ಗುರುವಾರ , ಅಕ್ಟೋಬರ್ 17, 2019
22 °C

ನ್ಯೂಯಾರ್ಕ್: ಗುಂಡಿನ ದಾಳಿಗೆ ನಾಲ್ವರು ಸಾವು

Published:
Updated:

ನ್ಯೂಯಾರ್ಕ್‌: ಇಲ್ಲಿನ ಬ್ರೂಕ್‌ಲಿನ್‌ನಲ್ಲಿ ಶನಿವಾರ ಮುಂಜಾನೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದು, ಮೂವರು ಗಾಯಗೊಂಡರು ಎಂದು ಪೊಲೀಸ್‌ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ಗುಂಡಿನ ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಶಂಕಿತನನ್ನು ತಕ್ಷಣವೇ ಗುರುತಿಸಲಾಗಿದೆ ಎಂದು ವಕ್ತಾರ ಅದಂ ನವಾರ‍್ರೊ ತಿಳಿಸಿದ್ದಾರೆ. 

74 ಉಟಿಕಾ ಅವೆಯಲ್ಲಿ ಗುಂಡಿನ ದಾಳಿ ನಡೆದಿರುವ ಕುರಿತು ಮುಂಜಾನೆ ದೂರವಾಣಿ ಕರೆ ಬಂದಿತ್ತು. ಘಟನೆ ನಡೆದ ಕಟ್ಟಡಕ್ಕೆ ಲೈಸೆನ್ಸ್‌ ಇದ್ದು, ಹೆಚ್ಚಿನ ಮಾಹಿತಿ ಇಲ್ಲ ಎಂದು ತಿಳಿಸಿದರು.

ಸ್ಥಳದಲ್ಲಿಯೇ ನಾಲ್ವರು ಸತ್ತರು. ಮಹಿಳೆ ಸೇರಿದಂತೆ ಮೂವರು ಗಾಯಗೊಂಡರು. ಮೃತರ ಗುರುತು ತಕ್ಷಣಕ್ಕೆ ಪತ್ತೆಯಾಗಿಲ್ಲ ಎಂದು  ಹೇಳಿದರು.

Post Comments (+)