಾಗಿ ಚಿಪ್‌ಸೆಟ್‌ಗಳ ಕೊರತೆ ಮತ್ತು ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳ ಬೆಲೆ ಏರಿಕೆಯಾಗುತ್ತಿದ್ದರೂ, Redmiಯ ಮುಂಬರುವ Redmi Note 11 Pro ಸರಣಿ ಸ್ಮಾರ್ಟ್‌ಫೋನ್‌ಗಳು ಹೊಸ ಭರವಸೆ ಮೂಡಿಸಿವೆ.

Redmiಯ Note ಸರಣಿಯು ಭಾರತದಲ್ಲಿ ಅತ್ಯಂತ ಜನಪ್ರಿಯವಾದ ಸ್ಮಾರ್ಟ್‌ಫೋನ್ ಸರಣಿಯಾಗಿದೆ. ವಿಶ್ವದಾದ್ಯಂತ ಈ ಸರಣಿಯ ಸುಮಾರು 24 ಕೋಟಿ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿದ್ದು, ಅದರಲ್ಲಿ ಭಾರತದಲ್ಲಿಯೇ 6.7 ಕೋಟಿಗಿಂತಲೂ ಹೆಚ್ಚು ಫೋನ್‌ಗಳು ಬಿಕರಿಯಾಗಿವೆ. ಮತ್ತು ಮಾರಾಟವು ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. (ಆಧಾರ: ಶಓಮಿ ಡೇಟಾ ಸೆಂಟರ್).

ಹಲವು ವಿಶೇಷ ಗುಣಲಕ್ಷಗಳು, ಅತ್ಯುತ್ತಮ ಗುಣಮಟ್ಟ ಹಾಗೂ 5ಜಿ ತಂತ್ರಜ್ಞಾನ ವ್ಯವಸ್ಥೆ ಒಳಗೊಂಡಿರುವ ಫೋನ್‌ ದುಬಾರಿಯಾಗದ ರೀತಿ ಬೆಲೆ ನಿಗದಿ ಪಡಿಸಲಾಗಿದೆ. ಎಸ್‌ಡಿ 695 ಪ್ರೊಸೆಸರ್‌ ಅಳವಡಿಸಲಾಗಿದ್ದು, ಏಳು 5ಜಿ ಬ್ಯಾಂಡ್‌ ವ್ಯವಸ್ಥೆಗೆ ಸಹಕಾರಿಯಾಗಲಿದೆ. 108ಎಂಪಿ ಪ್ರೊ ಗ್ರೇಡ್‌ ಕ್ಯಾಮೆರಾ ಜೊತೆಗೆ ಹೆಚ್ಚುವರಿ ಆಯ್ಕೆಗಳು ಮತ್ತು ಮೋಡ್‌ಗಳನ್ನು ನೀಡಲಾಗಿದೆ. ಇದು ಫೋಟೊಗ್ರಫಿ ಅನುಭವವನ್ನು ಮತ್ತಷ್ಟು ಆಪ್ತವಾಗಿಸಲಿದೆ. 120ಹರ್ಟ್ಸ್‌ ಎಫ್ಎಚ್‌ಡಿ+ಸೂಪರ್‌ ಅಮೊಲೆಡ್‌ ಡಿಸ್‌ಪ್ಲೇನಲ್ಲಿ 1200 ನಿಟ್ಸ್‌ ವರೆಗಿನ ಬ್ರೈಟ್‌ನೆಸ್‌ ಸಾಧ್ಯವಾಗುತ್ತದೆ. ಪ್ರೊ ಗ್ರೇಡ್‌ 67ವ್ಯಾಟ್‌ ಟರ್ಬೊ ಚಾರ್ಜ್‌ ವ್ಯವಸ್ಥೆ ಇರುವುದರಿಂದ ಕೇವಲ 15 ನಿಮಿಷ ಚಾರ್ಜ್‌ ಮಾಡುವ ಮೂಲಕ ಇಡೀ ದಿನ ಫೋನ್‌ ಬಳಸಬಹುದಾಗಿದೆ. 

ಗಮನ ಸೆಳೆಯುವ ಅಮೊಲೆಡ್‌ ಡಿಸ್‌ಪ್ಲೇ ಹೊಂದಿರುವ Redmi Note Pro ಸರಣಿಯ ಫೋನ್‌ಗಳಲ್ಲಿ ಡ್ಯೂಯೆಲ್‌ ಸ್ಟೀರಿಯೊ ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಬಳಕೆದಾರರಿಗೆ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲೇ ನೈಜ ರೀತಿಯ ಮಲ್ಟಿಮೀಡಿಯಾ ಅನುಭವ ಸಿಗಲಿದೆ. 

Redmi Note Pro ಸರಣಿಯ ಫೋನ್‌ಗಳಲ್ಲಿ ಲಿಕ್ವಿಡ್‌ಕೂಲ್‌ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಸ್ಮಾರ್ಟ್‌ಫೋನ್‌ ಬಿಸಿಯಾಗುವುದನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಅತ್ಯಂತ ಪ್ರಮುಖ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಇಂಥ ತಂತ್ರಜ್ಞಾನವನ್ನು ಬಳಸಲಾಗಿರುತ್ತದೆ. ಅತ್ಯುತ್ತಮ ಸಾಧನಗಳನ್ನು ನೀಡುವ ನಿಟ್ಟಿನಲ್ಲಿ ಹೆಜ್ಜೆ ಮುಂದಿಟ್ಟಿರುವ ರೆಡ್‌ಮಿ, Redmi Note 11 Pro ಸರಣಿಯ ಫೋನ್‌ಗಳಲ್ಲಿ ಈ ವ್ಯವಸ್ಥೆಯನ್ನು ಪರಿಚಯಿಸಿದೆ. 

ಮೂಲಗಳ ಪ್ರಕಾರ, ಶಓಮಿ ತನ್ನ 2022ರ ಅತಿದೊಡ್ಡ ಘೋಷಣೆಗಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, 2022ರಲ್ಲಿ ಮೊದಲ ಬಾರಿಗೆ ಉತ್ಪನ್ನ ಘೋಷಣೆಯ ನೇರ ಪ್ರಸಾರ ನಡೆಸಲಿದೆ. 

Redmi Note11 Pro ಮೆಗಾ ಲೈವ್ ಲಾಂಚ್ ಕಾರ್ಯಕ್ರಮವನ್ನು ನೀವು ಮಾರ್ಚ್ 9ರ ಮಧ್ಯಾಹ್ನ 12ಕ್ಕೆ ನೇರ ಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ.
 

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT
ADVERTISEMENT