‘ಛಲವಾದಿ’ಗೆ ಬಿಎಸ್‌ಪಿ ಟಿಕೆಟ್‌

ಶನಿವಾರ, ಮಾರ್ಚ್ 23, 2019
24 °C

‘ಛಲವಾದಿ’ಗೆ ಬಿಎಸ್‌ಪಿ ಟಿಕೆಟ್‌

Published:
Updated:

ವಿಜಯಪುರ: ‘ದಲಿತ ಸಮುದಾಯದ ಬಲಗೈ ಗುಂಪಿನ ಛಲವಾದಿ ಸಮಾಜವನ್ನು ಯಾರೊಬ್ಬರೂ ಪರಿಗಣಿಸಿಲ್ಲ. ಬಿಎಸ್‌ಪಿ ಈ ಸಮಾಜದ ವ್ಯಕ್ತಿಗೆ ಲೋಕಸಭಾ ಚುನಾವಣೆಯ ಟಿಕೆಟ್‌ ನೀಡಲಿದೆ’ ಎಂದು ಪಕ್ಷದ ಮುಖಂಡ ಸುಧಾಕರ ಕನಮಡಿ ತಿಳಿಸಿದರು.

‘ಛಲವಾದಿ ಸಮುದಾಯ ಸಹ ದಲಿತರ ಶ್ರೇಯೋಭಿವೃದ್ಧಿಗಾಗಿಯೇ ಸ್ಥಾಪಿತಗೊಂಡಿರುವ ಬಿಎಸ್‌ಪಿಯನ್ನು ಬೆಂಬಲಿಸಬೇಕು. ಮಾಯಾವತಿಯವರನ್ನು ಪ್ರಧಾನಿಯನ್ನಾಗಿಸಲು ಸಹಕಾರ ಕೊಡಬೇಕು’ ಎಂದು ಶುಕ್ರವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

‘ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ನಡೆದ ತಪ್ಪು ಮತ್ತೊಮ್ಮೆ ಮರುಕಳಿಸಲ್ಲ. ಪಕ್ಷದ ಸಿದ್ಧಾಂತ ಸರಿಯಿವೆ. ಕೆಲ ಮುಖಂಡರ ಸ್ವಾರ್ಥಕ್ಕೆ ಬಲಿಯಾದೆವು. ಈ ಬಾರಿ ಅಡಿವೆಪ್ಪ ಸಾಲಗಲ್ಲ ಅವರಂಥವರಿಗೆ ಬಿಎಸ್‌ಪಿ ಮಣೆ ಹಾಕಲ್ಲ’ ಎಂದು ಸುಧಾಕರ ಕನಮಡಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಕಡಿಮೆಯಿದೆ. ನಮಗೆ ಮೇಲಿನಿಂದ ದುಡ್ಡು ಬರಲ್ಲ. ದುಡಿದು ಪಕ್ಷ ಸಂಘಟಿಸಬೇಕು. ಇದರ ನಡುವೆ ಸಂಸಾರವನ್ನು ತೂಗಿಸಿಕೊಂಡು ಹೋಗಬೇಕು. ಈ ದೇಶದ ಮೂಲ ನಿವಾಸಿಗಳು ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂಬ ಹಠಕ್ಕೆ ಬಿಎಸ್‌ಪಿ ಸಂಘಟಿಸುತ್ತಿದ್ದೇವೆ’ ಎಂದು ಕನಮಡಿ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಗುಬ್ಬೇವಾಡ, ಪ್ರಧಾನ ಕಾರ್ಯದರ್ಶಿ ಮಲ್ಲು ಬಿದರಿ, ವಿಭಾಗ ಉಸ್ತುವಾರಿ ಯಶವಂತ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !