ಬ್ರೆಕ್ಸಿಟ್‌ ವಿಳಂಬ ಕಾನೂನಿಗೆ ಅನುಮೋದನೆ

ಬುಧವಾರ, ಏಪ್ರಿಲ್ 24, 2019
33 °C

ಬ್ರೆಕ್ಸಿಟ್‌ ವಿಳಂಬ ಕಾನೂನಿಗೆ ಅನುಮೋದನೆ

Published:
Updated:

ಲಂಡನ್‌: ಯುರೋಪ್‌ ಒಕ್ಕೂಟದಿಂದ ಬ್ರಿಟನ್‌ ಹೊರಬರುವ (ಬ್ರೆಕ್ಸಿಟ್‌) ಪ್ರಕ್ರಿಯೆ ವಿಳಂಬ ಕಾನೂನಿಗೆ ಬ್ರಿಟನ್‌ ಸಂಸತ್ತಿನ ಕೆಳಮನೆಯಲ್ಲಿ ಗುರುವಾರ ಅನುಮೋದನೆ ದೊರೆಯಿತು. 

ಈ ಮೊದಲು, ಏಪ್ರಿಲ್‌ 12ಕ್ಕೆ ಯುರೋಪ್‌ ಒಕ್ಕೂಟದಿಂದ ಹೊರಬರುವುದಾಗಿ ಬ್ರಿಟನ್‌ ಹೇಳಿತ್ತು. ಈಗ ವಿಳಂಬ ಕಾನೂನಿಗೆ ಅನುಮೋದನೆ ದೊರೆತಿರುವುದರಿಂದ, ಬ್ರಿಟನ್‌ ಪ್ರಧಾನಿ ತೆರೇಸಾ ಮೇಗೆ ಕಾಲಾವಕಾಶ ಸಿಕ್ಕಂತಾಗಿದೆ. 

313 ಸಂಸದರ ಪೈಕಿ, 312 ಸಂಸದರು ಕಾನೂನಿನ ಪರವಾಗಿ ಮತ ಚಲಾಯಿಸಿದ್ದರಿಂದ ಸುಲಭವಾಗಿ ಅಂಗೀಕಾರಗೊಂಡಿತು. ಮೇಲ್ಮನೆಯಲ್ಲಿ (ಹೌಸ್‌ ಆಫ್‌ ಲಾರ್ಡ್ಸ್‌)ಈ ಕಾನೂನಿಗೆ ಅನುಮೋದನೆ ದೊರೆಯಬೇಕಿದೆ. 

ಬ್ರೆಕ್ಸಿಟ್‌ ಬಗ್ಗೆ ನಿರ್ಧರಿಸಲು ಏಪ್ರಿಲ್‌ 12ರ ಗಡುವನ್ನು ವಿಸ್ತರಿಸುವಂತೆ ತೆರೇಸಾ ಮನವಿ ಮಾಡಿಕೊಂಡಿದ್ದರು. ಈ ಮೊದಲು, ಬ್ರೆಕ್ಸಿಟ್‌ ಒಪ್ಪಂದದ ಪ್ರಸ್ತಾವ ಸಂಸತ್ತಿನಲ್ಲಿ ಮೂರು ಬಾರಿ ತಿರಸ್ಕೃತಗೊಂಡಿತ್ತು. ಬ್ರೆಕ್ಸಿಟ್‌ ಪ್ರಕ್ರಿಯೆ ಪೂರ್ಣಗೊಳ್ಳಬೇಕೆಂದರೆ, ಯುರೋಪ್‌ ಒಕ್ಕೂಟದ ನಾಯಕರ ಅವಿರೋಧ ಬೆಂಬಲ ವ್ಯಕ್ತವಾಗಬೇಕಿದೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !