ಚೇಷ್ಟೆಯ ಮಾತಿಗೆ ಸೀಮಿತವಾದ ಜಿಗಜಿಣಗಿ; ದೂರು

ಭಾನುವಾರ, ಜೂನ್ 16, 2019
32 °C

ಚೇಷ್ಟೆಯ ಮಾತಿಗೆ ಸೀಮಿತವಾದ ಜಿಗಜಿಣಗಿ; ದೂರು

Published:
Updated:

ವಿಜಯಪುರ: ‘ದಶಕದಿಂದ ಸಂಸತ್‌ನಲ್ಲಿ ವಿಜಯಪುರ ಪ್ರತಿನಿಧಿಸಿದ ರಮೇಶ ಜಿಗಜಿಣಗಿ ಯಾವೊಂದು ಅಭಿವೃದ್ಧಿ ಕೆಲಸ ಮಾಡಿಲ್ಲ. ಕೇವಲ ಚೇಷ್ಟೆಯ ಮಾತುಗಳನ್ನಾಡುತ್ತಲೇ ಕಾಲ ಕಳೆದಿದ್ದಾರೆ’ ಎಂದು ಬಿಎಸ್‌ಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಶ್ರೀನಾಥ ಪೂಜಾರಿ ದೂರಿದರು.

‘ಎರಡು ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಬಹುದಿತ್ತು. ಕೈಗಾರಿಕೆ ಸ್ಥಾಪನೆ ಮೂಲಕ ನಿರುದ್ಯೋಗ ತೊಲಗಿಸಬಹುದಿತ್ತು. ಆದರೆ ಜಿಗಜಿಣಗಿ ಮಜಾಕ್ ಮಾಡಿಕೊಂಡೇ ಕಾಲ ಕಳೆದರು’ ಎಂದು ಬುಧವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಬಿಜೆಪಿ, ಕಾಂಗ್ರೆಸ್‌ನ ದುರಾಡಳಿತಕ್ಕೆ ಜನರು ಬೇಸತ್ತಿದ್ದಾರೆ. ಅಹಿಂದ ವರ್ಗದಿಂದ ಹಿಡಿದು ಎಲ್ಲರ ಕಲ್ಯಾಣ ಬಯಸುವ ಏಕೈಕ ಪಕ್ಷ ಬಹುಜನ ಸಮಾಜ ಪಕ್ಷ. ಮಾಯಾವತಿ ಅವರನ್ನು ಪ್ರಧಾನಿಯಾಗಿಸಬೇಕಿರುವುದು ಇಂದಿನ ಅಗತ್ಯವಾಗಿದೆ’ ಎಂದರು.

‘ಪ್ರಚಾರಕ್ಕಾಗಿ ಮಾಯಾವತಿ ಬರಲಿದ್ದಾರೆ. ಗುರುವಾರ ನಾಮಪತ್ರ ಸಲ್ಲಿಸುವೆ’ ಎಂದು ಶ್ರೀನಾಥ ಪೂಜಾರಿ ಇದೇ ಸಂದರ್ಭ ಹೇಳಿದರು.

ಬಿಎಸ್‌ಪಿ ಮುಖಂಡ ಡಾ.ದಸ್ತಗೀರ ಮುಲ್ಲಾ ಮಾತನಾಡಿ ‘ಚಾಮರಾಜನಗರ, ಚಿಕ್ಕಬಳ್ಳಾಪುರ, ವಿಜಯಪುರ, ರಾಯಚೂರು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ’ ಎಂದರು.

ಕಾಮಣ್ಣ ಗಂಗನಹಳ್ಳಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !