ಕಾಂಗ್ರೆಸ್ ಸುಳ್ಳು ಹೇಳುವ ಚಾಳಿ ಮುಂದುವರಿಸಿದೆ :ಎನ್.ಮಹೇಶ್

ಮಂಗಳವಾರ, ಏಪ್ರಿಲ್ 23, 2019
29 °C

ಕಾಂಗ್ರೆಸ್ ಸುಳ್ಳು ಹೇಳುವ ಚಾಳಿ ಮುಂದುವರಿಸಿದೆ :ಎನ್.ಮಹೇಶ್

Published:
Updated:
Prajavani

ಚಾಮರಾಜನಗರ: ‘ಕಾಂಗ್ರೆಸ್‌ನವರು ಆರಂಭದಿಂದಲೂ ಚುನಾವಣಾ ಸಂದರ್ಭದಲ್ಲಿ ಸುಳ್ಳು ಹೇಳಿಕೊಂಡು ಅಧಿಕಾರ ಹಿಡಿಯುವಂಥ ಚಾಳಿಯನ್ನು ಈಗಲೂ ಮುಂದುವರಿಸಿದ್ದಾರೆ’ ಎಂದು ಶಾಸಕ ಎನ್‌.ಮಹೇಶ್ ಟೀಕಿಸಿದರು.

ತಾಲ್ಲೂಕಿನ ಕೋಡಿಉಗನೆ ಗ್ರಾಮದಲ್ಲಿ ಬಿಎಸ್‌ಪಿ ಅಭ್ಯರ್ಥಿ ಡಾ.ಶಿವಕುಮಾರ್ ಪರ ಬುಧವಾರ ಏರ್ಪಡಿಸಿದ್ದ ಪ್ರಚಾರದ ಸಭೆಯಲ್ಲಿ ಅವರು ಮಾತನಾಡಿದರು.

ಕೊಳ್ಳೇಗಾಲದಲ್ಲಿ ಕಾಂಗ್ರೆಸ್ ಸೋತರೆ ಅಕ್ಕಿ ಕೊಡಲ್ಲ ಎಂಬ ಹೇಳಿಕೆ ನೀಡುವ ಮೂಲಕ ಜನತೆಗೆ ಸುಳ್ಳು ಹೇಳುತ್ತಿದ್ದಾರೆ. ಆ ಮೂಲಕ ಹಿಂದಿನ ಸುಳ್ಳುಗಳ ಚಾಳಿಯನ್ನು  ಕಾಂಗ್ರೆಸ್‌ನವರು ಚುನಾವಣಾ ಪ್ರಚಾರದ ವೇಳೆ ಬಳಸುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರ ಇರಲಿ ಅಥವಾ ಇಲ್ಲದಿರಲಿ ಹಾಗೂ ಶಾಸಕರು, ಸಚಿವರು ಇಲ್ಲದಿದ್ದರೂ ಸರ್ಕಾರದ ಯೋಜನೆಗಳು ಜಾರಿಯಾಗುತ್ತವೆ. ಯಾವುದೇ ಪಕ್ಷ ಸೋಲಲಿ, ಗೆಲ್ಲಲಿ ಜನತೆಗೆ ಅಕ್ಕಿ ಬಂದೇ ಬರುತ್ತದೆ. ಕಾಂಗ್ರೆಸ್‌ನವರೇ ನೀಡುವುದು ಎಂಬ ಇಲ್ಲಸಲ್ಲದ ಹೇಳಿಕೆಗೆ ಜನತೆ ತಲೆಕೆಡಿಸಿಕೊಳ್ಳಬೇಡಿ ಎಂದು ಸಲಹೆ ನೀಡಿದರು.

ಟೀಕೆ ಅಲ್ಲ ಮನವಿ: ಧ್ರುವನಾರಾಯಣ ಅವರೇ ನೀವು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೀರಾ? ಕ್ಷೇತ್ರದಲ್ಲಿ ಅಪೂರ್ಣಗೊಂಡಿರುವ ಕೆಲಸಗಳು ಪೂರ್ಣಗೊಳ್ಳಲು ಬಿಎಸ್‌ಪಿ ಅಭ್ಯರ್ಥಿಗೆ ಬಿಡಿ. ವಿ.ಶ್ರೀನಿವಾಸಪ್ರಸಾದ್‌ ಅವರೇ ನಿಮಗೆ ವಯಸ್ಸಾಗಿದೆ. ನಮ್ಮ ಅಭ್ಯರ್ಥಿಗೆ ಆಶೀರ್ವಾದ ಮಾಡಿ. ವಿಶ್ರಾಂತಿ ಪಡೆಯಿರಿ ಎಂದು ಟೀಕೆ ಮಾಡದೆ ತಮ್ಮಲ್ಲಿ ಮನವಿ ಮಾಡುತ್ತೇನೆ ಎಂದರು.

‍ಮಾಯಾವತಿ ಪ್ರಧಾನಿಯಾಗಲಿದ್ದಾರೆ: ಪಕ್ಷದಲ್ಲಿ ಬಬ್ಬ ಶಾಸಕನಾಗಿ ಗೆದ್ದು ಸಚಿವರಾಗಿದ್ದು, ಪ್ರಜಾಪ್ರಭುತ್ವದ ಅಧ್ಬುತಗಳಲ್ಲಿ ಒಂದು. ಅದರಂತೆ 38 ಸ್ಥಾನಗಳನ್ನು ಗೆದ್ದು ಜೆಡಿಎಸ್ ಪಕ್ಷದಿಂದ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಅದರಂತೆ ಮಾಯಾವತಿ ಅವರು ಉತ್ತರಪ್ರದೇಶದಲ್ಲಿ 60 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಧಾನಿಯಾಗಲಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಡಾ.ಶಿವಕುಮಾರ್ ಅವರಿಗೆ ಮತದಾರರು ಹೆಚ್ಚಿನ ಮತ ಹಾಕುವ ಮೂಲಕ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.

ಬಿಎಸ್‌ಪಿ ತಾಲ್ಲೂಕು ಅಧ್ಯಕ್ಷ ಆಲೂರು ಮಲ್ಲು, ನಗರ ಘಟಕ ಅಧ್ಯಕ್ಷ ಚಿನ್ನಸ್ವಾಮಿ, ನಗರಸಭಾ ಸದಸ್ಯ ಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಜಿಲ್ಲಾ ಸಮಿತಿ ಸದಸ್ಯ ಬ್ಯಾಡಮೂಡ್ಲು ಬಸವಣ್ಣ, ನಿವೃತ್ತ ತಹಸೀಲ್ದಾರ್ ಕೃಷ್ಣಯ್ಯ, ಬಿವಿಎಸ್ ಜಿಲ್ಲಾ ಸಂಯೋಜಕ ಪರ್ವತ್‌ ರಾಜ್, ವಾಸು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !