ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಪ್ರಾಯೋಜಿತ ಲೇಖನ

ಸ್ಯಾಮ್‌ಸಂಗ್‌ ಖಾಸಗಿತನದ ಸುರಕ್ಷತೆಯನ್ನು ಗ್ಯಾಲಕ್ಸಿ ಎ51 ಮತ್ತು ಎ71 ಫೋನ್‌ಗಳಲ್ಲಿ ಆಲ್ಟ್‌ ಝಡ್‌ ಲೈಫ್‌ ಮೂಲಕ ಮರುರೂಪಿಸುತ್ತಿದೆ

Last Updated 15 ಅಕ್ಟೋಬರ್ 2020, 17:16 IST
ಅಕ್ಷರ ಗಾತ್ರ

ಬಳಕೆಗೆ ಸುಲಭವಾದ ಪಾವತಿ ವ್ಯವಸ್ಥೆ, ಸ್ಯಾಮ್‌ಸಂಗ್‌ ಪೇ, ಅತ್ಯಾಧುನಿಕ ಮತ್ತು ಹೊಚ್ಚ ಹೊಸ ಕ್ಯಾಮೆರಾ ಸೌಲಭ್ಯಗಳೊಂದಿಗೆ ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ಸ್ಮಾರ್ಟ್‌ಫೋನ್‌ಗಳು ಗೆಲುವು ಸಾಧಿಸಿವೆ.

ನಿಮ್ಮ ಫೋನ್‌ ನೋಡಲು ಯಾರಾದರೂ ಕೇಳಿದಾಗ ನಿಮಗೆ ಸ್ವಲ್ಪ ಮಟ್ಟಿನ ಹಿಂಜರಿಗೆ ಉಂಟಾದ ಸಂದರ್ಭವಂತೂ ಇರಲೇಬೇಕಲ್ಲ. ನೀವೇ ಅತಿಯಾಗಿ ಹೇಳುತ್ತಿದ್ದ ಗೇಮ್‌ನ್ನು ನಿಮ್ಮದೇ ಫೋನ್‌ನಲ್ಲಿ ಆಡಲು ಬಯಸಿದ್ದರೇ, ಅಥವಾ ನೀವು ಹೋಗಿರುವ ಪಾರ್ಟಿಯಲ್ಲಿ ಫೋಟೊ ಕ್ಲಿಕ್ಕಿಸಲು ಫೋನ್‌ ಕೇಳಿದ್ದರೇ? ಫೋನ್‌ ಕೇಳಿದ ಕೂಡಲೇ ನಿಮಗೆ ಕಸಿವಿಸಿಯಾಗಲು ಕಾರಣ ತೀರಾ ಸರಳ–ನಿಮ್ಮ ಫೋನ್‌ನಲ್ಲಿ ಅವರು ಖಾಸಗಿ ಮಾಹಿತಿಯನ್ನು ನೋಡಿಬಿಡಬಹುದು ಎಂಬ ಚಿಂತೆ ಕಾಡಿರುತ್ತದೆ.

ಮತ್ತೊಂದು ಸಂದರ್ಭದಲ್ಲಿ ನೀವು ನಿಮ್ಮ ಫೋನ್‌ನಲ್ಲಿ ಸಂಗಾತಿಯ ಸೆಲ್ಫಿಗೆ ಮೆಚ್ಚುಗೆ ಸೂಚಿಸುತ್ತಿರುತ್ತೀರಿ ಹಾಗೂ ಅದೇ ಸಮಯಕ್ಕೆ ಕುಟುಂಬದ ಸದಸ್ಯರೊಬ್ಬರು ಅಲ್ಲಿಯೇ ಹಾದು ಹೋಗುವಾಗ, ಅದನ್ನು ಇಣುಕಿ ನೋಡುತ್ತ ಹೋದರೆ?

ಇಂಥ ಯಾವುದೇ ಒಂದು ಸಂದರ್ಭ ನಿಮಗೂ ಎದುರಾಗಿದ್ದರೆ, ನಾವು ಮಾತನಾಡುತ್ತಿರುವುದು ಯಾವುದರ ಕುರಿತು ಎಂಬುದು ನಿಮಗೆ ತಿಳಿದಿರುತ್ತದೆ. ನಮ್ಮ ಖಾಸಗಿ ಬದುಕು ಹೊರಗೆ ತೆರೆದುಕೊಂಡರೆ ನಮ್ಮಲ್ಲಿ ಏಳುವ ಕಳವಳದ ಅನುಭವದ ಕುರಿತು ಈ ಮಾತು.

ಆದರೆ, ಇನ್ನು ಮುಂದೆ ನೀವು ಅದರ ಬಗ್ಗೆ ಚಿಂತಿಸಬೇಕಿಲ್ಲ. ನಿಮ್ಮ ರಕ್ಷಣೆಗಾಗಿಯೇ ಇಲ್ಲಿದೆ 'ಆಲ್ಟ್‌ ಝಡ್‌ ಲೈಫ್‌'. ಒತ್ತಡ ರಹಿತವಾದ ಬದುಕಿಗೆ ಇದೊಂದು ಅತ್ಯುತ್ತಮ ಮಾರ್ಗವಾಗಿದೆ. ಇದು ನಿಮ್ಮ ಖಾಸಗಿತನದ ಸುರಕ್ಷತೆಯನ್ನು ಆದ್ಯತೆಯಾಗಿ ಕಾಣುವುದೇ ಆಗಿದೆ.

ಆಲ್ಟ್‌ ಝಡ್‌ ಲೈಫ್‌ನ ಭಾಗವಾಗಿ ಸ್ಯಾಮ್‌ಸಂಗ್‌ ಖಾಸಗಿತನದ ಸುರಕ್ಷತೆಗಾಗಿ ಎರಡು ಉತ್ಕೃಷ್ಟ ಸೌಲಭ್ಯಗಳನ್ನು ಪರಿಚಯಿಸಿದೆ. ಅವುಗಳೇ ಕ್ವಿಕ್‌ ಸ್ವಿಚ್‌ ಮತ್ತು ಇಂಟೆಲಿಜೆಂಟ್‌ ಕಂಟೆಂಟ್‌ ಸಜೆಷನ್ಸ್‌. ಈ ಎರಡೂ ಸೌಲಭ್ಯಗಳು ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ51 ಮತ್ತು ಎ71 ಮಾದರಿಯ ಫೋನ್‌ಗಳಲ್ಲಿ ಮಾತ್ರ ಸಿಗುತ್ತವೆ.

ಈ ಫೀಚರ್‌ಗಳ ಕುರಿತು ಮತ್ತಷ್ಟು ತಿಳಿಯೋಣ.

ನೀವು ಹಿಂದೆಂದೂ ಕಂಡಿರದಂತಹ ಸ್ಮಾರ್ಟ್‌ಫೋನ್‌ ಖಾಸಗಿತನದ ಸುರಕ್ಷತೆ ಇಲ್ಲಿದೆ–

ನೀವು ಮೆಟ್ರೊದಲ್ಲಿ ಪ್ರಯಾಣಿಸುತ್ತಿರುವಿರಿ ಹಾಗೂ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ಗ್ಯಾಲರಿ ನೋಡುತ್ತಿರುತ್ತೀರಿ, ನಿಮ್ಮ ಪಕ್ಕದಲ್ಲೇ ಇರುವ ವ್ಯಕ್ತಿಯು ನಿಮ್ಮ ಫೋನ್‌ ಗ್ಯಾಲರಿಯನ್ನು ಇಣುಕಿ ನೋಡುವುದು ನಿಮಗೆ ಬೇಕಿರುವುದಿಲ್ಲ. ಪ್ರಯಾಣದಲ್ಲಿ ಜನರು ಅಷ್ಟು ಸಮೀಪದಲ್ಲಿರುವುದರಿಂದ ಇಣುಕಿ ನೋಡುವುದು ಸಾಮಾನ್ಯವೇ. ಇಂಥ ಸಮಯದಲ್ಲಿಯೇ ಕ್ವಿಕ್‌ ಸ್ವಿಚ್‌ ರಕ್ಷಣೆಗೆ ಬರುತ್ತದೆ. ಫೋನ್‌ನ ಪವರ್‌ ಬಟನ್‌ ಎರಡು ಬಾರಿ ಒತ್ತುವ ಮೂಲಕ ಗ್ಯಾಲರಿ, ಬ್ರೌಸರ್‌ ಹಾಗೂ ವಾಟ್ಸ್‌ಆ್ಯಪ್‌ನ ಖಾಸಗಿ ಪುಟಗಳಿಂದ ಸಾರ್ವಜನಿಕವಾಗಿ ಕಾಣಿಸಬಹುದಾದ ಸ್ಕ್ರೀನ್‌ಗೆ ಕ್ಷಣಾರ್ಧದಲ್ಲಿ ಬದಲಿಸಿಕೊಳ್ಳಬಹುದು.

ನೀವು ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ51 ಮತ್ತು ಎ71 ಫೋನ್‌ಗಳಲ್ಲಿ ಈ ಸೌಲಭ್ಯಕ್ಕೆ ಹೇಗೆ ಚಾಲನೆ ನೀಡಬಹುದೆಂದು ಈ ಕೆಳಗಿನ ವಿಡಿಯೊದಲ್ಲಿ ವಿವರಿಸಲಾಗಿದೆ, ನೋಡಿ.

ಕ್ವಿಕ್‌ ಸ್ವಿಚ್‌ಗೆ ಧನ್ಯವಾದಗಳು. ಇಣುಕಿ ನೋಡುವ ಸೋದರಿಯಿಂದ ರಾಧಿಕಾ ಮದನ್‌ ಅವರನ್ನೂ ಕ್ವಿಕ್‌ ಸ್ವಿಚ್ ರಕ್ಷಿಸಿದೆ. ಈ ವಿಡಿಯೊ ನೋಡಿ ಇನ್ನಷ್ಟು ತಿಳಿಯಿರಿ.

ನಿಮ್ಮ ಬದುಕನ್ನು ಸರಳಗೊಳಿಸಲು ಇಲ್ಲಿದೆ ಇಂಟೆಲಿಜೆಂಟ್‌ ಕಂಟೆಂಟ್‌ ಸಜೆಷನ್‌. ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ಫೋನ್‌ಗಳಲ್ಲಿ ಸುರಕ್ಷಿತ ಫೋಲ್ಡರ್‌ನಲ್ಲೇ ಅಳವಡಿಸಲಾಗಿರುವ ಕೃತಕ ಬುದ್ಧಿಮತ್ತೆ (ಎಐ) ಸೌಲಭ್ಯ ಇದಾಗಿದೆ. ಇದು ತಾನಾಗಿಯೇ ಖಾಸಗಿ ಮಾಹಿತಿ ಮತ್ತು ಎಲ್ಲರಿಗೂ ಕಾಣಿಸಬಹುದಾದ ಮಾಹಿತಿಗಳನ್ನು ಬೇರ್ಪಡಿಸುತ್ತದೆ.

ಎಐಗೆ ಯಾವುದನ್ನು ಆಯ್ಕೆ ಮಾಡಬೇಕೆಂಬ ಸಲಹೆಯನ್ನು ನೀವು ನಿಗದಿ ಮಾಡಬೇಕಷ್ಟೇ. ಫೋಟೊಗಳಲ್ಲಿ ಕೆಲವು ಮುಖಗಳು, ಇಡೀ ಚಿತ್ರ ಹಾಗೂ ನೀವು ಸುರಕ್ಷಿತವಾಗಿಡಲು ಬಯಸುವ ಬೇರೆ ಯಾವುದನ್ನೂ ನಿಗದಿ ಪಡಿಸಬೇಕು. ಮುಂದಿನ ಕೆಲಸಗಳನ್ನು ಫೋನ್‌ನಲ್ಲಿರುವ ಎಐ ನೋಡಿಕೊಳ್ಳುತ್ತದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ51 ಮತ್ತು ಎ71 ಫೋನ್‌ಗಳಲ್ಲಿ ಈ ಸೌಲಭ್ಯವನ್ನು ನೀವು ಹೀಗೆ ಚಾಲನೆ ನೀಡಬಹುದು; ಕೆಳಗಿನ ವಿಡಿಯೊ ನೋಡಿ.

ನಿಮ್ಮೊಳಗೆ ಅಡಗಿರುವ ಫೋಟೊಗ್ರಾಫರ್‌ ಜಿಗಿದು ಬರಲಿದ್ದಾರೆ!

ಖಾಸಗಿತನ ಸುರಕ್ಷತೆಯ ಈ ಸೌಲಭ್ಯಗಳಿಂದ ಮಾತ್ರವೇ ಗ್ಯಾಲಕ್ಸಿ ಎ51 ಮತ್ತು ಎ71 ಫೋನ್‌ಗಳು ಮಹತ್ವ ಪಡೆದಿಲ್ಲ. ಈ ಫೋನ್‌ಗಳಲ್ಲಿರುವ ನಾಲ್ಕು ಕ್ಯಾಮೆರಾ (ಕ್ವಾಡ್‌ ಕ್ಯಾಮೆರಾ) ಸೆಟ್‌ಅಪ್‌ನಿಂದಾಗಿ ಮೂಡುವ ಫೋಟೊಗಳು ನಿಮ್ಮನ್ನು ಮೋಡಿ ಮಾಡುತ್ತವೆ. ಚಿತ್ರಗಳಲ್ಲಿ ಸಣ್ಣ ವಿವರಗಳೂ ಸ್ಪಷ್ಟವಾಗಿರುತ್ತವೆ ಹಾಗೂ ಗೋಚರಿಸುವ ಬಣ್ಣಗಳಂತೂ ಮುದ ನೀಡುತ್ತವೆ.

ಪಾರ್ಕ್‌ಗೆ ಹೋಗಿ, ಇಲ್ಲವೇ ಮಂದ ಬೆಳಕಿರುವ ರೆಸ್ಟೊರೆಂಟ್‌ಗೆ ಹೋಗಿ, ಅಲ್ಲಿನ ಕಲಾತ್ಮಕತೆ ಮತ್ತು ವಿನ್ಯಾಸಗಳಿಂದ ಮನಸ್ಸಿಗೆ ಖುಷಿ ನೀಡುವ ವಾತಾವರಣವಿರುತ್ತದೆ ಅಥವಾ ಬಣ್ಣದ ಚಿತ್ತಾರಗಳಿಂದ ತುಂಬಿರುವ ರಸ್ತೆಗಳಲ್ಲಿ ಓಡಾಡುತ್ತಿರುತ್ತೀರ, ನಿಮ್ಮ ಈ ಫೋನ್‌ನ ಕ್ಯಾಮೆರಾ ಈ ಎಲ್ಲ ವಾತಾವರಣಗಳಿಗೂ ಹೊಂದಿಕೊಳ್ಳುತ್ತದೆ. ಅತ್ಯುತ್ತಮ ಶಾರ್ಪ್‌ನೆಸ್‌ ಮತ್ತು ಫೋಕಸ್‌, ವಿವರಗಳಿಂದ ಕೂಡಿದ ಫೋಟೊಗಳಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಕಾರಾತ್ಮಕ ಕಮೆಂಟ್‌ಗಳು ತುಂಬಿ ಹೋಗುತ್ತವೆ.

ಸಿಂಗಲ್‌ ಟೇಕ್‌ ಸೌಲಭ್ಯದಿಂದಾಗಿ ನೀವು ಫೋಟೊ ಕ್ಲಿಕ್ಕಿಸುವಾಗ ಸರಿಯಾದ ಫ್ರೇಮ್‌ ಬಗ್ಗೆ ಚಿಂತಿಸುವ ಅಗತ್ಯವೇ ಇರುವುದಿಲ್ಲ. ನಿಮ್ಮ ಸ್ನೇಹಿತರೇನಾದರೂ ಚಿತ್ರ–ವಿಚಿತ್ರ ಫೋಸ್‌ಗಳನ್ನು ನೀಡುವವರಾಗಿದ್ದರೆ ಅಥವಾ ಹೆಚ್ಚು ಓಡಾಟವಿರುವ ಟೆನ್ನಿಸ್‌ ಪಂದ್ಯ ನಡೆಯುತ್ತಿದ್ದರೆ, ಕ್ಯಾಮೆರಾ ಆ್ಯಪ್‌ ತೆರೆದು 'ಸಿಂಗಲ್‌ ಟೇಕ್‌' ಆಯ್ಕೆ ಮಾಡಿ ಶೂಟ್‌ ಮಾಡುತ್ತ ಹೋಗಿ. ಒಂದೇ ಕ್ಲಿಕ್‌ನಲ್ಲಿ 7 ಫೋಟೊಗಳು ಹಾಗೂ 3 ವಿಡಿಯೊಗಳು ಸೆರೆಯಾಗುತ್ತವೆ. ಇವುಗಳಲ್ಲಿ ನಿಮಗೆ ಯಾವುದು ಚೆಂದ ಕಾಣುತ್ತದೆಯೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ಚಿಕ್ಕ ವಿಡಿಯೊ, ಜಿಫ್‌ ಹಾಗೂ ಹಲವು ಸ್ಟೈಲೈಸ್ಡ್‌ ಫೋಟೊಗಳು ಇರುತ್ತವೆ.

ಇದರೊಂದಿಗೆ ನೈಟ್‌ ಹೈಪರ್‌ಲ್ಯಾಪ್ಸ್‌, ಸ್ಮಾರ್ಟ್‌ ಸೆಲ್ಫಿ ಆ್ಯಂಗಲ್‌, ಕ್ವಿಕ್‌ ವಿಡಿಯೊ, ಕಸ್ಟಮ್‌ ಫಿಲ್ಟರ್‌, ರೆಕಾರ್ಡ್‌ ಮಾಡುವಾಗಲೇ ಕ್ಯಾಮೆರಾ ಸ್ವಿಚ್ ಮಾಡುವ ಸೌಲಭ್ಯ ಹಾಗೂ ಎಐ ಗ್ಯಾಲರಿ ಜೂಮ್‌ಗಳು ಒಳಗೊಂಡಿವೆ. ಗ್ಯಾಲಕ್ಸಿ ಎ51 ಮತ್ತು ಗ್ಯಾಲಕ್ಸಿ ಎ71 ಫೋನ್‌ಗಳ ಮೂಲಕ ನೀವು ತೆಗೆಯುವ ಫೋಟೊಗಳು ಬೇರೆಯವರ ಫೋಟೊಗಳಿಗಿಂತ ಉತ್ತಮವಾಗಿರುವುದು ನಿಮಗೆ ಖಾತ್ರಿಯಾಗುತ್ತದೆ.

* ರೆಕಾರ್ಡ್‌ ಮಾಡುವಾಗಲೇ ಹಿಂದಿನಿಂದ ಮುಂದೆ ಅಥವಾ ಮುಂದಿನಿಂದ ಹಿಂದಿನ ಕ್ಯಾಮೆರಾಗೆ ಸ್ವಿಚ್‌ ಮಾಡಿಕೊಳ್ಳುವ ಸೌಲಭ್ಯ ಗ್ಯಾಲಕ್ಸಿ ಎ51 ಫೋನ್‌ನಲ್ಲಿ ಮಾತ್ರ ಲಭ್ಯವಿದೆ.

ಮಧ್ಯಮ ಶ್ರೇಣಿ ಸ್ಮಾರ್ಟ್‌ಫೋನ್‌ ಮಾದರಿಗಳಲ್ಲಿ ಸ್ಯಾಮ್‌ಸಂಗ್‌ ಅಬ್ಬರ

2020ರಲ್ಲಿ ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಎ51 ಮತ್ತು ಎ71 ಸ್ಮಾರ್ಟ್‌ಫೋನ್‌ಗಳು ಮಧ್ಯಮ ಶ್ರೇಣಿ ಫೋನ್‌ ಮಾರುಕಟ್ಟೆಯನ್ನು ಆವರಿಸಿಕೊಂಡಿವೆ. ಈ ಫೋನ್‌ಗಳು ನಿಮ್ಮೊಳಗಿರುವ ಫೋಟೊಗ್ರಾಫರ್‌ನ್ನು ಜಾಗೃತಗೊಳಿಸುತ್ತವೆ, ಅವುಗಳ ಕ್ಯಾಮೆರಾ ಸೌಲಭ್ಯಗಳಿಗೆ ಮೆಚ್ಚುಗೆ ಸಲ್ಲಿಸಲೇಬೇಕು. ಇನ್ನೂ ನಾಕ್ಸ್‌ ಸೆಕ್ಯುರಿಟಿ ಇರುವುದರಿಂದ ನಿಮ್ಮ ಮಾಹಿತಿಗಳ ಸೋರಿಕೆಯ ಬಗ್ಗೆ ಚಿಂತಿಸಬೇಕಿಲ್ಲ ಹಾಗೂ ನಿಮ್ಮ ವ್ಯಾಲೆಟ್‌ ಮನೆಯಲ್ಲಿಯೇ ಮರೆತಿದ್ದರೂ 'ಸ್ಯಾಮ್‌ಸಂಗ್‌ ಪೇ' ಹೊರಗಿನ ಓಡಾಟದಲ್ಲಿ ಸಂಭ್ರಮ ತುಂಬುತ್ತದೆ.

ಸಂಶೋಧನಾ ಸಂಸ್ಥೆ ಸ್ಟ್ರಾಟೆಜಿ ಅನಾಲಿಟಿಕ್ಸ್‌ ಪ್ರಕಾರ, 2020ರ ಮೊದಲ ತ್ರೈಮಾಸಿಕದಲ್ಲಿ ಜಗತ್ತಿನಾದ್ಯಂತ ಅತಿ ಹೆಚ್ಚು ಮಾರಾಟವಾಗಿರುವ ಆ್ಯಂಡ್ರಾಯ್ಡ್‌ ಸಾಧನ 'ಗ್ಯಾಲಕ್ಸಿ ಎ51'. ಎಷ್ಟೊಂದು ಮಾದರಿಗಳ ಫೋನ್‌ಗಳ ನಡುವೆ ಇದೊಂದು ಅತ್ಯುತ್ತಮ ಸಾಧನೆಯೇ ಆಗಿದೆ. 'ಉತ್ಕೃಷ್ಟ ಸ್ಕ್ರೀನ್‌, ಅತ್ಯುತ್ತಮ ಕ್ಯಾಮೆರಾ ಹಾಗೂ ದೀರ್ಘ ಕಾಲದ ವರೆಗೂ ಚಾರ್ಜ್‌ ಉಳಿಸಿಕೊಳ್ಳುವ ಬ್ಯಾಟರಿ' ಗುಣಲಕ್ಷಣಗಳಿಂದಾಗಿ ಈ ಸ್ಮಾರ್ಟ್‌ಫೋನ್‌ಗಳು ಮೇಲಿನ ಸ್ಥಾನದಲ್ಲಿವೆ ಹಾಗೂ ಈ ಫೋನ್‌ಗಳು ನಮ್ಮ ಬದುಕನ್ನು ಬದಲಿಸುತ್ತವೆ.

ಗ್ಯಾಲಕ್ಸಿ ಎ51 ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿದೆ. 6ಜಿಬಿ ರ್‍ಯಾಮ್‌+128ಜಿಬಿ ಸಂಗ್ರಹ ಸಾಮರ್ಥ್ಯದ ಫೋನ್‌ಗೆ ₹22,999 ಹಾಗೂ 8ಜಿಬಿ ರ್‍ಯಾಮ್‌+128ಜಿಬಿ ಸಂಗ್ರಹ ಸಾಮರ್ಥ್ಯದ ಫೋನ್‌ಗೆ ₹24,999 ಬೆಲೆ ನಿಗದಿಯಾಗಿದೆ.

ಇನ್ನೂ ಗ್ಯಾಲಕ್ಸಿ ಎ71 ಮಾದರಿಯು 8ಜಿಬಿ ರ್‍ಯಾಮ್‌+128ಜಿಬಿ ಸಂಗ್ರಹ ಸಾಮರ್ಥ್ಯದಲ್ಲಿ ಮಾತ್ರ ಸಿಗಲಿದ್ದು, ಬೆಲೆ ₹29,499 ಇದೆ.

ಈ ಎಲ್ಲದರೊಂದಿಗೆ ಖಾಸಗಿತನ ಸುರಕ್ಷತೆಯ ಅತ್ಯಾಧುನಿಕ ಸೌಲಭ್ಯಗಳಾದ ಕ್ವಿಕ್‌ ಸ್ವಿಚ್‌ ಮತ್ತು ಇಂಟೆಲಿಜೆಂಟ್‌ ಕಂಟೆಂಟ್‌ ಸಜೆಷನ್ಸ್‌ನಿಂದಾಗಿ ಈ ಫೋನ್‌ಗಳನ್ನು ಆಯ್ಕೆ ಮಾಡಲು ಯೋಚಿಸುವುದೇ ಬೇಕಿಲ್ಲ.

ರಾಧಿಕಾ ಮದನ್‌ ಈಗಾಗಲೇ ಗ್ಯಾಲಕ್ಸಿ ಎ71 ಸ್ಮಾರ್ಟ್‌ಫೋನ್‌ ಬಳಸುತ್ತಿದ್ದಾರೆ ಹಾಗೂ ಇದೀಗ ಅದನ್ನು ಬಳಸುವ ಸಮಯ ನಿಮ್ಮದೂ ಆಗಿದೆ!
 

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT
ADVERTISEMENT