ಬುಧವಾರ, ಡಿಸೆಂಬರ್ 11, 2019
24 °C

ಮತಚಲಾವಣೆ ಮುಂದೂಡಿದ ಮೇ

ಎಪಿ Updated:

ಅಕ್ಷರ ಗಾತ್ರ : | |

Deccan Herald

ಲಂಡನ್: ಬ್ರೆಕ್ಸಿಟ್ ಒಪ್ಪಂದ ಕುರಿತು ಸಂಸತ್ತಿನಲ್ಲಿ ನಡೆಯಬೇಕಿದ್ದ ಮತಚಲಾವಣೆಯನ್ನು ಪ್ರಧಾನಿ ತೆರೇಸಾ ಮೇ ಮುಂದೂಡಿದ್ದಾರೆ. ಒಪ್ಪಂದದಲ್ಲಿ ಬದಲಾವಣೆಗಳನ್ನು ಮಾಡುವಂತೆ ಐರೋಪ್ಯ ಒಕ್ಕೂಟದ (ಇ.ಯು) ನಾಯಕರನ್ನು ಕೋರುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿರುವುದಾಗಿ ಅವರು ಹೇಳಿದ್ದಾರೆ. 

ಆದರೆ ಮತಚಲಾವಣೆಗೆ ಮುಂದಿನ ದಿನಾಂಕವನ್ನು ಅವರಿನ್ನೂ ನಿಗದಿಪಡಿಸಿಲ್ಲ. 

ಸಂಸದರಿಂದ ಮತಸಂಗ್ರಹಕ್ಕೆ ಮುಂದಾದಲ್ಲಿ, ಭಾರಿ ಅಂತರದಿಂದ ಒಪ್ಪಂದ ತಿರಸ್ಕಾರಗೊಳ್ಳಬಹುದು ಎನ್ನುವುದನ್ನು ಅವರು ಒಪ್ಪಿಕೊಂಡಿದ್ದಾರೆ. ಆದರೆ ಉತ್ತರ ಐರ್ಲೆಂಡ್ ಗಡಿ ಯೋಜನೆ ಕುರಿತು ಇ.ಯು ಭರವಸೆ ನೀಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.  

ಆದರೆ, ಒಕ್ಕೂಟದಿಂದ ಹೊರನಡೆಯುವ ಒಪ್ಪಂದದಲ್ಲಿ ಯಾವುದೇ ತಿದ್ದುಪಡಿ ಮಾಡಲಾಗುವುದಿಲ್ಲ ಎಂದು ಇ.ಯು ಅಧ್ಯಕ್ಷ ಡೊನಾಲ್ಡ್ ಟಸ್ಕ್ ಹೇಳಿದ್ದಾರೆ. 

 

ಪ್ರತಿಕ್ರಿಯಿಸಿ (+)