ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಪ್ರಾಯೋಜಿತ ಲೇಖನ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ51 ಮತ್ತು ಎ71 ಫೋನ್‌ಗಳಲ್ಲಿ ಸ್ಮಾರ್ಟ್‌ಫೋನ್‌ ಖಾಸಗಿತನ ಸುರಕ್ಷತೆಯ 2 ಅದ್ಭುತ ವೈಶಿಷ್ಟ್ಯಗಳು

Last Updated 15 ಅಕ್ಟೋಬರ್ 2020, 17:17 IST
ಅಕ್ಷರ ಗಾತ್ರ

ಯಾರಾದರೂ ನಿಮ್ಮ ಫೋನ್‌ ನೋಡುವುದಾಗಿ ಕೇಳಿದರೆ ಆತಂಕ ಉಂಟಾಗುವುದೇ ಅಥವಾ ಗಾಬರಿಯಾಗುವುದೇ? ಇನ್ನು ಮುಂದೆ ಆಗುವುದಿಲ್ಲ. ನಿಮ್ಮ ಖಾಸಗಿತನದ ಸುರಕ್ಷತೆಗಾಗಿ ಕ್ವಿಕ್‌ ಸ್ವಿಚ್‌ ಮತ್ತು ಇಂಟೆಲಿಜೆಂಟ್‌ ಕಂಟೆಂಟ್‌ ಸಜೆಷನ್ಸ್ ಇಲ್ಲಿವೆ.

ಮಿಲೇನಿಯಲ್ಸ್‌ ಮತ್ತು ಹೊಸ ತಲೆಮಾರಿನವರು ಹಲವು ಕೆಲಸಗಳಿಗೆ ಒಂದೇ ಸಾಧನವನ್ನು ಬಳಸುತ್ತಿದ್ದಾರೆ–ಅದುವೇ ಸ್ಮಾರ್ಟ್‌ಫೋನ್‌. ಸ್ನೇಹಿತರಿಗೆ ಸಂದೇಶ ಕಳುಹಿಸುವುದು, ತಂಡದ ಕಾರ್ಯಗಳನ್ನು ರೂಪಿಸುವುದರಿಂದ ಹಿಡಿದು ಆನ್‌ಲೈನ್‌ ತರಗತಿಗಳನ್ನು ತೆಗೆದುಕೊಳ್ಳುವ ವರೆಗೂ ಎಲ್ಲವೂ ನಿಮ್ಮಿಂದ ಸಾಧ್ಯವಾಗುತ್ತದೆ, ಅದು ನಿಮ್ಮಲ್ಲಿನ ಸ್ಮಾರ್ಟ್‌ಫೋನ್‌ ಮೂಲಕ.

ಆದರೆ, ನಮ್ಮ ಸ್ಮಾರ್ಟ್‌ಫೋನ್‌ಗಳ ಖಾಸಗಿ ಮಾಹಿತಿ ಸುರಕ್ಷತೆಯ ವಿಚಾರ ಬಂದರೆ, ನಾವು ಎಲ್ಲವನ್ನೂ ಬಿಟ್ಟು ಕೊಡುತ್ತೇವೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಜನರು ಒಬ್ಬರಿಗೊಬ್ಬರು ಬಹಳ ಆಪ್ತತರಾಗಿ ಬದುಕು ನಡೆಸುತ್ತೇವೆ. ಕುಟುಂಬದ ಸದಸ್ಯರು ಮತ್ತು ಸಂಬಂಧಿಕರು ನಮ್ಮ ಫೋನ್‌ಗಳಲ್ಲಿನ ಮಾತುಕತೆಗಳನ್ನು ಕೇಳಿಸಿಕೊಳ್ಳುವುದು ಹಾಗೂ ಫೋನ್‌ ಬಳಸುವಾಗ ಇಣುಕಿ ನೋಡುವುದು ಅಪರೂಪದ ಸಂದರ್ಭಗಳೇನೂ ಆಗಿರುವುದಿಲ್ಲ. ವಾಸ್ತವದಲ್ಲಿ, ನಮ್ಮಲ್ಲಿ ಬಹುತೇಕರಿಗೆ ಖಾಸಗಿತನದ ಸುರಕ್ಷತೆ ಎಂಬುದು ಯೋಚಿಸುವುದಕ್ಕೂ ಸಾಧ್ಯವಿಲ್ಲ.

ಹಾಗಾದರೆ, ನಿಮ್ಮ ಸ್ಮಾರ್ಟ್‌ಫೋನ್‌ ನಿಮಗಾಗಿಯೇ ಉಳಿಸಿಕೊಳ್ಳುವುದಾದರೆ?

ಸ್ಯಾಮ್‌ಸಂಗ್‌ ಅದಕ್ಕಾಗಿ ಅತ್ಯಾಧುನಿಕ ಖಾಸಗಿತನ ಸುರಕ್ಷತೆಯ ಎರಡು ಸೌಲಭ್ಯಗಳನ್ನು ಪರಿಚಯಿಸುವ ಮೂಲಕ ಹಾದಿ ತೋರಿದೆ. ಕ್ವಿಕ್‌ ಸ್ವಿಚ್ ಮತ್ತು ಇಂಟೆಲಿಜೆಂಟ್‌ ಕಂಟೆಂಟ್‌ ಸಜೆಷನ್ಸ್‌ ಹೆಸರಿನ ಸೌಲಭ್ಯಗಳು ಖಾಸಗಿತನ ಸುರಕ್ಷತೆಯ ಬಗ್ಗೆ ನಿಮ್ಮಲ್ಲಿರುವ ಆತಂಕವನ್ನು ತಣಿಸಲು ಸಹಕಾರಿಯಾಗಿವೆ. ಈ ಎರಡೂ ಸೌಲಭ್ಯಗಳು ಅತ್ಯಂತ ಹೆಚ್ಚು ಮಾರಾಟವಾಗುತ್ತಿರುವ ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ಫೋನ್‌ಗಳಲ್ಲಿ ಲಭ್ಯವಿದೆ.

'ಕ್ವಿಕ್‌ ಸ್ವಿಚ್‌' ಹೆಸರೇ ಹೇಳುವಂತೆ ಬಹಳ ಸರಳವಾಗಿ ಬಳಸಬಹುದಾಗಿದೆ. ಅದಕ್ಕೆ ಚಾಲನೆ ನೀಡಲು ನೀವು ಫೋನ್‌ನ ಪವರ್‌ ಬಟನ್‌ ಎರಡು ಬಾರಿ ಒತ್ತಿದರೆ ಸಾಕು. ಫೋನ್‌ನ ಗ್ಯಾಲರಿ, ವಾಟ್ಸ್‌ಆ್ಯಪ್‌, ಬ್ರೌಸರ್‌ ಹಾಗೂ ಇನ್ನಿತರೆ ಆ್ಯಪ್‌ಗಳ ಖಾಸಗಿ ಪುಟಗಳಿಂದ ಸಾರ್ವಜನಿಕವಾಗಿ ಕಾಣಿಸಬಹುದಾದ ಪುಟಕ್ಕೆ ಕ್ಷಣಾರ್ಧದಲ್ಲಿ ಬದಲಿಸಿಕೊಳ್ಳಲು ಕ್ವಿಕ್‌ ಸ್ವಿಚ್ ನೆರವಾಗುತ್ತದೆ.

ಈ ಫೀಚರ್‌ ಹಲವು ಕಠಿಣ ಸಂದರ್ಭಗಳಲ್ಲಿ ಹೇಗೆ ನಿಮ್ಮನ್ನು ರಕ್ಷಿಸುತ್ತದೆ ಎಂಬುದನ್ನು ಮುಂದೆ ಓದಿ.

* ಗ್ಯಾಲರಿ: ನೀವು ಒಂದು ಸುಂದರ ಪ್ರವಾಸ ಮುಗಿಸಿ ಆಗ ತಾನೇ ಮನೆಗೆ ಹಿಂದಿರುಗುವಿರಿ ಹಾಗೂ ಅಲ್ಲಿಂದ ನೇರವಾಗಿ ಕಚೇರಿಗೆ ಹೋಗುತ್ತೀರ. ಗುಡ್ಡ ಪ್ರದೇಶದ ಪ್ರವಾಸದಲ್ಲಿನ ಒಳ್ಳೆಯ ಫೋಟೊ, ವಿಡಿಯೊಗಳನ್ನು ನಿಮ್ಮ ಸಹೋದ್ಯೋಗಿಗಳಿಗೆ ತೋರಿಸುತ್ತಿದ್ದೀರ. ಅದೇ ಸಮಯಕ್ಕೆ ನಿಮ್ಮ ಬಾಸ್‌ ನಿಮ್ಮತ್ತಲೇ ಬರುತ್ತಿರುತ್ತಾರೆ. ಫೋನ್‌ನಲ್ಲಿನ ಕೆಲವು ಫೋಟೊಗಳು ನಿಮಗೆ ಮತ್ತು ನಿಮ್ಮ ಸ್ನೇಹಿತರು ಮಾತ್ರವೇ ನೋಡುವಂಥವು ಆಗಿರುತ್ತವೆ. ಬಾಸ್‌ ನಿಮ್ಮ ಸಮೀಪಕ್ಕೆ ಬರುವಷ್ಟರಲ್ಲಿ ಫೋನ್‌ ಪವರ್‌ ಬಟನ್‌ ಎರಡು ಬಾರಿ ಒತ್ತಿದ್ದರೆ ಸಾಕು, ಯಾವುದೇ ಆತಂಕವಿಲ್ಲದೆ ಫೋನ್‌ ನೋಡುತ್ತಲೇ ನೀವು ಬಾಸ್‌ ಜೊತೆಗೆ ಮಾತುಕತೆ ನಡೆಸಬಹುದು.

ರಾಧಿಕಾ ಮದನ್‌ಗೆ ಅವರ ಬಾಸ್‌ನಿಂದ ತಪ್ಪಿಸಿಕೊಳ್ಳಲು ಕ್ವಿಕ್‌ ಸ್ವಿಚ್‌ ಹೇಗೆ ನೆರವಾಗುತ್ತದೆ, ಇಲ್ಲಿದೆ ನೋಡಿ.

* ಚಾಟ್‌: ಪ್ರೇಮಿಗಳ ದಿನದಂದು ನಿಮ್ಮ ಗೆಳಯನೊಂದಿಗೆ ಹೊರಗೆ ಸುತ್ತಾಡಲು ಗುಟ್ಟಾಗಿ ಯೋಜನೆ ಮಾಡುತ್ತಿರುವಿರಿ. ನಿಮ್ಮ ಬೇರೆ ಸ್ನೇಹಿತರಿಗೆ ಅದರ ಬಗ್ಗೆ ವಾಟ್ಸ್‌ಆ್ಯಪ್‌ ಮಾಡಿ ಸಲಹೆ ಕೇಳುತ್ತಿರುತ್ತೀರ. ಅವರು ಕೆಲವು ಸಲಹೆಗಳನ್ನು ಕೊಡುತ್ತಿರುತ್ತಾರೆ ಹಾಗೂ ಅದರಲ್ಲೊಂದು ನಿಮಗೆ ತಕ್ಷಣವೇ ಇಷ್ಟವಾಗುತ್ತದೆ. ಆ ಖುಷಿಯಲ್ಲಿ ನಿಮ್ಮ ಸಮೀಪದಲ್ಲಿಯೇ ನೀವು ಯಾರೊಂದಿಗೆ ಹೊರಗೆ ಸುತ್ತಾಡಲು ಯೋಜನೆ ರೂಪಿಸುತ್ತಿರುವಿರೋ ಅದೇ ಗೆಳೆಯ ನಿಂತಿರುವುದನ್ನು ಗಮನಿಸುವುದೇ ಇಲ್ಲ. ಯಾವುದೇ ಕ್ಷಣದಲ್ಲಿಯೂ ಆತ ನಿಮ್ಮ ಫೋನ್‌ ನೋಡಿ, ನೀವು ಮಾಡುತ್ತಿರುವ ಯೋಜನೆಗಳನ್ನು ನೋಡಿಬಿಡಬಹುದು. ಗಾಬರಿ ಆಗಬೇಡಿ! ಫೋನ್‌ ಪವರ್‌ ಬಟನ್‌ ಎರಡು ಬಾರಿ ಒತ್ತಿ ಹಾಗೂ ವಾಟ್ಸ್‌ಆ್ಯಪ್‌ ಚಾಟ್‌ನ ಖಾಸಗಿ ಸ್ಕ್ರೀನ್‌ನಿಂದ ಎಲ್ಲರಿಗೂ ಕಾಣಿಸಬಹುದಾದ ಸ್ಕ್ರೀನ್‌ಗೆ ಕ್ಷಣಾರ್ಧದಲ್ಲಿ ಸ್ವಿಚ್‌ ಆಗಿ.

ಕ್ವಿಕ್‌ ಸ್ವಿಚ್‌ ಫೀಚರ್‌ ಹೇಗೆ ರಾಧಿಕಾ ಮದನ್‌ ಅವರನ್ನು ಉಳಿಸುತ್ತದೆ ಎಂದು ಈ ವಿಡಿಯೊದಲ್ಲಿ ನೋಡಿ.

* ಬ್ರೌಸರ್‌: ನಿಮ್ಮ ಸೋದರಿಯ ಹುಟ್ಟುಹಬ್ಬಕ್ಕೆ ಉಡುಗೊರೆ ಕೊಡಲು ಸರಿಯಾದ ವಸ್ತುಗಳಿಗಾಗಿ ಫೋನ್‌ ಬ್ರೌಸರ್‌ನಲ್ಲಿ ಹುಡುಕಾಟ ನಡೆಸುತ್ತಿರುವಿರಿ. ನಿಮ್ಮ ಮನೆಗೆ ತಲುಪುವವರೆಗೂ ಅದು ಏನೆಂದು ಆಕೆಗೆ ತಿಳಿಯದಂತೆ ಯೋಜನೆ ಮಾಡಿರುತ್ತೀರ. ನೀವು ಹುಡುಕುತ್ತಿರುವಾಗಲೇ ಆಕೆ ಬಂದು ನಿಮ್ಮ ಫೋನ್‌ ಇಣುಕುವ ಮೊದಲೇ ಎಲ್ಲರೂ ನೋಡಬಹುದಾದ ಬ್ರೌಸರ್‌ ಸ್ಕ್ರೀನ್‌ಗೆ ಸ್ವಿಚ್‌ ಆಗುತ್ತೀರ. ಹಾಗೂ ಆಕೆಗೆ ನೀವು ಏನೆಲ್ಲ ಮಾಡುತ್ತಿರುವಿರಿ ಎಂಬುದರ ಬಗ್ಗೆ ಯಾವುದೇ ಸುಳಿವು ಕೂಡ ಸಿಗುವುದಿಲ್ಲ.

ಸರ್ಪ್ರೈಸ್‌ ಉಳಿಸಲು ಕ್ವಿಕ್‌ ಸ್ವಿಚ್‌ ಫೀಚರ್‌ ರಾಧಿಕಾ ಮದನ್‌ಗೆ ಹೇಗೆ ಮತ್ತೆ ಸಹಕಾರ ನೀಡಿತು, ಇಲ್ಲಿದೆ ನೋಡಿ.

ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ 71 ಫೋನ್‌ಗಳಲ್ಲಿ ಅಳವಡಿಸಲಾಗಿರುವ ಕೃತಕ ಬುದ್ಧಿಮತ್ತೆ (ಎಐ) ವ್ಯವಸ್ಥೆ 'ಇಂಟೆಲಿಜೆಂಟ್‌ ಕಂಟೆಂಟ್‌ ಸಜೆಷನ್ಸ್‌' ಸಂಪೂರ್ಣ ಖಾಸಗಿತನ ಸುರಕ್ಷತೆಯನ್ನು ಖಾತ್ರಿ ಪಡಿಸುತ್ತದೆ.

ಸಾರ್ವಜನಿಕವಾಗಿ ಕಾಣಿಸುವ ಗ್ಯಾಲರಿಯಿಂದ ಖಾಸಗಿ ಗ್ಯಾಲರಿಗೆ ವರ್ಗಾಯಿಸಬೇಕಾದ ಫೋಟೊಗಳ ಸಲಹೆಯನ್ನು ಆನ್‌ ಡಿವೈಸ್‌ ಎಐ ಆಧಾರಿತ ವ್ಯವಸ್ಥೆಯು ತಾನಾಗಿಯೇ ನೀಡುತ್ತದೆ. ಬಳಕೆದಾರರು ಖಾಸಗಿ ಎಂದು ಟ್ಯಾಗ್‌ ಮಾಡಬೇಕಾದ ಫೋಟೊ ಮತ್ತು ಮುಖಗಳನ್ನು ನಿಗದಿ ಪಡಿಸಬೇಕಷ್ಟೇ.

ಒಮ್ಮೆ ಟ್ಯಾಗ್‌ ನಿಗದಿಯಾದರೆ ಸಾಕು, ಎಐ ವ್ಯವಸ್ಥೆ ಕಾರ್ಯಾಚರಣೆ ಆರಂಭಿಸುತ್ತದೆ ಹಾಗೂ ನಿಗದಿತ ಫೋಟೊಗಳಿಗೆ ಅನುಗುಣವಾಗಿ ಗ್ಯಾಲರಿಯ ಇತರೆ ಚಿತ್ರಗಳನ್ನು ಗುರುತಿಸಿ ಖಾಸಗಿ ಫೋಲ್ಡರ್‌ಗೆ ವರ್ಗಾಯಿಸಲು ಸಲಹೆ ಮಾಡುತ್ತದೆ.

ನಿಮ್ಮ ಗ್ಯಾಲಕ್ಸಿ ಎ51 ಮತ್ತು ಎ71 ಸ್ಮಾರ್ಟ್‌ಫೋನ್‌ಗಳಲ್ಲಿ ಈ ಅತ್ಯದ್ಭುತ ಸೌಲಭ್ಯಗಳಿಗೆ ಚಾಲನೆ ನೀಡುವುದು ಹೇಗೆ ಎಂದು ಈ ವಿಡಿಯೊಗಳನ್ನು ನೋಡಿ ತಿಳಿಯಿರಿ.

ಈವರೆಗೂ ಆಲ್ಟ್‌ ಝಡ್‌ ಲೈಫ್‌ ಬಗ್ಗೆ ಕೇಳಿರುವಿರೇ?

ಕ್ವಿಕ್‌ ಸ್ವಿಚ್ ಮತ್ತು ಕಂಟೆಂಟ್‌ ಸಜೆಷನ್ಸ್‌ ಎರಡೂ ಸಂಪೂರ್ಣವಾಗಿ ಆಲ್ಟ್ ಝಡ್‌ ಲೈಫ್‌ ಅನುಭವಿಸಲು ಸಹಕಾರಿಯಾಗುತ್ತವೆ. ಆಲ್ಟ್‌ ಝಡ್‌ ಲೈಫ್‌ನಲ್ಲಿ ನಿಮ್ಮ ಖಾಸಗಿ ಮಾಹಿತಿಗಳನ್ನು ನೀವು ಮಾತ್ರವೇ ತೆರೆದು ನೋಡಲು ಸಾಧ್ಯವಾಗುತ್ತದೆ. ಇದು ಒತ್ತಡದಿಂದ ಮುಕ್ತವಾದ, ಸಂತಸದ ಹಾಗೂ ಮೆಚ್ಚುವಂತಹ ಮಾರ್ಗವಾಗಿದೆ.

ನೀವು ಮನೆಯಲ್ಲಿರಿ ಅಥವಾ ಮೆಟ್ರೊದಲ್ಲಿ ಪ್ರಯಾಣಿಸುತ್ತಿರಿ, ಆಲ್ಟ್‌ ಝಡ್‌ ಲೈಫ್‌ನಲ್ಲಿ ಖಾಸಗಿತನದ ಸುರಕ್ಷತೆಯ ಬಗ್ಗೆ ಚಿಂತಿಸುವ ಅಗತ್ಯವೇ ಇರುವುದಿಲ್ಲ. ಇಷ್ಟಪಟ್ಟ ಫೋಟೊಗಳನ್ನು ತೆಗೆದುಕೊಳ್ಳಲು ಸ್ವಾತಂತ್ರ ನೀಡುತ್ತದೆ, ವಾಟ್ಸ್‌ಆ್ಯಪ್‌ನಲ್ಲಿ ತಡೆಯಿಲ್ಲದಂತೆ ಚಾಟ್‌ ಮುಂದುವರಿಸಬಹುದು ಹಾಗೂ ನಿಮ್ಮ ಇನ್‌ಸ್ಟಾಗ್ರಾಂ ಫೀಡ್‌ನ್ನು ನಿರಾತಂಕವಾಗಿ ಸ್ಕ್ರಾಲ್‌ ಮಾಡಬಹುದು–ಈ ಎಲ್ಲವನ್ನೂ ಖಾಸಗಿತನದ ಸಂಪೂರ್ಣ ಸುರಕ್ಷತೆಯೊಂದಿಗೆ ಅನುಭವಿಸಬಹುದು. ಗ್ಯಾಲಕ್ಸಿ ಎ51 ಮತ್ತು ಎ71 ಫೋನ್‌ಗಳು ಈ ಎಲ್ಲವನ್ನೂ ಖಚಿತಪಡಿಸುತ್ತವೆ.

ಹೋಗಿ ಮತ್ತು ನಿಮಗಾಗಿಯೇ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ51 ಅಥವಾ ಗ್ಯಾಲಕ್ಸಿ ಎ71 ಸ್ಮಾರ್ಟ್‌ಫೋನ್‌ ಪಡೆದುಕೊಳ್ಳಿ ಹಾಗೂ ಮತ್ತೆಂದೂ ಹಿಂದಿರುಗಿ ನೋಡಬೇಡಿ!
 

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT
ADVERTISEMENT